• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಮನ್ ವೆಡ್ಸ್ ಪ್ರಿಯಾಂಕ - ಬೋರ್ಡ್ ನೋಡಿ ಬೇಸ್ತುಬಿದ್ದ ಸುಬ್ಬ!

|

ಮದುವೆಯಲ್ಲಿ ಪರಿಚಿತರ ಆಡಂಬರದ ಮೆರೆದಾಟದ ನಡುವೆ ಸದ್ದಿಲ್ಲದೆ ನುಗ್ಗಿಬಂದು ಭರ್ತಿ ಜಮಾಯಿಸಿ ಹೋಗುವ ಅಪರಿಚಿತನ್ನು ಗುರುತಿಸುವುದು ಹೇಗೆ? ಅದರಲ್ಲೂ ಅಪರಿಚಿತರು ಮಟ್ಟಸವಾಗಿ ಬಟ್ಟೆಬರೆ ಧರಿಸಿ ಬಂದರಂತೂ, ಇವರು ಹೆಣ್ಣಿನ ಕಡೆಯವರಾ, ಗಂಡಿನ ಕಡೆಯವರಾ ಎಂದು ಗುರುತಿಸುವುದು ಸಾಧ್ಯವೇ ಇಲ್ಲ.

ವಿಐಪಿ ಕಾರ್ಯಕ್ರಮಗಳಂತೆ ಮದುವೆಯಾಗುವ ಕಲ್ಯಾಣಮಂಟಪದಲ್ಲಿ ಬರುವವರನ್ನು ಗುರುತಿಸಲು ಗುರುತಿನ ಚೀಟಿಯನ್ನು ಕೇಳುವವರೂ ಯಾರೂ ಇರುವುದಿಲ್ಲ. ಕಳ್ಳಕಾಕರ ಮೇಲೆ ಒಂದು ಕಣ್ಣಿಡಬಹುದಾದರೂ, ಉಣ್ಣುವುದರ ಜೊತೆಗೆ ತಾಂಬೂಲವನ್ನೂ ಇಸಿದುಕೊಂಡು ಹೋಗುವವರನ್ನು ಹೇಗೆ ಪತ್ತೆ ಹಚ್ಚುವುದು?

ಹಾಸ್ಯ : ಪತ್ನಿ ಗಂಡನನ್ನೇ ದುರುಗುಟ್ಟಿ ನೋಡಿ ಬೈದಿದ್ದೇಕೆ?

ಏನೇ ಆಗಲಿ, ಹೀಗೊಂದು ನಡೆದಿರಬಹುದಾದ ಕಾಲ್ಪನಿಕ ಘಟನೆಯನ್ನು ನೋಡಿ, ಮುಂದೇನು ಮಾಡಬೇಕೆಂದು ನಿರ್ಧರಿಸಿ, ಸಾಧ್ಯವಾದರೆ ಮನಬಿಚ್ಚಿ ನಕ್ಕುಬಿಡಿ.

ಅಂದು ಸುಬ್ಬನಿಗೆ ಸಿಕ್ಕಾಪಟ್ಟೆ ಹಸಿವೆಯಾಗಿತ್ತು. ಹಾಕ್ಕೊಂಡಿದ್ದ ಜುಬ್ಬಾಗೆ ತೂತು, ಅಂದ್ರೆ ನೈಯಾಪೈಸೆ ಕಾಸಿಲ್ಲ. ಇದ್ದದ್ದು ಉಂಡಮೇಲೆ ಕೈಬಾಯಿ ಒರೆಸಿಕೊಳ್ಳಲು ಬೇಕಾದಂಥ ಕರ್ಚೀಫು ಮತ್ತು ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಮಿದುಳು!

ವೆಸ್ಟ್ ಆಫ್ ಕಾರ್ಡ್ ರೋಡಲ್ಲಿ ಝಗಮಗಿಸುವ ಕಲ್ಯಾಣಮಂಟಪಕ್ಕೆ ನುಗ್ಗೇಬಿಟ್ಟ. ಪ್ರತಿಬಾರಿ ಕೈಯಲ್ಲೊಂದು ಮೂವತ್ತು ರುಪಾಯಿಯ ಬೊಕೆ ಹಿಡಿದುಕೊಂಡು ಹೋಗೋನು, ಈ ಬಾರಿ ಪ್ರತಿಬಾರಿಯಂತೆ ಹೇಗೂ ಸಿಕ್ಕಿಬೀಳಲ್ಲ ಅಂತ ಕಲ್ಯಾಣಮಂಟಪಕ್ಕೆ ನುಗ್ಗೇಬಿಟ್ಟ.

ಹಾಸ್ಯ : love ಫೈಲ್ ಆದವರು ಈ ಕಾಲದಲ್ಲಿ ಏನ್ಮಾಡ್ತಾರೆ?

ಬಾಗಿಲಲ್ಲೇ ನಿಂತಿದ್ದ ಬೋಳುತಲೆಯವನ ಬುರುಡೆಯೊಳಗೆ ಸುಬ್ಬನಿಗಿಂತ ಅಸಾಧ್ಯದ ಮಿದುಳಿದೆಯೆಂದು ಇವನಿಗೆ ಹೇಗೆ ಗೊತ್ತಾಗಬೇಕು? ಬಟಾಟೆಯಂಥ ತಲೆಯವನ ಕೈಯಲ್ಲಿ ಸಿಕ್ಕೇಬಿದ್ದ ಸುಬ್ಬ.

ಬಾಲ್ಡಿ : ನಮಸ್ಕಾರ, ನೀವು ಯಾರು ಅಂತ ಗೊತ್ತಾಗಲಿಲ್ಲ. ಎಲ್ಲೋ ನೋಡಿರುವ ಹಾಗಿದೆಯಲ್ಲ?

ಸುಬ್ಬ : ಕರೆಕ್ಟ್ ಕರೆಕ್ಟ್. ನಾನು ಹೆಣ್ಣಿನ ಕಡೆಯವನು. ಮದುವೆಯಾಗುತ್ತಿರುವ ವಧುವಿನ ಚಿಕ್ಕಮ್ಮನ ಸೋದರ ಸಂಬಂಧಿ ನಾನು. ನಿಶ್ಚಿತಾರ್ಥಕ್ಕೂ ಬಂದಿದ್ದೆ. ಅಲ್ಲೇ ನಾನು ನಿಮ್ಮನ್ನು ನೋಡಿದ್ದು, ತಕ್ಷಣ ಗೊತ್ತಾಗಲಿಲ್ಲ. ಅರೇಂಜ್ಮೆಂಟ್ಸ್ ಎಲ್ಲ ಹ್ಯಾಗಿದೆ? ನೀವೇನೇ ಹೇಳಿ ಸಾರ್, ಹೀಗೆ ಬಾಲ್ಡ್ ಆಗಿರೋದೇ ಫ್ಯಾಷನ್ನು. ಬನ್ನಿ ಸಾರ್ ಊಟ ಮಾಡೋಣ.

ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ಸುಬ್ಬನ ಕಪಾಳಕ್ಕೆ ಒಂದೇಟು ಬಿದ್ದಿತ್ತು, ಕಿವಿ ಕೆಂಪಗಾಗಿತ್ತು, ಸುತ್ತಮುತ್ತಲೆಲ್ಲ ಜನ ಜಮಾಯಿಸಿಬಿಟ್ಟಿದ್ದರು.

ಬಾಲ್ಡಿ : ಒಂದು ಬಾಳೆಎಲೆ ಊಟಕ್ಕೆ ರೇಟು ಎಷ್ಟು ಗೊತ್ತಾ? ಐನೂರು ರುಪಾಯಿ. ಹಣ ಹೊಂದಿಸೋಕೆ ಎಷ್ಟು ಕಷ್ಟಪಟ್ಟಿದ್ದೀನಿ ಅಂತ ನನಗೆ ಗೊತ್ತು. ನನ್ ಮಗನೆ ಬುರುಡೆ ಬಿಡ್ತಿದ್ದಿಯಾ? ಬಿಟ್ಟಿ ಸಿಕ್ಕಿದೆಯಂತೆ ಊಟಕ್ಕೆ ನುಗ್ತಿದ್ದಿಯಾ? (ಅಂತ ಇನ್ನೊಂದು ಬಿಟ್ಟ ಬಾಲ್ಡಿ.)

ಸುಬ್ಬ : (ಜೇಬಲ್ಲಿದ್ದ ಕರ್ಚೀಫನ್ನು ಕಣ್ಣಿಗೆ ಒತ್ತಿಕೊಂಡು) ನಿಮಗೆ ಹೇಗೆ ಗೊತ್ತಾಯ್ತು ಸಾರ್?

ಬಾಲ್ಡಿ : ಹೆಣ್ಣಿನ ಕಡೆಯವ್ನಂತೆ, ಎಂಗೇಜ್ಮೆಂಟಲ್ಲಿ ಭೇಟಿಯಾಗಿದ್ದನಂತೆ! ಹೆಣ್ಣೂ ಇಲ್ಲ ಮಣ್ಣೂ ಇಲ್ಲ, ಇಲ್ಲಿ ನಡೀತಿರೋದು ಗಂಡು ಗಂಡಿನ ಮದುವೆ.

ಅಂತ ಹೇಳಿ ಮತ್ತೆ ಕೈ ಎತ್ತುವಷ್ಟರಲ್ಲಿ ಸುಬ್ಬ ಕಾಲಿಗೆ ಬುದ್ದಿ ಹೇಳಿದ್ದ. ಹೊರಗೆ ಬೋರ್ಡ್ ನೋಡ್ತಾನೆ "ಸುಮನ್ ವೆಡ್ಸ್ ಪ್ರಿಯಾಂಕ" ಅಂತ ಬರೆದಿತ್ತು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jokes for the day : Hungry Subbu gets slapped for getting into marriage hall. How he gets caught by an unknown person?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more