ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕಿನ್ನು ಟೈಮಾಯ್ತು ಅಂತ ಹೆಂಡ್ತಿಗೆ ಹೇಳ್ತೀಯಾ?

|
Google Oneindia Kannada News

ಮಾಡಬಾರದ ಅನಾಚಾರ, ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರಗಳನ್ನು ಮಾಡಿ ಭೂಗತ ದೊರೆ ಅನ್ನಿಸಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದ್ದ. ಅನಿಸುತಿದೆ ಯಾಕೋ ಇಂದು, ಹೆಚ್ಚು ದಿನ ಬದುಕುವುದಿಲ್ಲವೆಂದೂ ಎಂದು ತಾನೊಬ್ಬನೇ ಇದ್ದಾಗ ಗುನುಗಲು ಪ್ರಾರಂಭಿಸಿದ್ದ.

ಒಂದು ದಿನ ಈ ವಿಚಾರವನ್ನು ತನ್ನ ಮೊಮ್ಮಗನನ್ನು ಕರೆದು ಹೇಳಬೇಕೆಂದು ಬಯಸಿದ. ತನ್ನ ಭೂಗತ ವ್ಯಾಪಾರವನ್ನೆಲ್ಲ ತನ್ನ ಮೊಮ್ಮಗನಿಗೆ ವಹಿಸಿಕೊಡಬೇಕೆಂದು ಆತನ ಅಂತಿಮ ಇಚ್ಛೆಯಾಗಿತ್ತು. ಪರಂಪರಾಗತವಾಗಿ ನಡೆಸಿಕೊಂಡು ಬಂದಿದ್ದ ದಂಧೆ ತನ್ನಿಂದ ಮುಚ್ಚಿಹೋಗಬಾರದು ಎಂಬುದು ಆತನ ಇರಾದೆಯಾಗಿತ್ತು.

ಮೊಮ್ಮಗನನ್ನು ಕರೆಸಿಕೊಂಡು, ಮಿರಿಮಿರಿ ಮಿರುಗುತ್ತಿದ್ದ ಕಪ್ಪು ನಾಗರದಂತಿದ್ದ ಪಿಸ್ತೂಲನ್ನು ಆತನ ಕೈಗಿತ್ತು, "ಮಗೂ ನನ್ನ ಭೂಗತ ಸಾಮ್ರಾಜ್ಯಕ್ಕೆ ಇನ್ನು ನೀನೇ ಅಧಿಪತಿ. ಈ ದಂಧೆಯನ್ನು ಯಾವತ್ತೂ ಮುಚ್ಚಬೇಡ" ಎಂದು ಗಡಗಡ ದನಿಯಲ್ಲಿ ಹೇಳಿದ.

ಹದಿನೆಂಟರ ಹರೆಯದ ಮೊಮ್ಮಗ, "ತಾತಾ ಈ ದಂಧೆ ನನಗಿಷ್ಟವಿಲ್ಲ. ಆದರೆ, ನನಗೇನಾದರೂ ಕೊಡಬೇಕು ಅಂತ ನಿನಗೆ ಅನ್ನಿಸಿದ್ದರೆ ಈ ಜಗತ್ತಿನ ಅತ್ಯಂತ ದುಬಾರಿ ವಾಚನ್ನು ನನಗೆ ಕೊಡಿಸು" ಎಂದು ದುಂಬಾಲುಬಿದ್ದ.

"ಸ್ಟಾಪ್ ದಿಸ್ ನಾನ್ ಸೆನ್ಸ್" ಗಡಗಡ ನಡುಗುವ ದನಿಯಲ್ಲಿ ಒಮ್ಮೆಗೇ ಗುಡುಗಿದ್ದ ಭೂಗತ ದೊರೆ, "ಬಾರ್ಲಾ ಇಲ್ಲಿ" ಎಂದು ತನ್ನ ಬಳಿ ಕೂಡಿಸಿಕೊಂಡು ಸುದೀರ್ಘವಾಗಿ ಉಸಿರೆಳೆದುಕೊಂಡು, "ನೋಡು, ಸರಿಯಾಗಿ ಕೇಳಿಸಿಕೊ. ಒಂದಿಲ್ಲೊಂದು ದಿನ ನೀನು ಈ ಬಿಸಿನೆಸ್ ನಡೆಸಲೇಬೇಕು. ಆಗ ನಿನ್ನ ಬಳಿ ಸಾಕಷ್ಟು ಹಣವಿರುತ್ತದೆ, ದೊಡ್ಡದೊಡ್ಡ ಬಂಗಲೆಗಳಿರುತ್ತವೆ, ಆಳುಕಾಳುಗಳಿರುತ್ತಾರೆ. ಹಾಗೆಯೆ, ನೋಡಿದವರು ಹೊಟ್ಟೆಕಿಚ್ಚುಪಡುವಂಥ ಚೆಂದನೆಯ ಹೆಂಡತಿಯೂ ಇರುತ್ತಾಳೆ" ಎಂದು ಹೇಳಿ ಉಸ್ ಅಂತ ಉಸಿರುಬಿಟ್ಟ.

ಮುಂದುವರಿಸುತ್ತ, "ನಾನು ಮಾಡಿದ ಎಲ್ಲ ಹಲ್ಕಾ ಕೆಲಸಗಳನ್ನು ನೀನೂ ಮಾಡಲೇಬೇಕಾಗುತ್ತದೆ, ಪೊಲೀಸರಿಂದ ತಲೆಮರೆಸಿಕೊಂಡು ಓಡಾಡಲೇಬೇಕಾಗುತ್ತದೆ, ಆದರೆ, ಏನ್ಮಾಡ್ತೀಯಾ ಆಗಾಗ ಮನೆಗೆ ವಾಪಸ್ ಕೂಡ ಬರಲೇಬೇಕಾಗುತ್ತದೆ. ಆಗ ಏನಾಗಿರುತ್ತದೆ? ನಿನ್ನ ಸುಂದರವಾದ ಹೆಂಡತಿ ಇನ್ನೊಬ್ಬನೊಡನೆ ಹಾಸಿಗೆ ಹಂಚಿಕೊಂಡಿರುತ್ತಾಳೆ. ಆಗ, ನಿನ್ನ ಅತ್ಯಂತ ದುಬಾರಿ ವಾಚು ತೋರಿಸಿ, ಟೈಮಾಯ್ತು ಬೇಗನೆ ಮುಗಿಸು ಅಂತ ಹೇಳ್ತೀಯಾ?" ಎಂದು ಜೀವನದ ಪಾಠವನ್ನು ಒಂದೇ ಗುಕ್ಕಿನಲ್ಲಿ ಹೇಳಿದ.

English summary
Adult Kannada jokes. A underworld don is on death bed. He wants his grandson to look after his business and wants to give him gun. But, grandson refuses and asks for costly watch. But, don tells why he should have gun instead of watch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X