ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Life after corona: ಕೊರೊನಾ ಕೊಟ್ಟ ಹೊಡೆತ ಮರೆಯುವಂತಿಲ್ಲ

By ಚೇತನಾ ಜೋಯಿಸ್, ಪತ್ರಕರ್ತೆ
|
Google Oneindia Kannada News

ಬಹುಶಃ ವಿಶ್ವ ಕಂಡೂ ಕೇಳರಿಯದ ಕಾಯಿಲೆಯೊಂದು ಮನುಕುಲವನ್ನೇ ಈ ಪರಿ ಕಾಡುತ್ತದೆ ಎಂದು ಯಾರೂ ಕನಸಿನಲ್ಲಿಯೂ ಊಹಿಸಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮುಟ್ಟಿದರೆ ಅಂಟುವ, ಕೆಮ್ಮಿದರೆ ಹೊಮ್ಮುವ ಇಂತಹ ರೋಗವೊಂದಿದೆ ಎಂದು ನಾವು ನಂಬುವ ಸ್ಥಿತಿಗೆ ಬರುವ ವೇಳೆಗಾಗಲೇ ನೆರೆ ರಾಷ್ಟ್ರ ಚೀನಾದಲ್ಲಿ ಸಾವಿರಾರು ಮಂದಿ ಪ್ರಾಣ ತೆತ್ತಿದ್ದರು.

ಕೊರೊನಾದಂತಹ ರೋಗವನ್ನು ಮತ್ತು ಅದು ತಂದೊಡ್ಡಲಿರುವ ಪರಿಣಾಮವನ್ನು ಯಾರೂ ಊಹಿಸಿರಲೇ ಇಲ್ಲ. ಇಂತಹ ಕಾಣದ ಕಾಯಿಲೆಯ ರುದ್ರ ನರ್ತನಕ್ಕೆ ಜಗತ್ತೇ ಬೆಚ್ಚಿ ಬಿದ್ದಿದೆ. ಈ ನಡುವೆಯೂ ರೋಗದ ವಿಷ ವರ್ತುಲದಿಂದ ಜೀವವನ್ನು ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಈಗ ನಮ್ಮ ಮುಂದೆ ಇರುವುದು ಒಂದೇ ಗುರಿ. ಅದು ಕೊರೊನಾವನ್ನು ಹೊಡೆದೊಡಿಸಿ ಜೀವ ಉಳಿಸಿಕೊಳ್ಳುವುದಾಗಿದೆ.

Life after corona: ಕೊರೊನಾ ಕಲಿಸಿದೆ ಹೋರಾಡುವ ಕಲೆ...Life after corona: ಕೊರೊನಾ ಕಲಿಸಿದೆ ಹೋರಾಡುವ ಕಲೆ...

ಭಾರತದಲ್ಲಿ ಕಳೆದೊಂದೂವರೆ ತಿಂಗಳ ಹಿಂದಷ್ಟೇ ಕಾಣಿಸಿಕೊಂಡ ಕೊರೊನಾ ಆದಷ್ಟು ಶೀಘ್ರವಾಗಿ ತನ್ನ ಕಬಂಧ ಬಾಹುವನ್ನು ಚಾಚುವ ಸೂಚನೆ ನೀಡಿತು. ಅದಾಗಲೇ ಎಚ್ಚೆತ್ತುಕೊಂಡು ಸೋಂಕು ನಿಯಂತ್ರಣಕ್ಕಾಗಿ ಜನಸಾಮಾನ್ಯ ಸೇರಿದಂತೆ ಸರ್ಕಾರ, ವೈದ್ಯರು, ಪೊಲೀಸರು, ಅಧಿಕಾರಿಗಳು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಹಲವು ಸಂಕಷ್ಟಗಳ ನಡುವೆಯೂ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಜೊತೆಗೆ ಜೀವ ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಹೋರಾಟ ಮಾಡುತ್ತಿದ್ದಾರೆ.

ಈ ಅನುಭವವೇ ಜೀವನಕ್ಕೆ ಪಾಠವಾಗಲಿದೆ

ಈ ಅನುಭವವೇ ಜೀವನಕ್ಕೆ ಪಾಠವಾಗಲಿದೆ

ಈ ಹೋರಾಟದ ಫಲವಾಗಿ ಕೊರೊನಾ ಸೋಂಕು ನಿಯಂತ್ರಣವಾಗುತ್ತಿದೆ. ಈ ಸಂಘಟಿತ ಹೋರಾಟಕ್ಕೆ ಜಯ ಕಟ್ಟಿಟ್ಟ ಬುತ್ತಿ. ಆದರೆ ಕೊರೊನಾ ಸಂದರ್ಭದಲ್ಲಿ ಅನುಭವಿಸಿರುವ ಸಂಕಷ್ಟ ಜೀವನದ ಪಾಠವಾಗಲಿದೆ ಎಂದರೆ ಅತಿಶಯೋಕ್ತಿಯಲ್ಲ. ಇದುವರೆಗೆ ನಾವು ಬರೀ ಕೊರೊನಾ ಭೀತಿಯಲ್ಲಿದ್ದೆವು. ಮುಂದಿನ ದಿನಗಳು ಕೊರೊನಾ ಭೀತಿ ಜತೆಗೆ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಗಳು, ಆರ್ಥಿಕ ಸಂಕಷ್ಟಗಳು, ಉದ್ಯೋಗ ಸಮಸ್ಯೆಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೀಗೆ. ಒಂದೇ ಎರಡೇ ನೂರಾರು ಸಮಸ್ಯೆಗಳು ನಮ್ಮ ಹೆಗಲೇರಲಿವೆ ಎಂಬುದೂ ನಮ್ಮ ಗಮನದಲ್ಲಿರಬೇಕು.

ಸರ್ಕಾರ ನೀಡುವ ಸಲಹೆ ಸೂಚನೆ ಪಾಲಿಸಿ

ಸರ್ಕಾರ ನೀಡುವ ಸಲಹೆ ಸೂಚನೆ ಪಾಲಿಸಿ

ಕೊರೊನಾ ವೈರಸ್ ವೈದ್ಯಲೋಕಕ್ಕೆ ಈ ಕ್ಷಣಕ್ಕೆ ಸವಾಲಿನಂತೆ ಕಂಡು ಬಂದರೂ ಅದನ್ನು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಇನ್ನೊಂದಷ್ಟು ಸಮಯಬೇಕು. ಅಷ್ಟೇ ಅಲ್ಲ ಮನೋಸ್ಥೈರ್ಯ, ಸರ್ಕಾರ ನೀಡುವ ಸಲಹೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾದ ಕರ್ತವ್ಯವು ನಮ್ಮದಾಗಿದೆ. ವಿಶ್ವಕ್ಕೆ ಆಯುರ್ವೇದ ಪದ್ಧತಿಯನ್ನು ಕೊಡುಗೆಯಾಗಿ ನೀಡಿದ ಭಾರತ ಮುಂದಿನ ದಿನಗಳಲ್ಲಿ ಕೊರೊನಾಗೆ ಔಷಧಿ ಕಂಡು ಹಿಡಿಯುವ ದಿನ ದೂರವಿಲ್ಲ. ಕೊರೊನಾ ನಿಯಂತ್ರಣದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿ ವಿಶ್ವವೇ ಇತ್ತ ತಿರುಗಿ ನೋಡುವಂತೆ ಮಾಡಿರುವುದು ಭಾರತೀಯರಾದ ನಮ್ಮ ಪಾಲಿಗೆ ಹೆಮ್ಮೆಯ ವಿಷಯ.

#LifeAfterCorona: ಕೊಳ್ಳುಬಾಕತನ ಕಮ್ಮಿ ಮಾಡಿ, ಪ್ರೀತಿ ಬಾಂಧವ್ಯ ಬೆಳೆಸಿ#LifeAfterCorona: ಕೊಳ್ಳುಬಾಕತನ ಕಮ್ಮಿ ಮಾಡಿ, ಪ್ರೀತಿ ಬಾಂಧವ್ಯ ಬೆಳೆಸಿ

ಮಧ್ಯಮ ವರ್ಗಕ್ಕೆ ಬಹು ದೊಡ್ಡ ಪೆಟ್ಟು

ಮಧ್ಯಮ ವರ್ಗಕ್ಕೆ ಬಹು ದೊಡ್ಡ ಪೆಟ್ಟು

ಲಾಕ್ ಡೌನ್ ಸಡಿಲಿಕೆ ನಂತರವೂ ಜನ ಸಾಮಾನ್ಯ ಜೀವನ ನಡೆಸುವುದು ಸುಲಭವಾಗಿರುವುದಿಲ್ಲ. ಈಗೇನು ಮಾಡುತ್ತಿದ್ದೇವೆಯೋ ಅದನ್ನು ಚಾಚೂ ತಪ್ಪದೆ ನಮ್ಮ ಮಿತಿಯೊಳಗೆ ಮುಂದುವರೆಸಲೇಬೇಕಾಗಿದೆ. ಕೊರೊನಾ ಸೋಂಕಿನ ಆರ್ಭಟದಲ್ಲಿ ಸಿಲುಕಿ ನಲುಗಿದ ನಮಗೆ ಮುಂದಿನ ಬದುಕು ಸುಲಭ ಎನ್ನಲಾಗದು. ಅದು ಸಂಕಷ್ಟದ ಬದುಕು ಎಂಬುದನ್ನು ನಿಸ್ಸಂದೇಹದಿಂದ ಹೇಳಬಹುದಾಗಿದೆ. ಬಡವರು ಇನ್ನಷ್ಟು ಬಡವರಾಗುವ, ಮಧ್ಯಮ ವರ್ಗದವರು ಅಸಹಾಯಕರಾಗುವ, ಶ್ರೀಮಂತರು ಮತ್ತು ಆಳುವ ವರ್ಗಗಳು ಬಡವ ಮತ್ತು ಮಧ್ಯಮ ವರ್ಗದ ಮೇಲೆ ಸವಾರಿ ಮಾಡುವ ಕಾಲಗಳು ಬಂದರೆ ಅಚ್ಚರಿ ಪಡಬೇಕಾಗಿಲ್ಲ. ಇದಕ್ಕೆ ಅನೇಕ ಕಾರಣಗಳನ್ನು ನೀಡಬಹುದಾಗಿದೆ.

ದುಡಿಮೆ ಅನಿವಾರ್ಯ

ದುಡಿಮೆ ಅನಿವಾರ್ಯ

ಮಧ್ಯಮ ವರ್ಗದವರು ತಮ್ಮ ದುಡಿಮೆಗೆ ತಕ್ಕಂತೆ ಕೆಲವು ಯೋಜನೆಗಳನ್ನೂ ಹಾಕಿಕೊಂಡಿರುತ್ತಾರೆ. ಅವರಿಗೆ ದುಡಿಮೆ ಅನಿವಾರ್ಯ. ಹಾಗಾಗಿ ಅವರಿಗೆ ಕೆಲಸ ಅಗತ್ಯ. ಆದರೆ ಉದ್ದಿಮೆಗಳು, ನಷ್ಟದಲ್ಲಿರುವ ಕಾರಣ ಉದ್ಯೋಗದಾತರು ಅದನ್ನೇ ನೆಪ ಮಾಡಿಕೊಂಡು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಬಹುದು ಅಥವಾ ವೇತನ ಕಡಿತಕ್ಕೆ ಮುಂದಾಗಬಹುದು. ಉದ್ಯೋಗ ಸಂಬಂಧ ನೇಮಕ ಪ್ರಕ್ರಿಯೆ ನಿಲ್ಲಿಸಬಹುದು. ಇದರಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಬಹುದು. ಇಷ್ಟೇ ಅಲ್ಲ ಕೊರೊನಾದ ಸಂಕಷ್ಟವನ್ನೇ ತಮ್ಮ ಅಸ್ತ್ರವಾಗಿಟ್ಟುಕೊಂಡು ಕೆಳವರ್ಗದ ಮೇಲೆ ಪ್ರಬಲರು ಗದಾಪ್ರಹಾರ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ.

#LifeAfterCorona: ನಿಮಗಾಗಿ, ನಿಮ್ಮವರ ಒಳಿತಿಗಾಗಿ ಮುಂಜಾಗ್ರತೆ ವಹಿಸಿ#LifeAfterCorona: ನಿಮಗಾಗಿ, ನಿಮ್ಮವರ ಒಳಿತಿಗಾಗಿ ಮುಂಜಾಗ್ರತೆ ವಹಿಸಿ

ಕೊಳ್ಳುಬಾಕ ಸಂಸ್ಕೃತಿ ಕೈ ಬಿಡುವುದೇ ದಾರಿ

ಕೊಳ್ಳುಬಾಕ ಸಂಸ್ಕೃತಿ ಕೈ ಬಿಡುವುದೇ ದಾರಿ

ಈಗಾಗಲೇ ಸರ್ಕಾರ, ಬೃಹತ್ ಉದ್ಯಮದಿಂದ ಆರಂಭವಾಗಿ ಕಟ್ಟ ಕಡೆಯ ಹಳ್ಳಿಯ ರೈತನವರೆಗೆ ಹಲವು ರೀತಿಯಲ್ಲಿ ಕೊರೊನಾದಿಂದ ನಷ್ಟ ಅನುಭವಿಸಿದ್ದಾರೆ. ಜತೆಗೆ ಸರಾಗವಾಗಿ ನಡೆದುಕೊಂಡು ಹೋಗುತ್ತಿದ್ದ ಜನಜೀವನದಲ್ಲಿ ಏರುಪೇರಾಗಿದೆ. ಅದರ ದಿಕ್ಕುಗಳು ಕೂಡ ಬದಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಅಗತ್ಯ ವಸ್ತುಗಳು ತಲುಪಿ ಮೂರು ಹೊತ್ತು ಹೊಟ್ಟೆಗೆ ಹಿಟ್ಟು ಸಿಕ್ಕಿದರೆ ಸಾಕು. ಉಳಿದುದನ್ನು ಮತ್ತೆ ನೋಡೋಣ ಎಂಬ ಮನಸ್ಥಿತಿಗೆ ತಲುಪಿದ್ದಾರೆ. ಪ್ರವಾಸೋದ್ಯಮ ಸುಧಾರಿಸದೆ ಹೋದರೆ ಅದನ್ನೇ ಅವಲಂಬಿಸಿರುವ ಹಲವು ಉದ್ದಿಮೆಗಳು ಮತ್ತು ಅದನ್ನೇ ನಂಬಿಕೊಂಡಿರುವ ಲಕ್ಷಾಂತರ ಮಂದಿಯ ಬದುಕು ಕತ್ತಲೆಗೆ ಜಾರಲಿದೆ.
ನಾವು ಎಚ್ಚೆತ್ತುಕೊಳ್ಳಲೇ ಬೇಕಾಗಿದೆ.

ಇದೇ ಮೊದಲ ಬಾರಿಗೆ ಜಾಗತಿಕವಾಗಿ ಕೊರೊನಾದಂತಹ ಮಹಾಮಾರಿ ಎದುರಾಗಿರುವ ಕಾರಣದಿಂದ ಮತ್ತು ಅದು ನೀಡಿದ ಹೊಡೆತವನ್ನು ನಾವು ಮರೆಯುವಂತಿಲ್ಲ. ಇದರಿಂದ ಇತಿಮಿತಿಯ ಜೀವನ ಶೈಲಿ ಅಳವಡಿಸಿಕೊಳ್ಳುವುದು, ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು, ಆಗಿರುವ ನಷ್ಟ ಭರಿಸುವತ್ತ ಚಿಂತಿಸುವುದು, ಅಗತ್ಯವಲ್ಲದನ್ನು ಕೈಬಿಡುವುದು. ಕೊಳ್ಳುಬಾಕ ಸಂಸ್ಕೃತಿಯಿಂದ ಹೊರಬರುವುದು ಇಂದಿನ ಅತ್ಯಗತ್ಯವಾಗಿದೆ. ಇದರ ಜೊತೆಗೆ ಭವಿಷ್ಯದಲ್ಲಿ ಇಂತಹದ್ದೇ ಸಮಸ್ಯೆ ಎದುರಾದರೆ ಅದನ್ನು ನಿಭಾಯಿಸುವ ಸಲುವಾಗಿ ಮಾನಸಿಕವಾಗಿ ಸಿದ್ಧರಾಗುವುದು, ಲಾಕ್ ಡೌನ್ ನಂತಹ ಹೊಸ ಸಾಮೂಹಿಕ ಸ್ಪಂದನೆಗೆ ಬೆಂಬಲ ನೀಡುವುದು ಅನಿವಾರ್ಯವಾಗಿದೆ.

English summary
Journalist Chethana Jois shared her opinion on how will be the life after corona menace
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X