• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಕ್ಕದ್ಮನೆ ಪದ್ಮಜಾಳ ಮಕ್ಳು ಯಾರ ಮಕ್ಕಳಂದ್ಕೊಂಡಿದ್ದೀ?

|

ಯತೀಶನನ್ನು ಕಟ್ಟಿಕೊಂಡು ಮೂರು ಮಕ್ಕಳನ್ನು ಹಡೆದು ಸಾಧನೆ ಮಾಡಿದ್ದ ಲವೀನಾಗೆ ಕಡಿಮೆಯೇನೂ ಇಲ್ಲದಿದ್ದರೂ ಮನೆಯೊಂದಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು. ಎಸ್ಸೆಸ್ಸೆಲ್ಸಿ ಮೂರು ಬಾರಿ ಡುಮ್ಕಿ ಹೊಡೆದಿದ್ದರೂ ಬಲೇ ಚಾಲಾಕಿ ಅಂತ ವಠಾರದಲ್ಲಿ ಖ್ಯಾತಿ ಗಳಿಸಿದ್ದ ಲವೀನಾ ಅದೊಂದಿನ ತುಂಬಾ ಸಂತೋಷಭರಿತಳಾಗಿದ್ದಳು.

ಅದೇನೆಂದರೆ ಸರಕಾರದವರು ಯಾವುದೋ ಸ್ಕೀಮಿನಲ್ಲಿ ಅದೆಲ್ಲೋ ಡಬಲ್ ಬೆಡ್ರೂಮ್ ಮನೆ ಕಡಿಮೆ ದರಕ್ಕೆ ಕೊಡ್ತಿದ್ದಾರೆ ಅಂತ ಯಾವುದೋ ಜಾಹೀರಾತಿನಲ್ಲಿ ಬಂದಿದ್ದನ್ನು ಓದಿಕೊಂಡಿದ್ದಳು. ಈ ಸಂಗತಿಯನ್ನು ಗಂಡ ಯತೀಶ ಬಂದ ಕೂಡಲೆ ಅರುಹಿಕೊಂಡಳು.

ಲವೀನಾ : ರೀ ಕೇಳ್ತೀರಾ ಇಲ್ಲಿ, ಈ ಜಾಹೀರಾತು ನೋಡಿದ್ರಾ?

ಯತೀಶ : ಏನ್ ಜಾಹೀರಾತೇ ಅದು? ಮೊದಲು ಕಾಫಿ ತಂದು ಕೊಡು.

ಲವೀನಾ : ಕಾಫಿ ಮನೆ ಹಾಳಾಗ. ಮೊದಲು ಇದನ್ನು ನೋಡಿ. ಸಖತ್ ಕಡಿಮೆ ದರದಲ್ಲಿ ಸರಕಾರದವ್ರು ಡಬಲ್ ಬೆಡ್ರೂಮ್ ಮನೆ ಮಾರ್ತಿದ್ದಾರಂತೆ.

ಯತೀಶ : ಏನ್ ಸ್ಕೀಮ್ ಅದು, ಏನು ಆಫರು? [ಛೆ, ಪಕ್ಕದ್ಮನೆ ಹೆಂಗ್ಸು ಲವೀನಾ ಗಂಡಂಗೆ ಹೀಗ್ಮಾಡೋದಾ?]

ಲವೀನಾ : ಅದೇನೋ 5 ಮಕ್ಕಳಿರೋ ಕುಟುಂಬಕ್ಕೆ ಸರಕಾರದವರು ಎರಡೇ ಲಕ್ಷದಲ್ಲಿ ಡಬಲ್ ಬೆಡ್ರೂಮ್ ಫ್ಲಾಟ್ ಕೊಡ್ತಿದ್ದಾರಂತೆ.

ಯತೀಶ : (ಕಾಫಿ ಕಪ್ಪು ತಡಬಡಾಯಿಸಿ ಮೈಮೇಲೆಲ್ಲ ಚೆಲ್ಲಿಕೊಂಡು) ವಾವ್, 5 ಮಕ್ಕಳಿದ್ದವರಿಗೆ 2 ಲಕ್ಷದಲ್ಲಿ ಫ್ಲಾಟಾ?

ಲವೀನಾ : ಹೌದು ರೀ, ಆದರೆ ಇದು ನನಸಾಗಲ್ಲ. ಏಕಂದ್ರೆ ನಮ್ಗಿರೋದು 3 ಮಕ್ಕಳಷ್ಟೆ ಅಲ್ವಾ?

ಯತೀಶ : ಲೇ ಅದು ನನಗೆ ಬಿಟ್ಬಿಡು. ಮೂರು ಮಕ್ಕಳನ್ನು ಐದು ಮಕ್ಕಳನ್ನಾಗಿ ಮಾಡುವ ಜವಾಬ್ದಾರಿ ನನ್ನದು.

ಲವೀನಾ : ತಲೆಗಿಲೆ ಕೆಟ್ಟಿದೆಯಾ. ಐದು ಮಕ್ಕಳಾಗೋದಕ್ಕೆ ಇನ್ನೂ ಎರಡೂವರ್ಷ ವರ್ಷವಾದರೂ ಬೇಕು. ಅಲ್ಲೀತನಕಾ ಆಫರ್ ಇರತ್ತಾ? [ಕೆಲಸದಾಕೆ ಮಾತುಕೇಳಿ ಯಜಮಾನಿ ಕಕ್ಕಾಬಿಕ್ಕಿ]

ಯತೀಶ : ಲೇಲೇಲೇ ಪಕ್ಕದ ಮನೆ ಪದ್ಮಜಾ ಇಲ್ವಾ? ಅವಳಿಗೆ ಇಬ್ಬರು ಮಕ್ಕಳಿದ್ದಾರಲ್ವಾ? ಅವರು ಯಾರಂದ್ಕೊಂಡಿದ್ದೀಯಾ? ಅವರು ನನ್ನ ಮಕ್ಕಳೇ ಕಣೇ. ಈ ಆಫರ್ ಮಿಸ್ ಮಾಡ್ಕೊಳ್ಳಲೇಬಾರದು. ಈಗ್ಲೇ ಹೋಗಿ ಅವರಿಬ್ಬರನ್ನೂ ಕರ್ಕೊಂಡು ಬರ್ತೀನಿ ನೀನು ರೆಡಿ ಆಗು.

ಯತೀಶನ ರಸಿಕತವನ್ನು ನೋಡಿ ಲವೀನಾ ತೀವ್ರ ಆಘಾತಕ್ಕೀಡಾದರೂ ತೋರಿಸಿಕೊಡದೆ ಒಳಗೆ ಹೋದಳು. ಹತ್ತೇ ನಿಮಿಷದಲ್ಲಿ ಪದ್ಮಜಾಳ ಮಕ್ಕಳಿಬ್ಬರನ್ನು ದರದರನೆ ಎಳೆದುಕೊಂಡು ಬಂದಿದ್ದ.

ಯತೀಶ : ಲೇ ಲವಿ, ಇನ್ನು ರೆಡಿ ಆಗಿಲ್ವಾ? ಪದ್ಮಜಾಳ ಮಕ್ಕಳಿಬ್ಬರೂ ಆಟೋದಲ್ಲಿ ಕುಳಿದ್ದಾರೆ. ಎಲ್ಲಿ ಕಣೇ ನಿನ್ನ ಮೂರು ಕಮಂಗಿಗಳು? ಕಾಣ್ತಾನೇ ಇಲ್ಲ?

ಲವೀನಾ : ರೀ ಈ ಸ್ಕೀಮ್ ಬಗ್ಗೆ ಎಲ್ಲರಿಗೂ ಗೊತ್ತಾಗ್ಬಿಟ್ಟಿದೆ ಅನ್ಸುತ್ತೆ ಕಣ್ರೀ. ಅದಕ್ಕೆ... ಅವರಪ್ಪ ಬಂದು ಅವರ 3 ಮಕ್ಕಳನ್ನ ಕರ್ಕೊಂಡು ಹೊರ್ಟೋದ್ರು....... [ಆಕೆಯ ಅನುಮಾನ ನಿಜವಾಗಿತ್ತು, ಕಾಲ ಮಿಂಚಿತ್ತು!]

English summary
Joke of the day : Laveena has a dream to buy a house somehow. Government announces a special scheme for those who have 5 children. Laveena tells this to her husband. He makes arrangements, but how?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X