keyboard_backspace

ಕರ್ನಾಟಕದಲ್ಲಿ ಕೊವಿಡ್-19 ಪರೀಕ್ಷೆ, ಹೋಮ್ ಐಸೋಲೇಷನ್ ಮಾರ್ಗಸೂಚಿಗಳು

Google Oneindia Kannada News

ನವದೆಹಲಿ, ಜನವರಿ 19: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಳೆದ ಎರಡು ದಿನಗಳಿಂದ 40,000 ಗಡಿ ದಾಟುತ್ತಿದೆ. ಈ ಹಿನ್ನೆಲೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.

ರಾಜ್ಯದಲ್ಲಿ ಮಂಗಳವಾರ 41,457 ಹೊಸ ಸೋಂಕುಗಳು ದಾಖಲಾಗಿದ್ದು, ಬುಧವಾರ 40,499 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕರ್ನಾಟಕ ಸರ್ಕಾರವು ಕೊವಿಡ್ -19 ರೋಗಿಗಳ ಪರೀಕ್ಷೆ, ಹೋಮ್ ಐಸೋಲೇಶನ್‌ಗಾಗಿ ಹೊಸ ಮಾರ್ಗಸೂಚಿಗಳನ್ನು ಬುಧವಾರ ಬಿಡುಗಡೆ ಮಾಡಿದೆ.

Karnataka Govt Revised Guidelines on Covid-19 Testing, Isolation And Quarantine

"ಹೋಮ್ ಐಸೋಲೇಶನ್‌ನಲ್ಲಿರುವ ರೋಗಿಗಳು ಸೋಂಕು ಪತ್ತೆಯಾದ ಕನಿಷ್ಠ ಏಳು ದಿನಗಳು ನಂತರ ಬಿಡುಗಡೆ ಮಾಡಲಾಗುತ್ತದೆ. ಹಿಂದಿನ ಮತ್ತು ಸತತ ಮೂರು ದಿನಗಳವರೆಗೆ ಯಾವುದೇ ಜ್ವರ ದಾಖಲಾಗಿಲ್ಲ," ಎಂದು ಮಾರ್ಗಸೂಚಿಗಳು ತಿಳಿಸಿವೆ. ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳಲ್ಲಿ ಯಾವೆಲ್ಲ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ಮುಂದೆ ಓದಿ.

ಹೋಮ್ ಐಸೋಲೇಷನ್, ಕೊವಿಡ್-19 ಪರೀಕ್ಷೆಗೆ ಮಾರ್ಗಸೂಚಿ:
- ಕೊವಿಡ್-19 ರೋಗಿಗಳ ಹೋಮ್ ಐಸೋಲೇಶನ್ ಅವಧಿ ಮುಗಿದ ನಂತರ ಮರು ಪರೀಕ್ಷೆಯ ಅಗತ್ಯವಿಲ್ಲ
- ಎಲ್ಲಾ ರೋಗಲಕ್ಷಣದ ರೋಗಿಗಳನ್ನು ಕ್ಷಿಪ್ರ ಪ್ರತಿಜನಕ ಪರೀಕ್ಷೆಗೆ (RAT) ಒಳಪಡಿಸಲಾಗುತ್ತದೆ. ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಲ್ಲಿ ICMR ಮಾರ್ಗಸೂಚಿಗಳಿಗೆ ಅನುಗುಣವಾಗಿ RT-PCR ಪರೀಕ್ಷೆ
- ಆರೋಗ್ಯ ಸಿಬ್ಬಂದಿ ಕೊವಿಡ್ -19 ಅನ್ನು ಸೂಚಿಸುವ ಯಾವುದೇ ಲಕ್ಷಣಗಳನ್ನು ಹೊಂದಿದ್ದರೆ, ಅಂಥವರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು
- ರೋಗಲಕ್ಷಣವಿಲ್ಲದ ಅಥವಾ ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವ ಆರೋಗ್ಯ ಸಿಬ್ಬಂದಿ ಮನೆಯಲ್ಲಿ ಅಥವಾ ಹೋಟೆಲ್‌ನಲ್ಲಿ ಐದು ದಿನಗಳವರೆಗೆ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಬೇಕು.
- "ಹಿಂದಿನ ಮೂರು ದಿನಗಳಲ್ಲಿ ಕೋಣೆಯ ಗಾಳಿಯಲ್ಲಿ ಶೇ.94% ಕ್ಕಿಂತ ಹೆಚ್ಚಿನ ಆಮ್ಲಜನಕದ ಶುದ್ಧತ್ವದೊಂದಿಗೆ ರೋಗಲಕ್ಷಣವಿಲ್ಲದಿದ್ದರೆ ಷರತ್ತುಬದ್ಧವಾಗಿ ಐಸೋಲೇಷನ್ ನಿಂದ ಬಿಡುಗಡೆ ಮಾಡಲಾಗುತ್ತದೆ. ಆದರೆ, ಮುಂದಿನ ಐದು ದಿನಗಳವರೆಗೆ ಅಂಥವರು ಸುತ್ತಲೂ ಜನರು ಇರುವಾಗ ಮಾಸ್ಕ್ ಅಥವಾ ಪಿಪಿಇ ಅನ್ನು ಕಟ್ಟುನಿಟ್ಟಾಗಿ ಧರಿಸಬೇಕೆಂಬ ಸಲಹೆ ನೀಡಲಾಗುತ್ತದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಇದಲ್ಲದೆ, ಕೊವಿಡ್-19 ರೋಗಿಗಳ ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು (ಮನೆ ಅಥವಾ ಕೆಲಸದ ಸ್ಥಳದಲ್ಲಿ) ಅವರು ರೋಗಲಕ್ಷಣಗಳಿಲ್ಲದಿದ್ದರೂ ಮತ್ತು ಅವರ ವಯಸ್ಸು ಮತ್ತು ಸಹವರ್ತಿ ರೋಗಗಳನ್ನು ಲೆಕ್ಕಿಸದೆಯೇ ಸೋಂಕಿನ ಪರೀಕ್ಷೆ ನಡೆಸಲಾಗುವುದು
- ಮಾರ್ಗಸೂಚಿಗಳ ಪ್ರಕಾರ ಕೊವಿಡ್-19 ಸೋಂಕು ತಗುಲಿದ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ಜನರನ್ನು ಏಳು ದಿನಗಳವರೆಗೆ ಮನೆಯಲ್ಲಿಯೇ ಕ್ವಾರಂಟೈನ್ ಮಾಡಬೇಕು. ತದನಂತರ ಅವರ ಬಿಡುಗಡೆ ವೇಳೆಯಲ್ಲಿ ಮತ್ತೊಮ್ಮೆ ಕೊವಿಡ್-19 ಸೋಂಕು ಪರೀಕ್ಷೆಯ ಅಗತ್ಯವಿರುವುದಿಲ್ಲ.

ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಮಂದಿಗೆ ಸೋಂಕು:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ ರಾಜ್ಯದಲ್ಲಿ ಒಂದೇ ದಿನ 40,000ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 40,499 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 21 ಮಂದಿ ಮೃತಪಟ್ಟಿದ್ದು, 23,209 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 2,67,650 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
The Karnataka government issued new guidelines for testing, quarantine and home isolation of Covid-19 patients. Details here.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X