• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಟ್ಸಾಪ್ ಜೋಕ್: ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ, ಆದರೆ...

|

ಮೊಬೈಲ್ ಬಂದ ಬಳಿಕ ಕೇವಲ ಒಂದು ದಶಕದ ಅವಧಿಯಲ್ಲಿ ನಮ್ಮ ಬದುಕು ಸಾಕಷ್ಟು ಬದಲಾಗಿದೆ. ಬದಲಾಗುತ್ತಲೇ ಇದೆ. ಮೊಬೈಲ್ ಎಷ್ಟೇ ಪ್ರಯೋಜನಕಾರಿಯಾದರೂ ಕೊನೆಗೆ ನಮ್ಮಲ್ಲಿ ಉಳಿಯುವ ಮಾತು, ಮೊಬೈಲ್ ಇಲ್ಲದ ಆ ಕಾಲವೇ ಚೆಂದ ಎಂದು. ಮೊಬೈಲ್ ಇಲ್ಲದೆ ಇದ್ದರೂ ನಮ್ಮ ಹಿರಿಯರ ನಡುವೆ ಸಂವಹನ ಚೆನ್ನಾಗಿತ್ತು. ಹೇಗಿತ್ತು ಎಂಬುದನ್ನು ಈ ಹಿರಿಯ ದಂಪತಿಯ ಮಾತುಕತೆಯಲ್ಲಿ ಓದಿ...

ಇದು ಹಿರಿಯ ದಂಪತಿಗಳ ಸಲ್ಲಾಪ

ಕನ್ನಡಕವನ್ನು ಒರೆಸುತ್ತಾ ಆ ಹಿರಿಯ ಜೀವ ತನ್ನ ಪತ್ನಿಗೆ ಹೇಳಿದ ಮಾತಿದು:

ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ.

ಪತ್ನಿ: ಆದರೆ ಸರಿಯಾಗಿ 5 ಗಂಟೆ 55 ನಿಮಿಷಕ್ಕೆ , ನಾನು ನೀರಿನ ಲೋಟ ಹಿಡಿದುಕೊಂಡು ಬಾಗಿಲಿಗೆ ಬಂದು ನಿಲ್ಲುತ್ತಿದ್ದೆ. ಅದೇ ಸಮಯಕ್ಕೆ ಕೆಲಸ ಮುಗಿಸಿಕೊಂಡು ನೀವು ಬಾಗಿಲಲ್ಲಿ ಬಂದು ನಿಲ್ಲುತ್ತಿದ್ದಿರಿ.

ಮನೆಕೆಲಸಕ್ಕೆ ಕೆಲಸದವಳನ್ನು ಇಟ್ಟುಕೊಂಡಿದ್ದೆಲ್ವೋ, ಏನೋ ಮಾಡ್ದೆ?

ಪತಿ: ಹಾಂ! ನಾನು ಮಾಡಿದ 30 ವರ್ಷಗಳ ನೌಕರಿಯಲ್ಲಿ ನನಗೆ ತಿಳಿಯದ ವಿಷಯ ಅದೊಂದೇ,,,, ನೀನು ನೀರು ತರುತ್ತೀಯಾ ಎಂದು ನಾನು ಸಮಯಕ್ಕೆ ಸರಿಯಾಗಿ ಬರುತ್ತಿದ್ದೆನೋ? ನಾನು ಬರುತ್ತೇನೆಂದು ನೀರು ತರುತ್ತಿದ್ದೆಯೋ ತಿಳಿಯದಾಯಿತು.

ಪತ್ನಿ: ನಿಮಗೆ ನೆನಪಿದೆಯಾ ? ನೀವು ರಿಟೈರ್ ಆಗುವ ಮುಂಚೆ ನಿಮಗೆ ಡಯಾಬಿಟೀಸ್ ಇರಲಿಲ್ಲ .ಆಗ ನಾನು ಪಾಯಸ ಮಾಡಿದಾಗ ನೀವು ಹೇಳುತ್ತಿದ್ದಿರಿ,,,, ಇಂದು ಮಧ್ಯಾಹ್ನ ಅನಿಸಿತ್ತು ಕಣೆ ಪಾಯಸ ತಿನ್ನಬೇಕಂತ.

ಪತಿ: ನಿಜಾ ಕಣೇ,,office ನಿಂದ ಹೊರಡುವಾಗ,,ನನ್ನ ಮನದ ಬಯಕೆ ಏನಿರುತ್ತಿತ್ತೊ, ಅದೇ ಅಡುಗೆ ನೀನು ಮಾಡಿಟ್ಟಿರುತ್ತಿದ್ದೆ.

ಹಾಸ್ಯ : ಗಂಡನಿಗೆ ಹೆಂಡತಿ ಕಳಿಸಿದ ಆ ಎರಡು ಮೆಸೇಜ್

ಪತ್ನಿ: ನಿಮಗೆ ನೆನಪಿದೆಯಾ ? ನನ್ನ ಮೊದಲ ಡೆಲಿವರಿಗೆ ನಾನು ತವರಿಗೆ ಹೋಗಿದ್ದೆ. ನನಗೆ ನೋವು ಶುರುವಾದಾಗ ನನಗನಿಸುತ್ತಿತ್ತು , ಅವರು ಈಗ ನನ್ನ ಜೊತೆ ಇದ್ದಿದ್ದರೇ ಎಷ್ಟೊ ಸಮಾಧಾನವೆನಿಸುತ್ತಿತ್ತು ಅಂತ. ನಾನು ಅಂದುಕೊಂಡ ಒಂದು ಗಂಟೆಯಲ್ಲಿ ನೀವು ನಿಜವಾಗಿ ಬಂದು ನನ್ನ ತಲೆ ಸವರುತ್ತಿದ್ದಿರಿ.

ಪತಿ: ಅವತ್ತು ಯಾಕೋ ನಿನ್ನ ನೋಡಬೇಕು ಅಂತಾ ತುಂಬಾ ಅನಿಸಿತ್ತು ನನಗೆ.

ಪತ್ನಿ: ಒಮ್ಮೊಮ್ಮೆ ನೀವು ಕಣ್ಣಲ್ಲಿ ಕಣ್ಣಿಟ್ಟು ಕವಿತೆ ಹೇಳುತ್ತಿದ್ದಿರಿ, ನೆನಪಿದೆಯಾ?

ಪತಿ: ಆಗ ನಾಚಿಕೆಯಿಂದ ನಿನ್ನ ಕಣ್ಣ ರೆಪ್ಪೆ ಮುಚ್ಚಿಕೊಳ್ಳುತ್ತಿತ್ತು. ಅದು ನೀನು ಕವಿತೆಗೆ ಕೊಟ್ಟ like ಎಂದುಕೊಳ್ಳುತ್ತಿದ್ದೆ.

ಪತ್ನಿ: ನನಗೆ ನೆನಪಿದೆ, ಒಂದು ಸಂಜೆ ಚಹಾ ಮಾಡುವಾಗ ನಾನು ಕೈ ಸುಟ್ಟು ಕೊಂಡಿದ್ದೆ. ಅದೇ ಸಂಜೆ ನೀವು ಬರ್ನಾಲ್ ತಂದು ಇದನ್ನು ಕಪಾಟಿನಲ್ಲಿಡು ಅಂದಿದ್ದಿರಿ.

ಪತಿ: ನಾನು ನೋಡಿದ್ದೇ ಕಣೇ, ಟ್ಯೂಬ್ ಖಾಲಿಯಾಗಿತ್ತು. ಬೇಕಾಗುತ್ತೆ ಅಂತಾ ತಂದಿದ್ದೆ.

ಪತ್ನಿ: ಕೆಲವೊಮ್ಮೆ ನೀವು ಸಂಜೆ office hours ಮುಗಿದ ಮೇಲೆ ಮಾಮೂಲಿ ಜಾಗಕ್ಕೆ ಬಾ, ಇಬ್ಬರೂ cinema ನೋಡಿ, ಹೊರಗೆ ಊಟ ಮಾಡಿ ಬರೋಣ ಅಂತ.

ಪತಿ: ಹಾಗೇ ನಿನ್ನ ಕರೆದಾಗೆಲ್ಲಾ ನೀನು, ನಾನು ಅಂದುಕೊಂಡ ಸೀರೆಯನ್ನೆ ತೊಟ್ಟು ಬರುತ್ತಿದ್ದೆ.

ಮಳೆ ಬರ್ತಿದೆ ಅಂತ ಹೇಳೊ ಅಧಿಕಾರ ಕೂಡ ಗಂಡನಿಗೆ ಇಲ್ವಾ?

ಆಗ ಪತ್ನಿ ಪತಿಯ ಬಳಿ ಬಂದು, ಕೈ ಹಿಡಿದು ಹೇಳಿದಳು:

"ನಿಜ, ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ."

ಆದರೆ,,,,,,,,,,,,,,,

ನಾವಿಬ್ಬರೂ ಇದ್ದೆವು ಜೊತೆಜೊತೆಯಾಗಿಯೇ.

ಪತ್ನಿ: ಇವತ್ತು ಮಗ-ಸೊಸೆ ಒಟ್ಟಿಗಿರುತ್ತಾರೆ. ಆದರೆ ಮಾತಿಲ್ಲ, WhatsApp ಇದೆ. ನಂಟಿಲ್ಲ, Tag ಇದೆ.

Chemistry ಇಲ್ಲ, Comment ಇದೆ. Love ಇಲ್ಲ, Like ಇದೆ. ಮಧುರ ಮುನಿಸಿಲ್ಲ, Unfriend ಇದೆ. ಅವರಿಗೆ ಮಕ್ಕಳು ಬೇಕಾಗಿಲ್ಲ, ಬದಲಿಗೆ Candy crush saga ,Temple Run,Subway surface ಬೇಕಾಗಿದೆ.

ಪತಿ: ಬಿಡು ಇದೆಲ್ಲಾ ಮಾತುಗಳನ್ನು , ನಾವೀಗ vibrate mode ನಲ್ಲಿದ್ದೇವೆ. ನಮ್ಮ Batteryಲಿ ಕೂಡ one line ಮಾತ್ರ ಉಳಿದಿದೆ. ,,,,,,,,,,,,ಎಲ್ಲಿ ಹೊರಟೆ?

ಪತ್ನಿ: Tea ಮಾಡೋದಕ್ಕೆ.

ಪತಿ: ನಾನೀಗ ಅದನ್ನೇ ಹೇಳಬೇಕೆಂದಿದ್ದೆ, ಚಹಾ ಮಾಡು ಅಂತಾ.

ಪತ್ನಿ: ಗೊತ್ತು ನನಗೆ, ನಾನಿನ್ನೂ Coverage ನಲ್ಲೇ ಇದ್ದೀನಿ. Message ಕೂಡ ತಕ್ಷಣ ತಲುಪುತ್ತೆ.

ಇಬ್ಬರೂ ನಗುತ್ತಾ ಹೇಳುತ್ತಾರೆ:

ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ

English summary
A humorous conversation between aged couple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X