ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮಾ, ತಿಂಗಳಿಗೆ ಒಂದೂವರೆ ತಿಂಗಳಿಗೆ ಬರುವ ಕರ್ನಾಟಕ ಬಂದ್ ಅಂದರೇನು?

|
Google Oneindia Kannada News

ತಿಂಗಳಿಗೆ, ಒಂದೂವರೆ ತಿಂಗಳಿಗೊಮ್ಮೆ ಬರುತ್ತಲ್ಲಾ 'ಕರ್ನಾಟಕ ಬಂದ್' ಅಂತ ಹಾಗಂದರೆ ಏನಮ್ಮ? ಐದು ವರ್ಷದ ಮಗು ಕುತೂಹಲದಿಂದ ತನ್ನ ತಾಯಿಯನ್ನು ಕೇಳಿತು.

ಅವತ್ತು ಬಸ್ಸುಗಳು ಓಡಾಡಲ್ಲ ಅನ್ನೋಣ ಅಂದ್ಕೊಂಡಳು ತಾಯಿ, ಅಷ್ಟರಲ್ಲಿ ಬಸ್ ವೊಂದು ಜೋರಾಗಿ ಹಾರ್ನ್ ಮಾಡುವ ಸದ್ದು ಕೇಳಿಸಿತು. ಎಲ್ಲ ಅಂಗಡಿಗಳು ಮುಚ್ಚಿರುತ್ತಪ್ಪಾ ಅನ್ನುವಷ್ಟರಲ್ಲಿ ಪಕ್ಕದ ಮನೆಯ ಗಿಡ್ಡ ಸುಬ್ಬಿಯ ಮಗಳು, ತಗೋ ಮುಕುಂದ ಲಾಲಿಪಪ್ ಅಂತ ತಂದುಕೊಟ್ಟಳು.

ಒಳ್ಳೆ ಉದ್ದೇಶಕ್ಕೋಸ್ಕರ ಮಾಡುವ ಹೋರಾಟ ಅದು ಅಂತ ಧೈರ್ಯ ಮಾಡಿ ಹೇಳಿಬಿಡೋಣ ಅಂದುಕೊಳ್ಳುವಷ್ಟರಲ್ಲಿ. ಯಾರೆಂದರೆ ಅವರು ಬಂದ್ ಕರೆದುಬಿಟ್ಟರೆ ಮಾಡೋಕಾಗುತ್ತಾ ಅಂತ ಟಿವಿಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಿನಲ್ಲಿ ಬುಸುಗುಡುತ್ತಿದ್ದ. ಇಷ್ಟು ಚಿಕ್ಕ ಮಗೂಗೆ ಅದೆಲ್ಲ ಹೇಗೆ ಗೊತ್ತಾಗಬೇಕು? ಏನೋ ಒಂದು ಹೇಳಿ ಸಂಭಾಳಿಸಿದರೆ ಆಯಿತು ಅಂತ ನೀನೀಗ ಮಲಗ್ತಿಯೋ ಇಲ್ಲವೋ ಅಂತ ದೊಡ್ಡ ಧ್ವನಿಯಲ್ಲಿ ರೇಗಿದಳು ತಾಯಿ.

ನೀನು ಹೇಳಿದರೆ ನಾನು ಮಲಗಬೇಕಾ? ಕೇಳಿದ ಪ್ರಶ್ನೆಗೆ ಉತ್ತರ ಕೊಡು. ಇಲ್ಲದಿದ್ದರೆ ನಾನು ಮಲಗಲ್ಲ ಎಂದ ಮುಕುಂದ.

ಆಗ ಆ ತಾಯಿ ಗೆಲುವಿನ ನಗೆ ತಂದುಕೊಂಡು ಹೇಳಿದಳು: ಇದೇ ಕಣಪ್ಪ ಬಂದ್ ಅಂದರೆ...

ಆದರೆ, ಮುಂಚೆ ಹೀಗಿರ್ತಿರಲಿಲ್ಲ. ನೀನು ಊಟ ಮಾಡುವಾಗ ನೋಡ್ತೀಯಲ್ಲಾ, ಆ ಬಸ್ಸು- ಅಂಥದ್ದು ಯಾವುದೂ ರಸ್ತೆ ಮೇಲೆ ಬರ್ತಿರಲಿಲ್ಲ.

ಅಷ್ಟರಲ್ಲಿ ಮಗು, ಅಮ್ಮ ಅಲ್ಲಿ ಬಸ್ಸು ಬಸ್ಸು ಬಸ್ಸು...

ಈ ಬೀದಿ ಕೊನೆಯಲ್ಲಿರುವ ರತ್ನಾಕರ ಶೆಟ್ಟರ ಅಂಗಡಿ ಮುಚ್ಚಿರ್ತಿತ್ತು.

ಅಲ್ನೋಡು ಅಲ್ಲೂ ಸಿಕ್ಕಾಪಟ್ಟೆ ಜನ ಇದ್ದಾರೆ. ನೀನು ಸುಳ್ಳು ಹೇಳ್ತಿದೀಯಾ ಎಂದು ಸೆಟಗೊಂಡಿತು ಮಗು.

ಅಷ್ಟರಲ್ಲಿ ಪತಿರಾಯರು ಮನೆಗೆ ಬಂದರು. ಏನೇ ಅದು ಆ ಮಗು ಪ್ರಶ್ನೆಗೆ ಉತ್ತರ ಹೇಳಕ್ಕಾಗಲ್ವ ನಿನಗೆ ಅಂತ ತಮಾಷೆಯಾಗಿ ರೇಗಿದರು.

ನೀವೇ ಉತ್ತರ ಹೇಳಿ ಎಂದು ಅಡುಗೆ ಮನೆಗೆ ಎದ್ದುಹೋದಳು ಆಕೆ.

ಮಗು, ಅಪ್ಪನನ್ನು ಕೇಳುವುದಕ್ಕೆ ಶುರು ಮಾಡಿತು. ನೀನಾದರೂ ಹೇಳಪ್ಪಾ?

ಈತ ಹಳೆ ಸಿನಿಮಾಗಳ ಸಿಡಿ ಹುಡುಕುವುದಕ್ಕೆ ಶುರು ಮಾಡಿದ.

ನಾನೂ ಅದಕ್ಕೆ ಬಂದೆ. ಯಾವುದಾದರೂ ಹಳೆ ಸಿನಿಮಾದಲ್ಲಾದರೂ ಬಂದ್ ಅಂದರೆ ಏನು ಅಂತ ಮಗೂಗೆ ತೋರಿಸಬೇಕು ಕಣ್ರೀ ಎಂದು ಬಂದ್ ಸೀನ್ ಇರುವ ಸಿನಿಮಾಗಳ ಸಿಡಿಗೆ ಹುಡುಕಾಟ ಶುರು ಮಾಡಿದರು.

English summary
June 12th Karnataka bandh called by pro Kannada organisations. So, on the backdrop of this, here is a joke on that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X