keyboard_backspace

10 ವರ್ಷದಲ್ಲಿ ರಾಜ್ಯದಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಗೆ ಸ್ಕೆಚ್; ಇದು ಹೇಗೆ ಸಾಧ್ಯ?

Google Oneindia Kannada News

ಬೆಂಗಳೂರು, ಏ. 23: ಯಾವುದೇ ಆರ್ಥಿಕತೆ ಪರಿಪೂರ್ಣ ಬೆಳವಣಿಗೆಯತ್ತ ಸಾಗುತ್ತಿದೆ ಎನ್ನಲು ಇರುವ ಸೂಚನೆಗಳಲ್ಲಿ ಉದ್ಯೋಗ ಪ್ರಮಾಣವೂ ಒಂದು. ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚೂಕಡಿಮೆ ಶೇ. 8ರಷ್ಟಿದೆ. ಅತ್ಯಂತ ಕಡಿಮೆ ನಿರುದ್ಯೋಗ ಸಮಸ್ಯೆ ಇರುವ ರಾಜ್ಯಗಳ ಪೈಕಿ ಕರ್ನಾಟಕವೂ ಇದೆ. ಇಲ್ಲಿ ನಿರುದ್ಯೋಗ ಪ್ರಮಾಣ ಶೇ. 2ಕ್ಕಿಂತ ಕಡಿಮೆ ಇದೆ. ಅನೇಕ ಉದ್ದಿಮೆಗಳು ಬೆಂಗಳೂರಿನಲ್ಲಿ ನೆಲೆಗೊಂಡಿವೆ. ಇಲ್ಲಿನ ಪರಿಸರ, ಸೌಲಭ್ಯ, ತಂತ್ರಜ್ಞಾನ ಸೌಕರ್ಯ ಇತ್ಯಾದಿ ಅಂಶಗಳು ಹಲವು ಕಂಪನಿಗಳನ್ನ ಆಕರ್ಷಿಸುತ್ತಲೇ ಇರುತ್ತವೆ. ಆದರೆ, ಇತ್ತೀಚೆಗೆ ಕೆಲ ವರದಿಗಳು ಕನ್ನಡಿಗರಿಗೆ ನಿರಾಸೆ ತಂದಿದ್ದವು.

ಬೆಂಗಳೂರಿನಿಂದ ಹಲವು ಕಂಪನಿಗಳು ಹೊರಗೆ ಹೋಗುತ್ತಿವೆ. ಚೆನ್ನೈ, ಹೈದರಾಬಾದ್ ನಗರಗಳತ್ತ ಮುಖ ಮಾಡುತ್ತಿವೆ ಎಂದು ಈ ವರದಿಗಳು ಹೇಳುತ್ತಿವೆ. ಆದರೆ, ಈ ಸುದ್ದಿಗಳು ಕೇವಲ ಕಪೋಲಕಲ್ಪಿತ ಅಷ್ಟೇ ಎಂಬುದು ರಾಜ್ಯ ಸರಕಾರದ ಸಚಿವರು ಮತ್ತು ಅಧಿಕಾರಿಗಳ ಅನಿಸಿಕೆ.

Yadgir Village Accountant Job : ಯಾದಗಿರಿಯಲ್ಲಿ ಕೆಲಸ ಖಾಲಿ ಇದೆ; ಏ. 29ರೊಳಗೆ ಅರ್ಜಿ ಹಾಕಿ Yadgir Village Accountant Job : ಯಾದಗಿರಿಯಲ್ಲಿ ಕೆಲಸ ಖಾಲಿ ಇದೆ; ಏ. 29ರೊಳಗೆ ಅರ್ಜಿ ಹಾಕಿ

ರಾಜ್ಯದಿಂದ ಯಾವ ಕಂಪನಿಗಳು ಹೊರಗೆ ಹೋಗುತ್ತಿಲ್ಲ ಎಂದು ಹೇಳಿರುವ ಸರಕಾರ ಇನ್ನು 10 ವರ್ಷದಲ್ಲಿ ರಾಜ್ಯದಲ್ಲಿ ಒಂದು ಕೋಟಿಯಷ್ಟಾದರೂ ಉದ್ಯೋಗ ಸೃಷ್ಟಿಗೆ ಬೇಕಾದ ವಾತಾವರಣ ನಿರ್ಮಿಸುವ ಗುರಿ ಇಟ್ಟುಕೊಂಡಿದೆ.

 ಉದ್ಯೋಗಸೃಷ್ಟಿ ವಾತಾವರಣ ನಿರ್ಮಾಣಕ್ಕೆ ಕಾರ್ಯಪಡೆ:

ಉದ್ಯೋಗಸೃಷ್ಟಿ ವಾತಾವರಣ ನಿರ್ಮಾಣಕ್ಕೆ ಕಾರ್ಯಪಡೆ:

ರಾಜ್ಯದಲ್ಲಿ ಒಂದು ಕೋಟಿ ಉದ್ಯೋಗಸೃಷ್ಟಿಗೆ ಅಗತ್ಯ ಇರುವ ವಾತಾವರಣ ನೆಲಸುವ ಸಲುವಾಗಿ ರಾಜ್ಯ ಸರಕಾರ ಮಿಷನ್ ಯುವ ಸಮೃದ್ಧಿ ಹೆಸರಿನ ವಿಶೇಷ ಕಾರ್ಯಪಡೆ ರಚಿಸಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ಅವರು ಈ ಕಾರ್ಯಪಡೆಯ ನೇತೃತ್ವ ವಹಿಸಿದ್ದಾರೆ. ಇವರು ಸಾಕಷ್ಟು ಅಧ್ಯಯನ ನಡೆಸಿ ಸರಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ.

 ಕೆಆರ್‌ಐಎಯಿಂದ ಪ್ರಮುಖ ಪಾತ್ರ:

ಕೆಆರ್‌ಐಎಯಿಂದ ಪ್ರಮುಖ ಪಾತ್ರ:

ಮಿಷನ್ ಯುವ ಸಮೃದ್ಧಿ ರೂಪಿಸಿರುವ ಮಾಸ್ಟರ್ ಪ್ಲಾನ್ ಇಟ್ಟುಕೊಂಡು ರಾಜ್ಯದಲ್ಲಿ ಉದ್ಯೋಗಸೃಷ್ಟಿ ವಾತಾವರಣ ನಿರ್ಮಾಣಕ್ಕಾಗಿ ರಾಜ್ಯ ಸರಕಾರ ಕಸರತ್ತು ನಡೆಸುತ್ತಿದೆ. ಈ ಯೋಜನೆಯನ್ನ ಜಾರಿಗೊಳಿಸಲು ಸಹಾಯವಾಗಿ ಕರ್ನಾಟಕ ಸಂಶೋಧನೆ ಮತ್ತು ಪರಿವರ್ತಕ ಪ್ರಾಧಿಕಾರ (ಕೆಆರ್‌ಐಎ) ಸಂಸ್ಥೆಯನ್ನ ಸ್ಥಾಪಿಸಲಾಗುತ್ತಿದೆ. ಇಸ್ರೇಲ್ ದೇಶದಲ್ಲಿ ಟೆಕ್ನಾಲಜಿ ಟ್ರಾನ್ಸ್‌ಫರ್ ಆಫೀಸಸ್ (ಟಿಟಿಒ) ಅಲ್ಲಿ ಉದ್ಯೋಗಸೃಷ್ಟಿ ವ್ಯವಸ್ಥೆಯ ಕೇಂದ್ರಬಿಂದುವಾಗಿವೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಕೆಆರ್‌ಐಎಗಳನ್ನ ಉದ್ಯೋಗಸೃಷ್ಟಿ ವ್ಯವಸ್ಥೆಯ ನೋಡಲ್ ಏಜೆನ್ಸಿಯಾಗಿ ಮಾಡುವುದು ಸರಕಾರದ ಉದ್ದೇಶ. ಐಟಿ-ಬಿಟಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಖಾತೆಗಳ ಸಚಿವರ ಡಾ. ಅಶ್ವತ್ಥ ನಾರಾಯಣ ಅವರು ಈ ಬಗ್ಗೆ ಒಂದಷ್ಟು ವಿವರ ನೀಡಿದ್ದಾರೆ.

Zero Shadow Day : ನೆರಳೇ ಕಾಣಿಸಲ್ಲ: ಏ. 25 ಶೂನ್ಯ ನೆರಳಿನ ದಿನ- ಆಸಕ್ತಿ ಇದ್ದವರಿಗೆ 2 ದಿನ ವರ್ಕ್‌ಶಾಪ್Zero Shadow Day : ನೆರಳೇ ಕಾಣಿಸಲ್ಲ: ಏ. 25 ಶೂನ್ಯ ನೆರಳಿನ ದಿನ- ಆಸಕ್ತಿ ಇದ್ದವರಿಗೆ 2 ದಿನ ವರ್ಕ್‌ಶಾಪ್

 1.88 ಕೋಟಿ ಮಂದಿಗೆ ಕೌಶಲ್ಯ ತರಬೇತಿ ಅಗತ್ಯ:

1.88 ಕೋಟಿ ಮಂದಿಗೆ ಕೌಶಲ್ಯ ತರಬೇತಿ ಅಗತ್ಯ:

ಮಿಷನ್ ಯುವ ಸಮೃದ್ಧಿ ಕಾರ್ಯಪಡೆ ಸಲ್ಲಿಸಿದ ವರದಿ ಪ್ರಕಾರ ರಾಜ್ಯದಲ್ಲಿ 2030ರವರೆಗೆ ವೃದ್ಧಿ ಮಾರ್ಗದರ್ಶನ, ತರಬೇತಿ, ಉದ್ಯೋಗದಲ್ಲಿ ಏಳಿಗೆ ಮತ್ತು ಉದ್ಯಮಶೀಲತೆ ಅವಕಾಶದ ಅಗತ್ಯ ಇರುವ ಯುವಸಮುದಾಯದವರ ಸಂಖ್ಯೆ 1.88 ಕೋಟಿಯಷ್ಟಿದೆ.

 ಯುವಸಮುದಾಯದ ಕೌಶಲ್ಯಾಭಿವೃದ್ಧಿಗೆ ಎಂತಹ ತರಬೇತಿ ಬೇಕು:

ಯುವಸಮುದಾಯದ ಕೌಶಲ್ಯಾಭಿವೃದ್ಧಿಗೆ ಎಂತಹ ತರಬೇತಿ ಬೇಕು:

ಯುವ ಸಮುದಾಯಕ್ಕೆ ಡಿಜಿಟಲ್ ನೈಪುಣ್ಯತೆಯನ್ನು ಒದಗಿಸಬೇಕು. ವಿಮರ್ಶಾತ್ಮಕ ಚಿಂತನೆ, ಕ್ರಿಯಾಶೀಲತೆ, ಸಂವಹನ, ಮಾಹಿತಿ ಸಾಕ್ಷರತೆ, ಮಾಧ್ಯಮ ಸಾಕ್ಷರತೆ, ತಂತ್ರಜ್ಞಾ ಸಾಕ್ಷರತೆ, ನಾಯಕತ್ವ, ಉತ್ಪನ್ನಶೀಲತೆ, ಸಾಮಾಜಿಕ ಕೌಶಲ್ಯಗಳು, ಹೊಂದಾಣಿಕೆಶಕ್ತಿ ಇತ್ಯಾದಿ ವಿಚಾರಗಳಲ್ಲಿ ಯುವಕರಿಗೆ ತರಬೇತಿಯ ಅಗತ್ಯತೆ ಇದೆ ಎಂದು ಕಾರ್ಯಪಡೆ ಅಭಿಪ್ರಾಯಪಟ್ಟಿದೆ.

ತಂತ್ರಜ್ಞಾನ ಎಲ್ಲೆಡೆಯೂ ಒಂದೇ ಆದ್ದರಿಂದ ನಗರವಾಗಲೀ ಗ್ರಾಮೀಣ ಭಾಗವಾಗಲೀ ಈ ಕೌಶಲ್ಯಗಳು ಅಗತ್ಯವಾಗಿರುತ್ತವೆ. ಎಲ್ಲಾ ರೀತಿಯ ಕೆಲಸಗಳಲ್ಲೂ ತಂತ್ರಜ್ಞಾನದ ಅಗತ್ಯ ಬಿದ್ದಿದ್ದು ಈ ಮುಂಚೆ ಇದ್ದ ಕೈ ಕೆಲಸಗಳು ಬಹುತೇಕ ಮಾಯವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯುವಕರು ಕಾರ್ಯಸ್ಥಳದಲ್ಲಿ ಹೊಸ ಸವಾಲುಗಳು ಮತ್ತು ಹೊಸ ವಿಧಾನಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಯಾವ ಮಟ್ಟದಲ್ಲಿ ನಾವು ಬದಲಾವಣೆಗಳಿಗೆ ಹೊಂದಿಕೊಳ್ಳುತ್ತೇವೋ ಮತ್ತು ಅಜೀವಪರ್ಯಂತ ಎಷ್ಟು ಕಲಿಯುತ್ತೇವೋ ಇವುಗಳ ಮೇಲೆ ಉದ್ಯೋಗಸೃಷ್ಟಿ ಮತ್ತು ಹೊಸ ಉದ್ದಿಮೆಗಳ ಸ್ಥಾಪನೆ ಅವಲಂಬಿತವಾಗಿರುತ್ತವೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
 ಐಬಿಎಂ, ಮೈಕ್ರೊಸಾಫ್ಟ್ ಮೊದಲಾದ ಕಂಪನಿಗಳ ಸಹಭಾಗಿತ್ವ:

ಐಬಿಎಂ, ಮೈಕ್ರೊಸಾಫ್ಟ್ ಮೊದಲಾದ ಕಂಪನಿಗಳ ಸಹಭಾಗಿತ್ವ:

ಕರ್ನಾಟಕದ ಡಿಜಿಟಲ್ ಎಕನಾಮಿ ಇಷನ್ (ಕೆಡಿಇಎಂ) ಮೂಲಕ ಇನ್ಫೋಸಿಸ್, ಮೈಕ್ರೋಸಾಫ್ಟ್, ಐಬಿಎಂ ಮೊದಲಾದ ಹಲವು ವಿಶ್ವದರ್ಜೆ ಕಂಪನಿಗಳ ಸಹಾಯದೊಂದಿಗೆ ಪದವೀಧರರಿಗೆ ಇಂಟರ್ನ್‌ಶಿಪ್ (ಕಲಿಕಾತರಬೇತಿ) ಅವಕಾಶಗಳನ್ನ ಸೃಷ್ಟಿಸುವ ಯೋಜನೆ ಇದೆ. ಹಾಗೆಯೇ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಸ್ಕಿಲ್ಸ್ ಮಟ್ಟ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ಸಮೀಕ್ಷೆಗಳನ್ನ ನಡೆಸಲಾಗುತ್ತಿದೆ.

 ಉದ್ದಿಮೆದಾರರಿಲ್ಲದೇ ಉದ್ಯೋಗ ಇಲ್ಲ ಎಂಬ ವಾಸ್ತವ:

ಉದ್ದಿಮೆದಾರರಿಲ್ಲದೇ ಉದ್ಯೋಗ ಇಲ್ಲ ಎಂಬ ವಾಸ್ತವ:

ಕಾರ್ಯಪಡೆಯ ಸದಸ್ಯರಲ್ಲೊಬ್ಬರಾದ ಮದನ್ ಪದಕಿ ಕೆಲವೊಂದಿಷ್ಟು ಕುತೂಹಲಕಾರಿ ಸಂಗತಿಗಳನ್ನ ವಿವರಿಸಿದ್ದಾರೆ. ಬೆಂಗಳೂರಿನ ಹೊರಗೆ ಶೇ. 90ರಷ್ಟು ಮಕ್ಕಳಿಗೆ ಸರಕಾರಿ ಉದ್ಯೋಗವೇ ಆಗಬೇಕು. ಈ ಮನಃಸ್ಥಿತಿಯನ್ನ ಬದಲಾಯಿಸುವು ದೊಡ್ಡ ಸವಾಲು ಎನ್ನುತ್ತಾರೆ ಅವರು. "ದೀರ್ಘಾವಧಿಯಲ್ಲಿ, ಅಂದರೆ ಮುಂದಿನ ನಾಲ್ಕೈದು ವರ್ಷದಲ್ಲಿ ನಾವು ಈ ಧೋರಣೆಯನ್ನ ಬದಲಾಯಿಸುವ ಅಗತ್ಯ ಇದೆ. ನೀವು ಏನೇ ಉದ್ಯೋಗಸೃಷ್ಟಿಗೆ ಕೆಲಸ ಮಾಡಿದರೂ ಉದ್ಯೋಗ ಸೃಷ್ಟಿಸಲು ಉದ್ದಿಮೆದಾರರೇ ಇಲ್ಲದೇ ಹೋದರೆ ಉದ್ಯೋಗವೇ ಸೃಷ್ಟಿಯಾಗುವುದಿಲ್ಲ ಎಂಬುದು ಕಟು ವಾಸ್ತವ" ಎಂದು ಮದನ್ ಪದಕಿ ಹೇಳುತ್ತಾರೆ.

"ಶಾಲಾ ಮಟ್ಟದಿಂದಲೇ ಮಕ್ಕಳಲ್ಲಿ ಉದ್ಯಮಶೀಲತೆಯ ಮನೋಭಾವ ಬೆಳೆಸುವುದರತ್ತ ಗಮನ ಕೊಡಬೇಕು. ಉದ್ಯೋಗ ಸೃಷ್ಟಿಯ ಪರಿಕಲ್ಪನೆಗಳನ್ನ ಅವರಲ್ಲಿ ಬಿತ್ತಬೇಕು. ಅವರು ಉದ್ದಿಮೆದಾರರಾಗಿ ಹೊರಹೊಮ್ಮುವವರೆಗೂ ಅವರಲ್ಲಿ ಆ ಸ್ವಭಾವವನ್ನು ಪೋಷಿಸುವ ವಾತಾವರಣ ಇರಬೇಕು" ಎಂಬುದು ಕಾರ್ಯಪಡೆಯ ಆಶಯ.

 ಕೌಶಲ್ಯಾಭಿವೃದ್ಧಿಗೆ ಗಮನ ಕೊಡಬೇಕಾದ ಎಂಟು ಕ್ಷೇತ್ರಗಳು:

ಕೌಶಲ್ಯಾಭಿವೃದ್ಧಿಗೆ ಗಮನ ಕೊಡಬೇಕಾದ ಎಂಟು ಕ್ಷೇತ್ರಗಳು:

1) ಡಿಜಿಟಲ್ ಕೌಶಲ್ಯತೆ ಮತ್ತು ಉದ್ಯಮಶೀಲತೆಯ ಮನಃಸ್ಥಿತಿ
2) ವೃತ್ತಿ ಮಾಹಿತಿ ಮತ್ತು ಮಾರ್ಗದರ್ಶನ
3) ಕಾಲೇಜುಗಳಲ್ಲಿ ಉದ್ಯಮಶೀಲತೆಯ ಪರಿಚಯ
4) ಜಿಲ್ಲೆಗಳಲ್ಲಿ ಉದ್ಯಮಶೀಲತೆಯ ಜಾಲವ್ಯವಸ್ಥೆಯನ್ನ ನಿರ್ಮಿಸುವುದು ಮತ್ತು ಸ್ಥಳೀಯವಾಗಿ ಉದ್ಯೋಗ ಮತ್ತು ಸೇವೆಗಳಿಗೆ ಪುಷ್ಟಿ ನೀಡುವುದು.
5) ಡಿಜಿಟಲ್ ಸೇವೆಗಳು ಮತ್ತು ತಂತ್ರಜ್ಞಾನ ಆಧರಿತ ಮಾದರಿಗಳು.
6) ಕೃಷಿ ಮತ್ತು ಕೃಷಿ ತಂತ್ರಜ್ಞಾನ

 ಸರಕಾರದಿಂದ ಈಗಾಗಲೇ ಕೈಗೊಂಡ ಕೈಂಕರ್ಯಗಳು:

ಸರಕಾರದಿಂದ ಈಗಾಗಲೇ ಕೈಗೊಂಡ ಕೈಂಕರ್ಯಗಳು:

* ಕಳೆದ ವರ್ಷ ಜುಲೈ ತಿಂಗಳಲ್ಲಿ ರಾಜ್ಯ ಸರಕಾರವು ಸರಕಾರೀ ಸ್ವಾಮ್ಯದ 150 ಐಟಿಐ ಶಿಕ್ಷಣಸಂಸ್ಥೆಗಳನ್ನ ಉನ್ನತೀಕರಣಗೊಳಿಸಲು ಟಾಟಾ ಟೆಕ್ನಾಲಜೀಸ್ ಜೊತೆ ಕೈಜೋಡಿಸಲು ನಿರ್ಧರಿಸಿತು. ಆ ಯೋಜನೆಯ ವೆಚ್ಚ 4636 ಕೋಟಿ ರೂ.

* ರಾಜ್ಯ ಸರಕಾರ 11495 ಕೋಟಿ ರೂ ಮೊತ್ತದ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದೆ ಇದರಿಂದ ವಿವಿಧ ಕೌಶಲ್ಯಗಳ 47 ಸಾವಿರ ಜನರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ.* ಬೆಂಗಳೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿರುವ ಐಟಿಐಗಳಲ್ಲಿ ವಾಹನ ಕ್ಷೇತ್ರಸಂಬಂಧಿತ ಪಠ್ಯಕ್ರಮ ತಯಾರಿಸಲು ಟೊಯೋಟಾ ಕಂಪನಿಯ ನೆರವನ್ನು ರಾಜ್ಯ ಸರಕಾರ ಬಳಸಿಕೊಳ್ಳುತ್ತಿದೆ.* ಐಟಿ, ಬಿಟಿ, ಅರೋಗ್ಯ ಕ್ಷೇತ್ರಗಳಲ್ಲಿ ತರಬೇತಿ ಮೊದಲಾದ ಕೌಶಲ್ಯಾಭಿವೃದ್ಧಿಗಾಗಿ ವಿಪ್ರೋ, ಜಿಇ, ನಾರಾಯಣ ಹೃದಯಾಲಯ, ಆದಿತ್ಯ ಬಿರ್ಲಾ ಗ್ರೂಪ್ ಮೊದಲಾದ ಹಲವಾರು ಕಂಪನಿಗಳ ಜೊತೆ ಸರಕಾರ ಒಪ್ಪಂದ ಮಾಡಿಕೊಂಡಿದೆ.* ದೇವನಹಳ್ಳಿ ಬಳಿ ಎಕ್ಸೈಡ್ ಇಂಡಸ್ಟ್ರೀಸ್ ಸಂಸ್ಥೆ ಭಾರತದಲ್ಲೇ ಅತಿದೊಡ್ಡದೆನಿಸಿರುವ ಲಿಥಿಯಮ್-ಅಯಾನ್ ಬ್ಯಾಟರಿ ತಯಾರಿಕಾ ಘಟಕವನ್ನು ಸ್ಥಾಪಿಸುತ್ತಿದೆ.
 ಬೆಂಗಳೂರು ನಂಬರ್ ಒನ್:

ಬೆಂಗಳೂರು ನಂಬರ್ ಒನ್:

ಅನೇಕ ಉದ್ಯಮಗಳು ಮತ್ತು ಕಂಪನಿಗಳು ಬೆಂಗಳೂರು ತೊರೆದು ರಾಜ್ಯದ ಹೊರಗೆ ಹೋಗುತ್ತಿವೆ ಎಂಬಂಥ ವರದಿಗಳನ್ನ ರಾಜ್ಯ ಅಧಿಕಾರಿಗಳು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ಹೊಸ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ದೇಶದಲ್ಲಿ ಜ್ಞಾನ ಮತ್ತು ತಂತ್ರಜ್ಞಾನದ ಕೇಂದ್ರವಾಗಲು ಬೆಂಗಳೂರು ಮುಂಚೂಣಿಲ್ಲಿದೆ. 2020-21ರಲ್ಲಿ ರಾಜ್ಯದ ಸಾಫ್ಟ್‌ವೇರ್ ರಫ್ತು 2 ಲಕ್ಷ ಕೋಟಿ ದಾಟಿತ್ತು. ಅದೇ ತೆಲಂಗಾಣದಿಂದ ಸಾಫ್ಟ್‌ವೇರ್ ರಫ್ತು ಆಗಿದ್ದು 71 ಸಾವಿರ ಕೋಟಿ ರೂ ಮೌಲ್ಯದಷ್ಟು ಮಾತ್ರ. ಬೆಂಗಳೂರಿಗೆ ತೆಲಂಗಾಣ ಸ್ಪರ್ಧೆ ನೀಡುತ್ತಿದೆ ಎಂಬುದೆಲ್ಲಾ ಸುಳ್ಳು ಎಂದು ಈ ಅಂಕಿ ಅಂಶಗಳು ಹೇಳುತ್ತವೆ" ಎಂದು ಸರಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
A special task force has submitted a report on plans to create conducive environment for job creation in Karnataka. Based on its recommendations, Karnataka govt is on action mode.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X