ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡನ ಮಿಲನೋತ್ಸಾಹ ಜರ್ರನೆ ಇಳಿಸಿದ ಹೆಂಡತಿ!

|
Google Oneindia Kannada News

ಹೊಸದಾಗಿ ಮದುವೆಯಾಗಿದ್ದ ಸೋಲ್ಜರ್ ಯತೀಶ್ ಮತ್ತು ನರ್ಸ್ ಲವೀನಾ ಇನ್ನೂ ಹನಿಮೂನ್ ಕೂಡ ಮುಗಿಸಿರುವುದಿಲ್ಲ, ಆಗಲೆ ಯತೀಶ್‌ಗೆ ಕಚೇರಿಯಿಂದ ಕರೆ ಬರುತ್ತದೆ. ತುರ್ತು ಪರಿಸ್ಥಿತಿ ಇರುವುದರಿಂದ ಕೂಡಲೆ ವಾಪಸ್ ಬಂದು ಡ್ಯೂಟಿಗೆ ಸೇರಿಕೊಳ್ಳಬೇಕೆಂದು ಆಜ್ಞೆಯಾಗಿರುತ್ತದೆ. ವಿಧಿಯಿಲ್ಲದೆ ಇಬ್ಬರೂ ವಾಪಸ್ ಬಂದುಬಿಡುತ್ತಾರೆ.

ಇನ್ನೂ ಸರಿಯಾಗಿ ಸಮಾಗಮವೂ ಆಗಿರುವುದಿಲ್ಲ ಆಗಲೆ ಯತೀಶ್‌ಗೆ ದೂರದೂರಿಗೆ ವರ್ಗಾವಣೆಯಾಗಿರುತ್ತದೆ. ಎಲ್ಲ ಸಾಮಾನು ಸರಂಜಾಮು ಕಟ್ಟಿಕೊಂಡು ಅನ್ಯಮನಸ್ಕನಾಗಿ ಲವೀನಾಗೆ ಬೈಬೈ ಹೇಳಿ ಯತೀಶ್ ಹೊರಡುತ್ತಾನೆ.

ವಾರವಾಗುವಷ್ಟರಲ್ಲಿ ಹೆಂಡತಿಯ ಸಂಗ ಆತನನ್ನು ಕಾಡಲು ಪ್ರಾರಂಭಿಸುತ್ತದೆ. ಲವೀನಾಗೆ ಪತ್ರ ಬರೆಯುತ್ತಾನೆ, "ಹನಿ, ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅಂತಹ ಕೆಲಸವೂ ಇಲ್ಲ. ಸಂಜೆಯಂತೂ ಖಾಲಿಯಾಗಿಯೇ ಇರುತ್ತೇನೆ. ಇಲ್ಲಿ ಎಲ್ಲಿ ನೋಡಿದರೂ ಸುಂದರ ಹುಡುಗಿಯರು. ಒಂದೊಂದು ಬಾರಿ ವಿಪರೀತ ಆಕರ್ಷಿತನಾಗಿಬಿಡುತ್ತೇನೆ. ನನ್ನನ್ನು ಕಂಟ್ರೋಲ್ ಮಾಡಿಕೊಳ್ಳಲು ಯಾವುದಾದರೂ ವಿಧಾನವಿದ್ದರೆ ಹೇಳು ಚಿನ್ನಾ."

ಯತೀಶ್‌ನ ಪತ್ರದಿಂದ ಗಲಿಬಿಲಿಗೊಂಡ ಲವೀನಾ ಮರುದಿನವೇ, ಒಂದು ಕವರಿನಲ್ಲಿ ಬಾಯಿಯಿಂದ ಬಾರಿಸುವ ಸಂಗೀತ ಸಾಧನ ಮೌತ್ ಆರ್ಗನ್ ಇಟ್ಟು ಕಳಿಸುತ್ತಾಳೆ. ಜೊತೆಗೆ ಒಂದು ಪತ್ರ ಕೂಡ, "ಇದನ್ನು ಬಾರಿಸಲು ಕಲಿ ಡಾರ್ಲಿಂಗ್, ಯಾವ ಹುಡುಗಿಯಿಂದಲೂ ನೀನು ಆಕರ್ಷಿತನಾಗುವುದಿಲ್ಲ" ಎಂದು ಬರೆದಿರುತ್ತಾಳೆ.

ಒಂದೆರಡು ತಿಂಗಳಾಗುವಷ್ಟರಲ್ಲಿ ಇದ್ದಕ್ಕಿದ್ದಂತೆ ಯತೀಶ್‌ಗೆ ವರ್ಗಾವಣೆಯಾಗಿ ತನ್ನೂರಿಗೆ ಮರಳುತ್ತಾನೆ. ವಾಪಸ್ ಬಂದವನೆ, "ಚಿನ್ನಾ, ಐ ಲವ್ ಯೂ. ಇನ್ನ ಜಾಸ್ತಿ ಹೊತ್ತು ತಡ ಮಾಡುವುದು ಬೇಡ. ಇಂದೇ ರಾತ್ರಿ ಇಬ್ಬರದೂ ಮಿಲನ ಮಹೋತ್ಸವವಾಗಲಿ" ಎಂದು ತುಡಿಯಲು ಆರಂಭಿಸುತ್ತಾನೆ.

ಅಚ್ಚರಿಯೆಂದರೆ ಅಂದು ಪ್ರೇಮಿಗಳ ದಿನವಾಗಿತ್ತು. ಆತನನ್ನು ಪ್ರೀತಿಯಿಂದ ಆಲಂಗಿಸಿದ ಲವೀನಾ, "ವೇಟ್ ವೇಟ್ ಡಾರ್ಲಿಂಗ್, ಮೊದಲು ಮೌತ್ ಆರ್ಗನ್ ಬಾರಿಸಲು ಕಲಿತಿದ್ದಿಯಾ ಇಲ್ಲವಾ ನೋಡೋಣ" ಎನ್ನುತ್ತಲೇ ಯತೀಶನ ಉತ್ಸಾಹವೆಲ್ಲ ಜರ್ರನೆ ಇಳಿದುಹೋಗಿರುತ್ತದೆ. [ಗಂಡ ಹೆಂಡತಿ ಜೋಕ್ಸ್]

English summary
Adult Kannada jokes. Wife Laveena punctures husband Yatish's enthusiasm for love making, on Valentine's day, after he returns home from far away place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X