ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರದ ಆರೋಪ ಹೆಮ್ಮೆಯಿಂದ ಒಪ್ಕೊಂಡೆ!

|
Google Oneindia Kannada News

ಸಿಂಗ್ರಿ ಮತ್ತು ಡಿಂಗ್ರಿ ಗಲಸ್ಯಕಂಠಸ್ಯ ಸ್ನೇಹಿತರು. ಇಬ್ಬರೂ ಕಬ್ಬನ್ ಪಾರ್ಕಿನಲ್ಲಿ ಪ್ರತಿದಿನ ಸಂಜೆ ಸೇರುತ್ತಿದ್ದರು. ಅಲ್ಲಿದ್ದ ಪಾರಿವಾಳಗಳಿಗೆ ಕಾಳುಗಳನ್ನು ಹಾಕುವುದೆಂದರೆ ಇಬ್ಬರೂ ಬಲು ಆನಂದ. ಪಾರಿವಾಳಗಳನ್ನು ಆಡಿಸುತ್ತಲೇ ಇಡೀದೇಶದ ಆಗುಹೋಗುಗಳ ಬಗ್ಗೆ ಗಂಟೆಗಟ್ಟಲೆ ಹರಟುತ್ತಿದ್ದರು.

ಇಬ್ಬರ ಸ್ನೇಹ ಅಷ್ಟೊಂದು ಗಾಢವಾಗಿದ್ದರೂ ಅವರಿಬ್ಬರು ಎಲ್ಲಿ ನೆಲೆಸುತ್ತಾರೆಂದು ಪರಸ್ಪರರಿಗೆ ತಿಳಿದಿರಲಿಲ್ಲ. ಅವರವರ ಮೊಬೈಲ್ ನಂಬರ್ ಕೂಡ ಗೊತ್ತಿರಲಿಲ್ಲ. ಅದನ್ನು ತಿಳಿಯುವ ಅಗತ್ಯವೂ ಇರಲಿಲ್ಲವೆನ್ನಿ. ಹೇಗಿದ್ದರೂ ಕಬ್ಬನ್ ಪಾರ್ಕಿನಲ್ಲಿ ಸರಿಯಾದ ಸಮಯಕ್ಕೆ ಸಿಗುತ್ತಿದ್ದರಲ್ಲ. ಆದರೆ ಒಂದು ದಿನ ಏನಾಯಿತೆಂದರೆ...

ಆ ದಿನ ಸಿಂಗ್ರಿ ಪಾರಿವಾಳಕ್ಕೆ ಕಾಳು ಹಾಕಲು ಬರಲೇ ಇಲ್ಲ. ಡಿಂಗ್ರಿಗೆ ಅಚ್ಚರಿಯಾಯಿತು. ಏನೋ ಆಗಿರಬಹುದು. ಆರೋಗ್ಯದಲ್ಲಿ ವ್ಯತ್ಯಾಸವಾಗಿರಬಹುದು ಅಥವಾ ಊರಿಗೆ ಹೋಗಿರಬಹುದು. ಮರುದಿನ ಬರಬಹುದು ಎಂದು ಡಿಂಗ್ರಿ ಸುಮ್ಮನಾದ. ಒಂದು ದಿನವಾಯಿತು, ಎರಡು ದಿನವಾಯಿತು, ವಾರವಾಯಿತು, ತಿಂಗಳಾಯಿತು... ಸಿಂಗ್ರಿ ಪತ್ತೆಯೇ ಇಲ್ಲ.

ಡಿಂಗ್ರಿಗೆ ಸಿಂಗ್ರಿ ಬಗ್ಗೆ ದಿಗಿಲಾಗಲು ಪ್ರಾರಂಭವಾಯಿತು. ತಿಳಿದುಕೊಳ್ಳೋಣವೆಂದರೆ ವಿಳಾಸ ಗೊತ್ತಿಲ್ಲ, ಫೋನ್ ನಂಬರ್ ತಿಳಿದಿಲ್ಲ. ಆದರೆ ಅಚ್ಚರಿ ಎಂಬಂತೆ, ಸರಿಯಾಗಿ ಒಂದು ತಿಂಗಳಾದ ನಂತರ ಸಿಂಗ್ರಿ ಮತ್ತೆ ಅದೇ ಜಾಗದಲ್ಲಿ ಪತ್ತೆ. ಡಿಂಗ್ರಿ ಆನಂದಕ್ಕೆ ಪಾರವೇ ಇರಲಿಲ್ಲ. ಯಾಕೆ, ಏನಾಯ್ತು, ಯಾಕಿಷ್ಟು ದಿನ ಬರಲಿಲ್ಲ, ಆರೋಗ್ಯದಲ್ಲಿ ವ್ಯತ್ಯಾಸವೇನಾದರೂ ಆಯಿತಾ ಎಂಬು ಪ್ರಶ್ನೆ ಮೇಲೆ ಪ್ರಶ್ನೆ ಎಸೆದ.

ಸಿಂಗ್ರಿ, "ನಾನು ಜೈಲಿಗೆ ಹೋಗಿದ್ದೆ" ಎಂದು ತಣ್ಣಗೆ ಹೇಳಿದ.

ಡಿಂಗ್ರಿಗೆ ಮೈಬೆಚ್ಚಗಾದಂತಾಯಿತು, ಕಿವಿ ಕೆಂಪೇರಿದವು. ಯಾಕೆ, ಏನು ಎಂದು ಮತ್ತಷ್ಟು ದಿಗಿಲಾಗಿ ಕೇಳಿದ.

ಸಿಂಗ್ರಿ ಶಾಂತರೀತಿಯಿಂದಲೇ, "ಇಲ್ಲಿ ಆಗಾಗ ಜಾಗಿಂಗ್ ಮಾಡಲು ಬರುತ್ತಿದ್ದ ಇಪ್ಪತ್ತರ ಹರೆಯದ ಆ ಸುಂದರ ಯುವತಿ ಗೊತ್ತಲ್ಲ?" ಎಂದು ಕೇಳಿದ.

ಡಿಂಗ್ರಿ, "ಗೊತ್ತಿರದೆ ಏನು, ಆ ಬ್ಯೂಟಿಯನ್ನು ಹೇಗೆ ತಾನೆ ಮರೆಯಲು ಸಾಧ್ಯ. ಹೌದು, ಆಕೆಯೂ ಒಂದು ತಿಂಗಳಿಂದ ಕಂಡೇ ಇಲ್ಲ" ಎಂದು ಹೇಳಿದ.

"ಆಕೆ ನನ್ನ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಳು" ಎಂದು ಕಾಮ್ ಆಗಿ ಹೇಳಿದ ಸಿಂಗ್ರಿ.

"ವಾಟ್? ನಿನ್ನ ಮೇಲೆ ಅತ್ಯಾಚಾರದ ಆರೋಪವೆ? ಅದ್ಹೇಗೆ ಸಾಧ್ಯ?" ಅಚ್ಚರಿಯಿಂದ ಕೇಳಿದ ಡಿಂಗ್ರಿ.

"ನನಗೂ ಮೊದಲು ಆಶ್ಚರ್ಯವಾಯಿತು. ಆದರೆ, ಈ 95ರ ವಯಸ್ಸಿನಲ್ಲಿ, ಈ ಆರೋಪ ಕೇಳಿ ಒಂಥರಾ ಹೆಮ್ಮೆ ಆದ್ಹಂಗೆ ಆಯಿತು. ಒಪ್ಕೊಂಡುಬಿಟ್ಟೆ, ಜೈಲುಂಡು ಬಂದೆ" ಎಂದು ಸಿಂಗ್ರಿ ಹೇಳುತ್ತಿದ್ದರೆ ಡಿಂಗ್ರಿಗೂ ಒಂದು ಬಾರಿ ಜೈಲಿಗೆ ಹೋಗಿ ಬರುವ ಮನಸ್ಸಾಯಿತು.

English summary
Hilarious Kannada jokes. Singri and Dingri are close friends. They feed pigeons everyday in Cubbon Park in the evening. One day Singri suddently disappears. What had happened to him?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X