ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೊಂದೇ ರಾತ್ರಿ ನಾನು ಗಂಡನ ಜೊತೆಗಿರುತ್ತೇನೆ!

|
Google Oneindia Kannada News

ಎಮ್ಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ ಮಿಸೆಸ್ ಲಿಲ್ಲಿ ಸಿಕ್ಕಾಪಟ್ಟೆ ಸುಸ್ತಾಗಿರ್ತಾಳೆ. ಕೆಲಸಕ್ಕೆ ಹೋಗುವುದು ಸಾಧ್ಯವೇ ಇಲ್ಲ ಎನ್ನುವಂತಾಗಿರುತ್ತದೆ. ಏನೇ ಆಗಲಿ ಒಂದು ಬಾರಿ ಚೆಕಪ್ ಮಾಡಿಸಿಬಿಡೋಣ ಅಂತ ಫ್ಯಾಮಿಲಿ ವೈದ್ಯ ಡಾ. ಭೂತನಾಥ್ ಹತ್ತಿರ ಬರುತ್ತಾಳೆ. ಆಕೆಯ ಕೇಸ್ ಹಿಸ್ಟರಿ ಎಲ್ಲ ಬರೆದುಕೊಂಡು ಆಕೆಯ ತಪಾಸಣೆಗೆ ಡಾ. ಭೂತನಾಥ್ ಅನುವಾಗುತ್ತಾನೆ.

ಎಲ್ಲ ರೀತಿಯ ತಪಾಸಣೆ ಮಾಡಿದರೂ ಮಿಸೆಸ್ ಲಿಲ್ಲಿಗೆ ಯಾವುದೇ ತೊಂದರೆ ಇರುವುದು ಡಾ. ಭೂತನಾಥ್‌ನಿಗೆ ಕಂಡುಬರುವುದಿಲ್ಲ. ಸಾಕಷ್ಟು ವಿಚಾರ ಮಾಡಿದ ನಂತರ, ಏನೋ ಹೊಳೆದಂತಾಗಿ, "ನೀವು ವಾರಕ್ಕೆ ಎಷ್ಟು ಬಾರಿ ಲೈಂಗಿಕ ಕ್ರೀಡೆಯಲ್ಲಿ ತೊಡಗುತ್ತೀರಿ" ಎಂದು ಡಾ. ಭೂತನಾಥ್ ಕೇಳುತ್ತಾರೆ.

ಒಂದು ಕ್ಷಣ ತಬ್ಬಿಬ್ಬಾದ ಮಿಸೆಸ್ ಲಿಲ್ಲಿ, ಸಾವರಿಸಿಕೊಂಡು "ಭಾನುವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ತಪ್ಪದೆ ಕಾಮಕ್ರೀಡೆಯಲ್ಲಿ ತೊಡಗುತ್ತೇನೆ" ಎಂದು ಬೆರಳೆಣಿಕೆ ಮಾಡುತ್ತ ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತಾಳೆ.

ಹುಬ್ಬೇರಿಸಿಕೊಂಡೇ ಕುಳಿತಿದ್ದ ಡಾ. ಭೂತನಾಥ್, ಕೆಲ ಕ್ಷಣಗಳ ನಂತರ ಖಚಿತ ನಿರ್ಧಾರಕ್ಕೆ ಬಂದವನಂತಾಗಿ, "ಮಿಸೆಸ್ ಲಿಲ್ಲಿ, ನೀವು ಭಾನುವಾರ ಯಾಕೆ ಕಾಮಕೇಳಿಗೆ ಸಂಪೂರ್ಣ ರಜಾ ಕೊಡಬಾರದು?" ಎಂದು ಆತ್ಮೀಯವಾಗಿ ಕೇಳುತ್ತಾರೆ.

"ಸಾಧ್ಯವೇ ಇಲ್ಲ" ಎಂದು ಹೇಳಿ ಕೆಲ ಕ್ಷಣಗಳ ಪಾಸ್ ನಂತರ, "ಯಾಕೆ ಸಾಧ್ಯವಿಲ್ಲವಂದರೆ, ಅದೊಂದೇ ರಾತ್ರಿ ನಾನು ನನ್ನ ಗಂಡನ ಜೊತೆಗಿರುತ್ತೇನೆ!"

English summary
Adult Kannada jokes. A lady working for MNC goes to her family doctor for check up as she feels very tired. The doctor asks her how many times she indulges in intercourse every week. The doctor is stunned to know the reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X