ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನಿಗೆ 'ಐ ಲವ್ ಯೂ' ಮೆಸೇಜ್ ಕಳಿಸಿ ನೋಡಿ!

By Prasad
|
Google Oneindia Kannada News

'ಗಂಡನೊಂದಿಗೆ ಸುಖದಿಂದ ಬಾಳುವುದು ಹೇಗೆ?' ಎಂಬ ವಿಷಯ ಕುರಿತು ಒಂದು ಸೆಮಿನಾರ್ ಆಯೋಜಿಸಲಾಗಿತ್ತು. ಇಂಥದೊಂದು ವಿಷಯದ ಬಗ್ಗೆ ಎಂದೂ ಚರ್ಚೆ ನಡೆಸದ, ಕೂದಲನ್ನು ಭುಜದ ಮೇಲೆ ಕತ್ತರಿಸಿಕೊಂಡ, ಸ್ಲೀವ್ಲೆಸ್ ಬ್ಲೌಸ್ ನಾರಿಯರು ಆ ಚರ್ಚಾಕೂಟಕ್ಕೆ ಹೆಗಲಿಗೆ ವ್ಯಾನಿಟಿ ಬ್ಯಾಗ್ ತಗಲಿಸಿಕೊಂಡು, ಸೊಂಟ ಅಲ್ಲಾಡಿಸಿಕೊಂಡು ಆಗಮಿಸಿದ್ದರು.

ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು. "ನಿಮ್ಮಲ್ಲಿ ಎಷ್ಟು ಜನರು ನಿಮ್ಮ ಗಂಡನನ್ನು ಪ್ರೀತಿಸುತ್ತೀರಿ?"

ಈ ಪ್ರಶ್ನೆಗೆ ಬಹುತೇಕ ಎಲ್ಲ ಮಹಿಳಾಮಣಿಗಳು ಕೈಎತ್ತಿದರು. ಕೈಕೆಳಗೆ ಇಳಿಯುತ್ತಿದ್ದಂತೆ ಚಪ್ಪಾಳೆಗಳ ಸುರಿಮಳೆ.

ನಂತರ, "ಕೊನೆಯ ಬಾರಿಗೆ ನಿಮ್ಮಲ್ಲಿ ಎಷ್ಟು ಜನರು, ಐ ಲವ್ ಯೂ ಅಂತ ಬಾಯಿಬಿಟ್ಟು ಹೇಳಿದ್ದೀರಿ?"

ಪ್ರಶ್ನೆ ಕಿವಿಗೆ ಬೀಳುತ್ತಿದ್ದಂತೆ, ಅನೇಕರು ಇಂದೇ ಐ ಲವ್ ಯೂ ಅಂತ ಹೇಳಿದೆ ಅಂತ ಉತ್ತರ ಕೊಟ್ಟರೆ, ಹಲವಾರು ಮಹಿಳೆಯರು ನಿನ್ನೆ, ಮೊನ್ನೆ, ಲಾಸ್ಟ್ ಸಂಡೇ, ಐ ಡೋಂಟ್ ರಿಮೆಂಬರ್ ಮುಂತಾದ ಉತ್ತರಗಳು ಕೆಂಪು ಕೆಂಪು ಲಿಪ್ ಸ್ಟಿಕ್ ಮೆತ್ತಿಕೊಂಡ ತುಟಿಯ ನಡುವಿನಿಂದ ಹೊರಬಿದ್ದವು.

ಅವರಿಗೆ ಮತ್ತೊಂದು ಕೆಲಸ ನೀಡಲಾಯಿತು. ನಿಮ್ನಿಮ್ಮ ಗಂಡಂದಿರಿಗೆ 'ಐ ಲವ್ ಯೂ, ಸ್ವೀಟ್ ಹಾರ್ಟ್' ಎಂಬ ಸಂದೇಶವನ್ನು ಈಗಲೇ ಕಳುಹಿಸಬೇಕು ಎಂದು ಆದೇಶಿಸಲಾಯಿತು. ವ್ಯಾನಿಟಿ ಬ್ಯಾಗಿಂದ ಎಲ್ಲರೂ ಸ್ಮಾರ್ಟ್ ಫೋನ್ ಹೊರತೆಗೆದು ಹೇಳಿದ ಸಂದೇಶವನ್ನು ಕಳುಹಿಸಿದರು.

ಗಂಡಂದಿರಿಂದ ಸಂದೇಶ ವಾಪಸ್ ಬರುತ್ತಿದ್ದಂತೆ ಪಕ್ಕದವರೊಂದಿಗೆ ಫೋನನ್ನು ಬದಲಾಯಿಸಿಕೊಂಡು ಆ ಸಂದೇಶವನ್ನು ಗಟ್ಟಿಯಾಗಿ ಓದುವಂತೆ ತಿಳಿಸಲಾಯಿತು. ಎಲ್ಲರೂ ಮೊಬೈಲನ್ನು ಬದಲಾಯಿಸಿಕೊಂಡರೂ, ಅವರವರಲ್ಲಿಯೇ ಗುಸುಗುಸು ಆರಂಭವಾಯಿತು.

ಗಂಡಂದಿರಿಂದ ವಾಪಸ್ ಬಂದ ಉತ್ತರಗಳು ಹೀಗಿದ್ದವು :

1) ನನ್ನ ಎರಡು ಮಕ್ಕಳ ಮುದ್ದಿನ ತಾಯಿಯೇ, ಹುಷಾರಾಗಿದ್ದೀ ತಾನೆ?

2) ಈ ಹೊತ್ತಲ್ಲಿ, ಕಾರನ್ನು ಎಲ್ಲಾದ್ರೂ ಗುದ್ದಿದೆಯಾ?

3) ಏನ್ ಹೇಳ್ತಾ ಇದ್ದಿಯಾ, ಅರ್ಥಾನೇ ಆಗ್ತಿಲ್ಲ!

4) ಈಗೇನು ಮಾಡ್ಕೊಂಡಿದ್ದಿಯಾ ಮಾರಾಯ್ತೀ, ಈ ಜೀವನದಲ್ಲಿ ನಾನೆಂದೂ ನಿನ್ನ ಕ್ಷಮಿಸಲ್ಲ.

5) ?!?!?!#*@&$!

6) ಸುಮ್ನೆ ಸುತ್ತಿಬಳಸಿ ಏನೇನೋ ಮಾತಾಡಬೇಡ, ನಿನಗೆಷ್ಟು ದುಡ್ಡು ಬೇಕು ಥಟ್ಟನೆ ಹೇಳು!

7) ನಾನೇನು ಕನಸು ಕಾಣ್ತಿಲ್ಲ ತಾನೆ?

8) ನೀನು ಈ ಮೆಸೇಜನ್ನು ನಿಜವಾಗಿಯೂ ಯಾರಿಗೆ ಕಳಿಸಿದ್ದಿ ಅಂತ ನಿನ್ನ ಅಮ್ಮನ ಮೇಲೆ ಪ್ರಮಾಣ ಮಾಡಿ ಹೇಳದಿದ್ದರೆ, ಇಂದು ರಾತ್ರಿ ನಿನ್ನ ತಿಥಿ ಗ್ಯಾರಂಟಿ.

9) ಸ್ವೀಟಿ, ಎಲ್ಲಿದ್ದಿಯಾ ಈಗ? ಜಾಸ್ತಿ ಕುಡೀಬೇಡ ಅಂತ ಬೆಳಿಗ್ಗೆ ತಾನೆ ಹೇಳಿದ್ದೆನಲ್ಲ!

10) ಹೂ ಈಸ್ ದಿಸ್?

ಇದನ್ನು ಓದಿದ ಮದುವೆಯಾದ ಹೆಂಗಸರು ತಮ್ಮ ಗಂಡನಿಗೆ 'ಐ ಲವ್ ಯೂ, ಹನಿ' ಅಂತ ಸಂದೇಶ ಕಳಿಸಿ ನೋಡಿರಿ. ಗಂಡಸರು ಕೂಡ ತಮ್ಮ ಹೆಂಡತಿಗೂ ಇದೇ ಬಗೆಯ ಎಸ್ಎಮ್ಎಸ್ ಕಳಿಸಿ ಉತ್ತರ ಏನು ಬರುತ್ತದೆಂದು ಕುತೂಹಲದಿಂದ ನೋಡಬಹುದು. ಮದುವೆಯಾಗಲು ತುದಿಗಾಲಿಲಲ್ಲಿ ನಿಂತವರು ನೀತಿಪಾಠವನ್ನು ಕಲಿಯಬಹುದು.

English summary
Husband wife jokes. There was a group of women gathered at a seminar on how to live in a loving relationship with your husband. The women were asked, How many of you love your husbands?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X