ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಬ್ಬುವಿನ ಸಣ್ಣಕಥೆಗೆ ಸ್ಟ್ಯಾಂಡಿಂಗ್ ಓವೇಷನ್

|
Google Oneindia Kannada News

ಅತಿ ಸಣ್ಣ ಕಥೆ ಬರೆಯುವ ಸ್ಪರ್ಧೆಯಲ್ಲಿ ಸುಬ್ಬು ಪಾಲ್ಗೊಂಡಿದ್ದ. ಕಥೆ ಎಷ್ಟೇ ಸಣ್ಣದಿದ್ದರೂ ಅದರಲ್ಲಿ ಧರ್ಮ, ಲೈಂಗಿಕತೆ, ಸಸ್ಪೆನ್ಸ್ ಮತ್ತು ರಹಸ್ಯ ಒಳಗೊಂಡಿರಬೇಕು ಎಂಬ ಷರತ್ತನ್ನು ಸ್ಪರ್ಧಿಗಳಿಗೆ ಒಡ್ಡಲಾಗಿತ್ತು. ಈ ಸವಾಲನ್ನು ಸ್ವೀಕರಿಸಿ ನೂರಾರು ಯುವಕ, ಯುವತಿಯರು ಭಾಗವಹಿಸಿದ್ದರು.

ಇದು ಸಣ್ಣಕಥಾ ಸ್ಪರ್ಧೆಯಾಗಿದ್ದರಿಂದ ಸ್ಪರ್ಧಾಳುಗಳೇ ತಮ್ಮ ಕಥೆಯನ್ನು ಓದಿ ಹೇಳಬೇಕಾಗಿತ್ತು ಮತ್ತು ಅದರಲ್ಲಿ ಧರ್ಮ, ಲೈಂಗಿಕತೆ, ಸಸ್ಪೆನ್ಸ್ ಮತ್ತು ರಹಸ್ಯ ಯಾವ ರೀತಿ ಅಡಕವಾಗಿದೆ ಎಂದು ಅವರೇ ವಿವರಿಸಬೇಕಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಘಟಾನುಘಟಿ ಕಥೆಗಾರರು ತಮ್ಮ ಕಥೆಯನ್ನು ಓದಿಹೇಳಿದರು. ಆದರೆ, ಕಥೆಯಲ್ಲಿ ಎಲ್ಲ ಷರತ್ತುಗಳು ಅಡಕವಾದಂತೆ ಕಂಡುಬರಲಿಲ್ಲ. ಅಲ್ಲದೆ, ಯಾವ ಕಥೆಯೂ ಅಂತಹ ಆಸಕ್ತಿದಾಯಕವೂ ಆಗಿರಲಿಲ್ಲ.

ಕಡೆಗೆ ಸುಬ್ಬುವಿನ ಪಾಳಿ ಬಂದಿತು. ಆತನ ಕಥೆ ಹೀಗಿತ್ತು, "ಅಯ್ಯೋ ಶಿವನೆ, ಇಂದು ನನ್ನ ಸ್ನೇಹಿತನ ಹೆಂಡತಿಗೆ ಹೆರಿಗೆಯಾಗಲಿದೆ." ಕಥೆ ಇಷ್ಟೇ ಇತ್ತು ಮತ್ತು ಎಲ್ಲರು ಬರೆದದ್ದಕ್ಕಿಂತ ಚುಟುಕಾಗಿತ್ತು.

ಇದನ್ನು ಕೇಳಿ, ಅದರಲ್ಲಿ ಎಲ್ಲ ನಾಲ್ಕು ಅಂಶಗಳು ಹೇಗೆ ಅಡಕವಾಗಿವೆ ವಿವರಿಸು ಎಂದು ತೀರ್ಪುಗಾರರು ಸುಬ್ಬುವನ್ನು ಕೇಳಿದರು.

ಅದಕ್ಕೆ ಸುಬ್ಬು, "ಅಯ್ಯೋ ಶಿವನೆ ಎಂಬ ಪದಗಳಲ್ಲಿ ಧರ್ಮ ಅಡಕವಾಗಿದೆ. ಸ್ನೇಹಿತನ ಹೆಂಡತಿ ಎಂಬುದು ಲಿಂಗವನ್ನು ಸೂಚಿಸುತ್ತದೆ. ಹೆರಿಗೆಯಾಗಲಿದೆ ಎಂಬ ಪದದಲ್ಲಿ ಸಸ್ಪೆನ್ಸ್ ಇದೆ. ಹೇಗೆಂದರೆ, ಗಂಡೋ ಹೆಣ್ಣೋ ಗೊತ್ತಿಲ್ಲವಲ್ಲ" ಎಂದು ಹೇಳಿ ಸುಮ್ಮನಾದ.

"ಎಲ್ಲ ಓಕೆ, ಆದರೆ, ರಹಸ್ಯದ ಬಗ್ಗೆ ಹೇಳಲೇ ಇಲ್ಲವಲ್ರೀ ಸುಬ್ಬು" ಎಂದು ತೀರ್ಪುಗಾರರೊಬ್ಬರು ಕೇಳಿದರು.

ತುಂಟನಗೆಯನ್ನು ತುಟಿಗಳಲ್ಲಿ ತಂದುಕೊಂಡ ತುಂಟ ಸುಬ್ಬು, "ಅಷ್ಟೂ ಗೊತ್ತಾಗಲಿಲ್ವಾ? ಸ್ನೇಹಿತನ ಹೆಂಡತಿಗೆ ಹುಟ್ಟುವ ಮಗುವಿನ ಅಪ್ಪ ಯಾರು ಅಂತ ಹೇಳೇ ಇಲ್ಲವಲ್ಲ!" ಎಂದು ಹೇಳಿದಾಗ ತೀರ್ಪುಗಾರರು ಚಟಕ್ಕನೆ ಎದ್ದುನಿಂತುಬಿಟ್ಟರು. ಸುಬ್ಬುವಿಗೆ ಸ್ಟ್ಯಾಂಡಿಂಗ್ ಓವೇಷನ್ ಮತ್ತು ಮೊದಲನೇ ಬಹುಮಾನ. [ಗಂಡ ಹೆಂಡತಿ ಜೋಕ್ಸ್]

English summary
Husband wife jokes. Subbu gets standing ovation to his short story, which gets first prize. Judges were stunned by shortest story by Subbu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X