ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲವೀನಾ ಹಾಡಲು ಬಾಯಿ ತೆರೆದಳು ನೋಡಿ...

|
Google Oneindia Kannada News

ಚರ್ಚೊಂದರಲ್ಲಿ ಲವ್ಲಿ ಲವೀನಾ ಪಿಯಾನೋ ಬಾರಿಸುವ ಜವಾಬ್ದಾರಿ ವಹಿಸಿಕೊಂಡಿದ್ದಳು. ಅವಳು ಎಷ್ಟು ಸುಂದರಿಯಾಗಿದ್ದಳೆಂದರೆ, ಆಕೆ ಪಿಯಾನೋ ಬಾರಿಸುವುದನ್ನು ನೋಡುವುದರ ಜೊತೆಗೆ ಸುಶ್ರಾವ್ಯವಾಗಿ ಹಾಡುತ್ತಿದ್ದಳು ಕೂಡ. ಆಕೆಯನ್ನು ನೋಡಲೆಂದೇ ಹಲವಾರು ಗಂಡಸರು ಬರಲು ಪ್ರಾರಂಭಿಸಿದ್ದರು.

ಗಂಡಸರು ಬರಲು ಮತ್ತೊಂದು ಕಾರಣವೇನೆಂದರೆ ಆಕೆಯ ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಾದ ಸ್ತನಗಳು. ಆಕೆ ಪಿಯಾನೋ ಬಾರಿಸುವಾಗ ವಿಪರೀತ ತೊನೆದಾಡುತ್ತಿದ್ದವು. ಇದು ಆಯಾ ಗಂಡಂದಿರ ಹೆಂಡತಿಯ ತಲೆನೋವಿಗೆ ಮಾತ್ರ ಕಾರಣವಾಗಿರಲಿಲ್ಲ. ಚರ್ಚಿನಲ್ಲಿದ್ದ ಸ್ತ್ರೀಯರು ಕೂಡ ಇದರಿಂದ ಮುಜುಗರ ಅನುಭವಿಸಲು ಆರಂಭಿಸಿದ್ದರು.

ಇದನ್ನೆಲ್ಲ ಗಮನಿಸುತ್ತಿದ್ದ ಓರ್ವ ಮಹಿಳೆಯೊಬ್ಬಳು ಒಂದು ಸೂಪರ್ ಡೂಪರ್ ಸಲಹೆಯನ್ನು ಲವೀನಾಗೆ ನೀಡಿದಳು. ಏಕೆಂದರೆ, ಆಕೆ ಕೂಡ ಇಂಥದೇ ಮುಜುಗರವನ್ನು ಅನುಭವಿಸಿದ್ದಳು ಮತ್ತು ಅದರಿಂದ ಯಶಸ್ವಿಯಾಗಿ ಹೊರಬಂದಿದ್ದಳು.

ಆಕೆ ಲವೀನಾಗೆ ಒಂದು ಬಗೆಯ ವಿಶಿಷ್ಟವಾದ ಸೊಪ್ಪನ್ನು ಕೊಟ್ಟು ಅದನ್ನು ಚೆನ್ನಾಗಿ ರುಬ್ಬಿ ಅದರ ರಸವನ್ನು ಯಾವ ಅಂಗ ದೊಡ್ಡದಾಗಿರುತ್ತದೋ, ಅದಕ್ಕೆ ಹಚ್ಚಿ ಚೆನ್ನಾಗಿ ಉಜ್ಜಿದರೆ ಅದು ಒಂದೇ ವಾರದಲ್ಲಿ ಸಣ್ಣದಾಗುತ್ತದೆ ಎಂದಿದ್ದಳು. ಹಾಗೆಯೆ, ಅಪ್ಪಿತಪ್ಪಿ ಕೂಡ ಅದರ ರಸವನ್ನು ಬಾಯಿಗೆ ಹಚ್ಚಿಕೊಳ್ಳಬೇಡ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಳು. ಅದರ ರಸ ನುಂಗಿದರೆ ವಾರಗಟ್ಟಲೆ ಸರಿಯಾಗಿ ಮಾತಾಡಲು ಬರುವುದಿಲ್ಲ ಎಂದು ಎಚ್ಚರಿಸಿದ್ದಳು.

ಇದನ್ನು ಹೋಗಿ ಹೋಗಿ ತನ್ನ ಗಂಡ ಯತೀಶನಿಗೂ ಹೇಳಿಬಿಟ್ಟಳು.

ಲವೀನಾ ಒಂದು ವಾರ ನಾಪತ್ತೆಯಾಗಿಬಿಟ್ಟಳಲ್ಲ. ಆಕೆಗಾಗಿಯೇ ಬರುತ್ತಿದ್ದ ರಸಿಕ ಗಂಡಸರಿಗೆ ನಿರಾಶೆಯೋ ನಿರಾಶೆ. ಪಡ್ಡೆಗಳಿಗಂತೂ ಹುಚ್ಚುಹಿಡಿದಂತಾಗಿತ್ತು. ಆದರೆ, ಹೆಂಗಳೆಯರು ಮತ್ತು ಚರ್ಚಿನ ಮಹಿಳೆಯರು ಮಾತ್ರ ನಿರಾಳವಾಗಿದ್ದರು.

ವಾರದ ನಂತರ ಲವೀನಾ ಪ್ರತ್ಯಕ್ಷಳಾಗೇಬಿಟ್ಟಳಲ್ಲ. ಆಕೆಯ ಸ್ತನ ಗಾತ್ರ ಅಷ್ಟೇ ಇತ್ತು. ಗಂಡಸರು ಪಡ್ಡೆಗಳು ಹುಚ್ಚೆದ್ದು ಕುಣಿದಾಡಿಬಿಟ್ಟರು. ಲವೀನಾ ಪಿಯಾನೋವನ್ನೇನೋ ಅದ್ಭುತವಾಗಿ ನುಡಿಸಿದಳು. ಆದರೆ, ಹಾಡಲು ಬಾಯಿ ತೆರೆದಳು ನೋಡಿ... [ಲವ್ಲಿ ಲವೀನಾ ಜೋಕ್ಸ್]

English summary
Laveena jokes in Kannada : Laveena was a beautiful lady who used to play piano and sing melodiously in a church. People used to come to see her as well as to listen to her singing. But, this had created for headache for women. Why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X