ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Life after corona: ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ!

By ನಾನಾ. ಮದರಕಲ್ಲ, ಶಿಕ್ಷಕ ತರಬೇತಿದಾರರು
|
Google Oneindia Kannada News

ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನವನ್ನು ಮುಂದುವರೆಸುತ್ತಾ, ಈ ದಿನ ಬೆಂಗಳೂರಿನ ಶಿಕ್ಷಕ ತರಬೇತುದಾರ ನಾನಾ ಮದರಕಲ್ಲ ಅವರ ಅಭಿಪ್ರಾಯ, ಅನುಭವ ಅನಿಸಿಕೆ ಇಲ್ಲಿದೆ.. ಇದು ಈ ಸರಣಿಯ 19ನೇ ಲೇಖನವಾಗಿದೆ.

ಓದುಗರೇ, ನೀವು ನಿಮ್ಮ ಉತ್ತರಗಳನ್ನು ನಮಗೆ ಕಳಿಸಬಹುದು. ಅದನ್ನು ಇದೇ ಸರಣಿಯಲ್ಲಿ 'ಒನ್‌ಇಂಡಿಯಾ ಕನ್ನಡ' ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ. ಉತ್ತರಗಳು ಬರಹ ರೂಪದಲ್ಲಿ ಅಥವಾ ವಿಡಿಯೋ ಹೇಳಿಕೆಗಳ ರೂಪದಲ್ಲಿ ಅಥವಾ ಎರಡೂ ರೀತಿಯಲ್ಲಿ ಇದ್ದರೂ ಸಮಸ್ಯೆ ಇಲ್ಲ.

Life After Corona: ಒಳ್ಳೆ ದಿನಗಳು ನಮಗಾಗಿ ಕಾಯ್ತಾ ಇವೆ ಎಂಬ ನಂಬಿಕೆLife After Corona: ಒಳ್ಳೆ ದಿನಗಳು ನಮಗಾಗಿ ಕಾಯ್ತಾ ಇವೆ ಎಂಬ ನಂಬಿಕೆ

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ

ನಮ್ಮ ಶೈಕ್ಷಣಿಕ ಪ್ರಕ್ರಿಯೆಗಳು ನಿಂತು ಹೋಗಿವೆ

ನಮ್ಮ ಶೈಕ್ಷಣಿಕ ಪ್ರಕ್ರಿಯೆಗಳು ನಿಂತು ಹೋಗಿವೆ

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಇದು ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶದ ಸಮಯ. ಆದರೆ ಕೊರೊನಾ ಎಂಬ ಮಾಹಾಮಾರಿಯಿಂದಾಗ ಹಲವು ನಮ್ಮ ಶೈಕ್ಷಣಿಕ ಪ್ರಕ್ರಿಯೆಗಳು ನಿಂತು ಹೋಗಿವೆ. ಇದೊಂದು ರೀತಿ ಕೃಷಿಕ ಇಡೀ ವರ್ಷ ಶ್ರಮ ಹಾಕಿ, ಬೇಸಾಯ ಮಾಡಿ ಫಲ ಪಡೆಯುವ ಹೊತ್ತಿಗೆ ನೆರೆ ಬಂದು ಕೊಚ್ಚಿಕೊಂಡು ಹೊದ ಅನುಭವವಾದಂತಾಗಿದೆ. ಇರಲಿ, ಪ್ರಕೃತಿ ನೀಡಿದ ಈ ಪರೀಕ್ಷೆಯಲ್ಲಿ ನಾವು ಗೆದ್ದು ಬರಬೇಕಾಗಿದೆ. ಈಗ ನಮಗೆ ಬೇರೆ ಯಾವ ಆಯ್ಕೆಗಳಿಲ್ಲ.

ಇದೊಂದು ಶಿಕ್ಷೆ ಎಂದು ಭಾವಿಸುವ ಅಗತ್ಯವಿಲ್ಲ. ಇರುವ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸಬೇಕಾಗಿದೆ. ಇಷ್ಟು ದಿನ ನಾವು ಬಾಹ್ಯ ಜಗತ್ತಿನೊಂದಿಗೆ ವ್ಯವಹರಿಸುವಾಗ ನಾವು ನಮ್ಮ ಬಗ್ಗೆ ಆಲೋಚಿಸಲು , ಸಮಯವನ್ನು ಹೊಂದಿಸಲು ಪ್ರಯತ್ನಿಸಲಿಲ್ಲ. ಈಗ ಆ ಅವಕಾಶ ತಾನಾಗೆ ಒದಗಿ ಬಂದಿದೆ. ನಮ್ಮ ಬಗ್ಗೆ ನಾವೇ ಆಲೋಚಿಸುವ, ಅನ್ವೇಷಿಸುವ ಬೃಹತ್ ಅವಕಾಶ ನಮ್ಮ ಮುಂದಿದೆ ಎಂದು ಭಾವಿಸಿದ್ದೇನೆ. ಅದಕ್ಕಾಗಿ ಫೈನ್ ಟ್ಯೂನ್ ಆಗಲು ಪ್ರಯತ್ನ ನಡೆಸಿದ್ದೇನೆ. ನನ್ನ ದೌರ್ಬಲ್ಯಗಳೇನು, ಸಾಮರ್ಥ್ಯಗಳೇನು ಎಂಬದನ್ನು ಅರಿಯುತ್ತಿದ್ದೇನೆ.

ಕೆಲ ಬಾರಿ ಜಗತ್ತಿನ ಜನಜಂಗುಳಿ, ಗದ್ದಲದ ನಡುವೆ ನಮ್ಮನ್ನೇ ನಾವು ಕಳೆದುಕೊಂಡು ಏಕೆ ಹೀಗೆ? ಎಂಬ ಪ್ರಶ್ನೆಗಳನ್ನು ಮಾತ್ರ ಆಗಾಗ ಕೇಳಿಕೊಂಡಿದ್ದೇನೆ. ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಸದಾವಕಾಶ ಬಂದಿದೆ ಎಂದುಕೊಂಡು, ಅದಕ್ಕಾಗಿ ಯೋಗ, ಧ್ಯಾನ, ಭಗವತ್ ಚಿಂತನೆಯಲ್ಲಿ ತೊಡಗಿಸಿಕೊಂಡು ನನ್ನನ್ನು ನಾನು ಅರಿಯುವ ಪ್ರಯತ್ನ ಮಾಡುತ್ತಾ ಹೊಸ ಬೆಳಕಿನಡೆಗೆ ಆಶಾಭಾವನೆಯಿಂದ ದಿನಗಳನ್ನು ದೂಡುತ್ತಿದ್ದೇನೆ.

ನಮ್ಮ ಪ್ರಯತ್ನಗಳ ಬಗ್ಗೆ ನಂಬಿಕೆ ಇರಲಿ!

ನಮ್ಮ ಪ್ರಯತ್ನಗಳ ಬಗ್ಗೆ ನಂಬಿಕೆ ಇರಲಿ!

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

ಈ ರೀತಿ ಹಲವಾರು ಬಾರಿ ಈ ಜಗತ್ತಿನಲ್ಲಿ ಹಲವು ಸವಾಲುಗಳು ಬಂದಿವೆ ಮತ್ತು ಅವುಗಳಿಗೆ ಉತ್ತರಗಳು ಸಿಕ್ಕಿದೆ. ಕೆಲವಕ್ಕೆ ಬೇಗ ಉತ್ತರ ಸಿಕ್ಕಿದೆ, ಕೆಲವಕ್ಕೆ ಸ್ವಲ್ಪ ನಿಧಾನವಾಗಿಯಾದರೂ ಉತ್ತರ ಸಿಕ್ಕಿದೆ. ಈಗ ಬಂದಿರುವ ಸವಾಲಿಗೂ ಭವಿಷ್ಯದಲ್ಲಿ ಬೇಗ ಉತ್ತರ ಸಿಗಲಿದೆ ಎಂಬುದು ನನ್ನ ನಂಬಿಕೆ. ಆದರೆ ಈ ವಿಷಯದಲ್ಲಿ ಹಗಲು-ಇರುಳು ಎನ್ನದೇ, ವೈದ್ಯಲೋಕ ತನ್ನನ್ನೆ ತಾನು ಸಮರ್ಪಣೆ ಮಾಡಿಕೊಂಡಿದೆ. ಬೇಗ ಅವರೆಲ್ಲರ ಪ್ರಯತ್ನ ವ್ಯರ್ಥವಾಗದಿರಲಿ ಎಂದು ಆಶಿಸೋಣ. ಇದರ ಕೊನೆ ಯಾವಾಗ ಮತ್ತು ಹೇಗೆ ಆಗುತ್ತದೆ ಎಂಬುದು ಭವಿಷ್ಯವೇ ನಿರ್ಧರಿಸಬೇಕು. ಆದರೆ, ಆಗುತ್ತಿರುವ ಪ್ರಯತ್ನಗಳ ಬಗ್ಗೆ ನಂಬಿಕೆ ಇರಲಿ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪ್ರಯತ್ನಗಳ ಬಗ್ಗೆ ನಂಬಿಕೆ ಇರಲಿ! ಇದಕ್ಕಾಗಿ ನಮ್ಮ ಪ್ರಕೃತಿಯಿಂದ ಯಾವೆಲ್ಲಾ ಸವಾಲುಗಳು ಬಂದಿವೆಯೋ, ಆದೇ ಪ್ರಕೃತಿಯಿಂದ ನಮಗೆ ಪರಿಹಾರವು ಸಿಕ್ಕಿದೆ. ಇದಕ್ಕಾಗಿ ನಮ್ಮ ಪೂರ್ವಿಕರು, ಸಂತರು, ಮುನಿಗಳು ಹಲವಾರು ಪರಿಹಾರಗಳನ್ನು ಸೂಚಿಸಿ ಹೋಗಿದ್ದಾರೆ. ಅವುಗಳನ್ನು ಅನ್ವೇಷಿಸುವ, ವಿಶ್ಲೇಷಣೆ ಮಾಡುವ ಕಾಲ ಬಂದಿದೆ.

life after corona: ಸಕಾರಾತ್ಮಕ ಚಿಂತನೆ ನಮ್ಮಲ್ಲಿದ್ದರೆ ಸಾಕುlife after corona: ಸಕಾರಾತ್ಮಕ ಚಿಂತನೆ ನಮ್ಮಲ್ಲಿದ್ದರೆ ಸಾಕು

ಯೋಜನಾಬದ್ಧವಾಗಿ ನಿರ್ವಹಿಸುವ ಕಲೆ ಅಗತ್ಯ

ಯೋಜನಾಬದ್ಧವಾಗಿ ನಿರ್ವಹಿಸುವ ಕಲೆ ಅಗತ್ಯ

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

ಕೊರೊನಾ ನಂತರ ಹೀಗೆ ಆಗುತ್ತದೆ, ಹಾಗೇ ಆಗುತ್ತದೆ ಎಂಬ ಬಗ್ಗೆ ಹಲವಾರು ವಿಶ್ಲೇಷಣೆಗಳು ಬಂದಿವೆ ಮತ್ತು ಬರುತ್ತಲೂ ಇವೆ. ಆದರೆ ಒಂದಂತೂ ಸತ್ಯ, ಕೊರೊನಾ ನಂತರ ಎಲ್ಲರೂ ತಮ್ಮ ಜೀವನವನ್ನು ತುಂಬಾ ಯೋಜನಾಬದ್ಧವಾಗಿ ನಿರ್ವಹಿಸುವ ಕಲೆಯನ್ನು ಅರಗಿಸಿಕೊಂಡಿರುತ್ತಾರೆ. ಪ್ರಕೃತಿ ಮತ್ತು ತಮ್ಮ ಸುತ್ತ-ಮುತ್ತಲಿನ ಪರಿಸರದ ಕಾಳಜಿ ವಹಿಸುತ್ತಾ, ಸ್ವಚ್ಚತೆ ಮತ್ತು ಶುದ್ಧತೆ ಹೆಚ್ಚು ಸಮಯ ಕೊಡುತ್ತಾರೆ ಎಂಬುದು ನನ್ನ ನಂಬಿಕೆ.

ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕಂಡಷ್ಟು ಬದಲಾವಣೆ, ರಾಜಕೀಯ ಕ್ಷೇತ್ರಗಳಲ್ಲಿ ಬದಲಾವಣೆ ಕಾಣದು. ಅಂದರೆ ಎಲ್ಲ ಕ್ಷೇತ್ರಗಳು ಶುದ್ಧವಾಗಬಹುದು ಆದರೆ ರಾಜಕೀಯ ಕ್ಷೇತ್ರ ಮಾತ್ರ ಶುದ್ಧವಾಗುವ ಆಶಾಭಾವನೆ ಇಲ್ಲ. ದುಡಿಯವ ವರ್ಗದ ಬೆಳವಣಿಗೆಗೆ ಚಿಂತನೆ ಮಾಡುವ ವ್ಯವಸ್ತೆಯ ನಿರ್ಮಾಣವಾಗುವುದು ದುಸ್ತರ. ಎಲ್ಲರು ತಮ್ಮ ತಮ್ಮ ವೈಯಕ್ತಿಕ ಬದುಕು ಕಟ್ಟಿಕೊಳ್ಳುವುದಕ್ಕೆ ನಿಲ್ಲಬಹುದು. ಈ ರೀತಿಯಾದಾಗ ವ್ಯಕ್ತಿ-ವ್ಯಕ್ತಿಗಳಲ್ಲಿ ಸ್ವಾರ್ಥ ಮನೆ ಮಾಡಿ, ಜನ ಎರಡು ವರ್ಗಗಳಾಗಿ ವಿಭಜನೆ ಹೊಂದುವ ಅಪಾಯವಿದೆ. ಇದರಿಂದ ಒಂದು ವರ್ಗ ಇನ್ನೊಂದು ವರ್ಗವನ್ನು ನಿಯಂತ್ರಣ ಮಾಡುವ ಸಾಹಸಕ್ಕೆ ಕೈ ಹಾಕಬಹುದು.

ತುರ್ತು ಕಾರ್ಯಗಳನ್ನು ಪಟ್ಟಿ ಮಾಡಿಕೊಳ್ಳಿ

ತುರ್ತು ಕಾರ್ಯಗಳನ್ನು ಪಟ್ಟಿ ಮಾಡಿಕೊಳ್ಳಿ

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಇದೊಂದು ಗಂಭೀರ ಪ್ರಶ್ನೆ. ಇದರಿಂದ ವಯಕ್ತಿಕ ಮತ್ತು ವೃತ್ತಿಪರ ಬದುಕು ಏರುಪೇರಾಗುವ ಸಂಭವ ಇರುತ್ತದೆ ಎಂದು ಹೇಳಲಾಗುವುದಿಲ್ಲ. ತಮ್ಮ ಬದುಕಿನ ಬಗ್ಗೆ ಹಲವಾರು ಕನಸು, ಆಸೆ ಹೊಂದಿದ ಬಹುತೇಕರಿಗೆ ಇದೊಂದು ಬರಸಿಡಿಲಾಗುತ್ತದೆ ಎಂದು ಭಾವಿಸಬೇಕಿಲ್ಲ. ನಿಮ್ಮ ಎಲ್ಲ ಆಸೆ-ಆಕಾಂಕ್ಷೆಗಳಿಗೆ ಎಳ್ಳು ನೀರು ಬಿಡಬೇಕಿಲ್ಲ. ನಿರಾಶೆ ಅಗತ್ಯವಿಲ್ಲ. ಹೊಸ ಬಾಳಿಗಾಗಿ, ಬೆಳಕಿಗಾಗಿ, ಬರವಸೆಯ ದಿನಗಳಿಗಾಗಿ ಸ್ವಲ್ಪ ಸಹನಶೀಲರಾಗಬೇಕು. ಕೊರೊನಾ ನಂತರ ನೀವು ಮಾಡಬೇಕಾದ ತುರ್ತು ಕಾರ್ಯಗಳನ್ನು ಪಟ್ಟಿ ಮಾಡಿಕೊಳ್ಳಿ. ಅದನ್ನು ಹೇಗೆ ? ಯಾವ ರೀತಿ? ಯಾರಿಂದ? ಯಾವಾಗ ಮಾಡುವುದು? ಎಂಬುದನ್ನು ಈಗಿನಿಂದಲೇ ಯೋಜನೆ ರೂಪಿಸಿ, ಅನುಷ್ಠಾನ ಪ್ರಕ್ರಿಯೆಯಲ್ಲಿ ತೊಡಗಿ. ಖಂಡಿತಾ ಯಶಸ್ಸು ನಿಮ್ಮ ಹತ್ತಿರ ಬಂದು ನಿಲ್ಲುತ್ತದೆ. ನೀವು ಮಾಡುವ ಕಾರ್ಯ ಮತ್ತು ವಿಚಾರಗಳಲ್ಲಿ ನಂಬಿಕೆ ಇರಲ್ಲಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇರಲಿ!

Life After Corona: ಪ್ರಕೃತಿ ಕಲಿಸಿದ ಪಾಠವನ್ನು ಅರಿತುಕೊಳ್ಳೋಣLife After Corona: ಪ್ರಕೃತಿ ಕಲಿಸಿದ ಪಾಠವನ್ನು ಅರಿತುಕೊಳ್ಳೋಣ

ಲೇಖಕರ ಸಂಕ್ಷಿಪ್ತ ಪರಿಚಯ

ಲೇಖಕರ ಸಂಕ್ಷಿಪ್ತ ಪರಿಚಯ

ಬರಹ: ನಾನಾ.ಮದರಕಲ್ಲ
ಶಿಕ್ಷಕ ತರಬೇತಿದಾರರು,
ದ ಟೀಚರ್ ಫೌಂಡೇಶನ್,
ಬೆಂಗಳೂರು.

ದ ಟೀಚರ್ ಫೌಂಡೇಶನ್ ಸಂಸ್ಥೆ ಕಳೆದ 16 ವರ್ಷಗಳಿಂದ ಶಿಕ್ಷಕರ ವೃತ್ತಿಪರ ಬೆಳವಣಿಗೆಗಾಗಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯಲ್ಲಿ ನಾನು 14 ವರ್ಷಗಳಿಂದ ಶಿಕ್ಷಕ ತರಬೇತಿದಾರನಾಗಿ ಯಾದಗಿರಿ, ರಾಯಚೂರು, ಹಾವೇರಿ, ಉಡುಪಿ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ.

English summary
#LifeAfterCorona: How will be life after Corona menance gets over. Believe in Yourself says Bengaluru teacher foindation's Teacher Trainer Nana Madarakalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X