• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹ್ಯಾಗಿತ್ತು ನನ್ನ ಪ್ಲಾನ್? ಸಿಕ್ಕಿಬಿದ್ದೆಯಲ್ಲ ಜಾನ್!

|

ಗಂಡ ಜಾನ್ ಎಷ್ಟೇ ಸುಖದಿಂದ ನೋಡಿಕೊಳ್ಳುತ್ತಿದ್ದರೂ ಆತನ ಮೇಲೆ ಹೆಂಡತಿ ಸೂಸನ್‌ಗೆ ಅನುಮಾನ. ಮನೆಯಲ್ಲಿಯೇ ಒಂದು ರೂಮ್‌ನಲ್ಲಿ ವಾಸವಿದ್ದ ಕೆಲಸದ ಆಯಾಳೊಂದಿಗೆ ಗಂಡ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಗುಮಾನಿ ಇತ್ತು. ಆದರೆ, ಗಂಡನನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಆಕೆ ಆಗಿರಲಿಲ್ಲ.

ಪ್ರತಿದಿನ ಜಾನ್ ಕೆಲಸದಿಂದ ಲೇಟಾಗಿ ಬರುತ್ತಿದ್ದ, ಯಾವುದೋ ಸಮಯದಲ್ಲಿ ಮೆಲ್ಲಗೆ ಪಕ್ಕದಲ್ಲಿ ಬಂದು ನಡುರಾತ್ರಿಯಲ್ಲಿ ಮಗಲುತ್ತಿದ್ದ. ಗಂಡ ಕೆಲಸದಿಂದ ಇನ್ನೇನು ಬರುತ್ತಾನೆ ಎಂಬ ಹೊತ್ತಿನಲ್ಲಿ ಆಯಾಳ ಕೋಣೆಯಲ್ಲಿ ಏನೋ ನಡೆಯುತ್ತಿರುವ, ಮುಲುಕಾಡುತ್ತಿರುವ ಸದ್ದು ಆಕೆಗೆ ಕೇಳುತ್ತಿತ್ತು. ಇದು ಗಂಡನ ಕೆಲಸವಲ್ಲದೆ ಬೇರಾರ ಕೆಲಸವಲ್ಲ ಎಂದು ಆಕೆ ಭಾವಿಸಿದ್ದಳು.

ಈ ಬಗ್ಗೆ ಗಂಡನನ್ನು ವಿಚಾರಿಸುವುದಾದರೂ ಹೇಗೆ? ಕೇಳಿದರೆ ಜಾನ್ ಒಪ್ಪಿಕೊಳ್ಳುತ್ತಾನಾ? ಗಂಡನನ್ನು ಹೀಗೆ ಬಿಟ್ಟರೆ ಆಗದು, ಆತನನ್ನು ರೆಡ್ ಹ್ಯಾಂಡಾಗಿ ಹಿಡಿಯಲೇಬೇಕು ಎಂದು ತೀರ್ಮಾನಿಸಿದ ಸೂಸನ್ ಒಂದು ದಿನ ಸೂಪರ್ ಡೂಪರ್ ಪ್ಲಾನ್ ಹಾಕಿದಳು.

ಒಂದು ದಿನ ಗಂಡನಿಗೆ ಹೇಳದೆ ಕೇಳದೆ ಕೆಲಸದವಳಿಗೆ ಒಂದಿಷ್ಟು ಕಾಸು ನೀಡಿ, ಆಕೆಯ ಊರಿಗೆ ರವಾನಿಸಿದಳು. ನಾಲ್ಕಾರು ದಿನ ಬರಲೇಬೇಡ ಎಂದು ಊರಿಗೆ ಸಾಗಹಾಕಿದಳು. ಈ ರಾತ್ರಿ ಎಲ್ಲಿ ಹೋಗ್ತಾನೆ ಜಾನ್, ಸಿಕ್ಕೇ ಸಿಗುತ್ತಾನೆ ಕಳ್ಳ ಎಂದು ಮನದಲ್ಲಿಯೇ ಮಂಡಿಗೆ ಮೆಲ್ಲುತ್ತ ರಾತ್ರಿಯ ತನಕ ಕಾದಳು.

ಆ ರಾತ್ರಿ ಗಂಡ ಲೇಟಾಗಿ ಬರುತ್ತಾನೆ ಎಂದು ಗೊತ್ತಿದ್ದ ಆಕೆ ರಾತ್ರಿಯುಡುಗೆ ಧರಿಸಿ ತನ್ನ ಕೋಣೆಯಲ್ಲಿ ಮಲಗದೆ ಕೆಲಸದ ಆಯಾಳ ಕೋಣೆಯಲ್ಲಿ ಲೈಟ್ ಆರಿಸಿ ಮಲಗಿದಳು. ಹನ್ನೆರಡು ಗಂಟೆ ಆಗೇಬಿಟ್ಟಿತಲ್ಲ! ಆಕೆ ಮಲಗಿದ್ದ ಕೋಣೆ ತೆರೆಯುತ್ತಿರುವ, ಬಟ್ಟೆ ಕಳಚುತ್ತಿರುವ ಸದ್ದಾಯಿತು. ಇನ್ನೇನು ಘಟಿಸಲಿದೆಯೋ ಎಂದು ಆಕೆ ಚಿಂತಿಸುತ್ತಿರುವ ಘಳಿಗೆಯಲ್ಲಿಯೇ, ಆಕೆಗೆ ಅವಕಾಶವನ್ನೇ ನೀಡದೆ ಆ ವ್ಯಕ್ತಿ ಆಕೆಯ ಮೇಲೆ ಎರಗಿದ್ದ, ಮುತ್ತಿನ ಸುರಿಮಳೆಗರೆದ.

ಇನ್ನೇನು ಆತನ ಸರಸ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಬೇಕು, ಅದೃಷ್ಟವಶಾತ್ ಆತನ ಕರಡಿ ಹಿಡಿತದಿಂದ ತಪ್ಪಿಸಿಕೊಂಡು ಇದ್ದಕ್ಕಿದ್ದಂತೆ ಸೂಸನ್ ಲೈಟ್ ಆನ್ ಮಾಡಿಬಿಟ್ಟಳು. ಆತನ ಕಡೆ ತಿರುಗದೆ "ಹ್ಯಾಗಿತ್ತು ನನ್ನ ಪ್ಲಾನ್? ಸಿಕ್ಕಿಬಿದ್ದೆಯಲ್ಲ ಜಾನ್" ಎಂದು ಚಟಕ್ಕನೆ ತಿರುಗಿದಳು. ಗಂಡನಿಗೆ ಸರ್ಪ್ರೈಸ್ ನೀಡಬೇಕೆಂದಿದ್ದ ಅವಳಿಗೇ ಸಖೇದಾಶ್ಚರ್ಯ. ಅಲ್ಲಿದ್ದದ್ದು ಗಂಡನಲ್ಲ, ಪ್ರತಿದಿನ ಅಡುಗೆ ಮಾಡುತ್ತಿದ್ದ ಮಾಣಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Adult jokes in Kannada. Wife suspects husband's fidelity. She thinks that husband has an illicit relationship with maid. She plans to catch him red handed. What is that plan? How she catches him?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more