ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ ಹೆಂಡ್ತೀನೂ ಇದೇ ಧಾಟಿಯಲ್ಲಿ ಬೈತಿರ್ತಾಳೆ!

|
Google Oneindia Kannada News

ಒಬ್ಬ ಜಗತ್ ಕುಡುಕನೊಬ್ಬ ಇಳಿಸಂಜೆಯಲ್ಲಿ ಒಬ್ಬನೇ ಬಾರಿಗೆ ಹೋಗುತ್ತಾನೆ. ಸೂರ್ಯ ಮುಳುಗಿದ್ದರೂ ಆ ಊರಿನ ಕುಡುಕರಿಗೆ ಇನ್ನೂ ಹಕ್ಕಿಗಳು ಚಿಲಿಪಿಲಿಗುಟ್ಟದ ಸಮಯವದು. ಅರ್ಧ ಬಾಗಿಲು ತೆರೆದ, ಮಿಣುಕು ದೀಪಗಳಿಂದ ಕಂಗೊಳಿಸುತ್ತಿದ್ದ ಬಾರಿನ ಒಳಹೋಗುತ್ತಾನೆ ಕುಡುಕ.

ಅಲ್ಲೊಂದಿಬ್ಬರು ವೇಟರುಗಳು ಇರುವುದು ಬಿಟ್ಟು ಬಾರಿನೊಳಗೆ ಮತ್ತಾರೂ ಕಂಡುಬರುವುದಿಲ್ಲ. ಮತ್ತಷ್ಟು ಕಣ್ಣು ಹಾಯಿಸಿದಾಗ ಮೂಲೆಯಲ್ಲೊಬ್ಬಳು ಸುಂದರ ಯುವತಿ ಸಿಗರೇಟು ಸೇದುತ್ತ, ಬಿಯರು ಹೀರುತ್ತ, ಮೊಬೈಲಿನಲ್ಲಿ ಯಾರೊಂದಿಗೋ ಮಾತನಾಡುತ್ತ ಕುಳಿತಿರುತ್ತಾಳೆ.

ಅವಳ ಬಳಿ ಹೋದ ಕುಡುಕ, ಹಿಂದಿನಿಂದ ಬಂದು ಆಕೆಯನ್ನು ತಬ್ಬಿಕೊಂಡುಬಿಡುತ್ತಾನೆ. ಆ ಘಟನೆಯಿಂದ ತಬ್ಬಿಬ್ಬಾದ ಯುವತಿ, ಬಿಯರ್ ಬಾಟಲನ್ನು ಟೇಬಲ್ಲಿನ ಮೇಲೆ ಬಿಸಾಕಿ, ಕುಡುಕನ ಕೆನ್ನೆಗೆ ಫಳೀರೆಂದು ಬಾರಿಸುತ್ತಾಳೆ. ಆದರೂ, ಆಕೆಯ ಸಿಟ್ಟು ನಿಂತಿರುವುದಿಲ್ಲ, ಬುಸುಬುಸು ಅಂತಿರುತ್ತಾಳೆ.

ತೇಲುಗಣ್ಣು ಮೇಲುಗಣ್ಣು ಮಾಡಿಕೊಂಡ ಕುಡುಕ, "ದಯವಿಟ್ಟು ಕ್ಷಮಿಸಿ, ತಪ್ಪು ತಿಳ್ಕೋಬೇಡಿ, ನಾನು ನಿಮ್ಮನ್ನು ನನ್ನ ಹೆಂಡತಿ ಅಂತ ತಿಳಿದುಕೊಂಡು ಹಿಂದಿನಿಂದ ಬಂದು ತಬ್ಬಿಬಿಟ್ಟೆ" ಎಂದು ಗೋಲ್ ಮಾಲ್ ರಾಧಾಕೃಷ್ಣ ಚಿತ್ರದಲ್ಲಿ ಉಮಾಪತಿ ಹೇಳಿದಂತೆ ಹೇಳುತ್ತಾನೆ.

ತಿರುಗಿಬಿದ್ದ ಯುವತಿ, "ಲೋಫರ್, ಈಡಿಯಟ್, ಶೇಮ್ಲೆಸ್ ಫೆಲೋ, ಡರ್ಟಿ ಫೆಲೋ" ಎಂದು ಕಿರಿಚುತ್ತಲೇ ಇರುತ್ತಾಳೆ.

ಆಕೆಯ ಬೈಗುಳದ ನಾಮಾವಳಿಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ ಕುಡುಕ, "ಏನ್ ತಮಾಷೆ, ನನ್ನ ಹೆಂಡತಿ ಕೂಡ ಹೀಗೇ, ಇದೇ ಧಾಟಿಯಲ್ಲಿ ಬೈತಿರ್ತಾಳೆ" ಅಂತ ತನ್ನ ಟೇಬಲ್ ಕಡೆಗೆ ತೆರಳುತ್ತಾನೆ.

English summary
Adult Kannada jokes. One day a drunkard goes to a bar in the evening. He finds a lone beautiful girl sitting in a corner. He fondles her and gets a slap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X