• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಮಿನಿ, ಭಾಮಿನಿ, ಯಾರ್ನಾದ್ರೂ ಲವ್ ಮಾಡ್ಕೊ

|

ಇಬ್ಬರನ್ನೂ ಅಕ್ಕಪಕ್ಕ ನಿಲ್ಲಿಸಿದರೆ ಯಾರು ಅಪ್ಪ, ಯಾರು ಮಗ ಎಂಬುದನ್ನು ಕಂಡುಹಿಡಿಯಲು ಕಷ್ಟವಾಗುವಂಥ ಪರ್ಸನಾಲಿಟಿ ಸುಬ್ಬು ಮತ್ತು ಆತನ ಮಗ ಮರಿಸುಬ್ಬುವಿನದು. ಕಬ್ಬಿನ ಗಳದಂಥ ಮೈಕಟ್ಟಿನ ಸುಬ್ಬು ತನ್ನ ಬಾಡಿಯನ್ನು ಅದೇರೀತಿ ಕಳೆದ ಇಪ್ಪತ್ತು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದರಿಂದ ಅಪ್ಪಮಗ ಇಬ್ಬರೂ ಒಂದೇ ರೀತಿ ಕಾಣುತ್ತಿದ್ದರು.

ಆನುವಂಶಿಕವಾಗಿ ಅಪ್ಪನಲ್ಲಿದ್ದ ಗುಣಗಳು ಹದಿನೈದರ ಹರೆಯದಲ್ಲಿದ್ದ ಮಗನಲ್ಲಿಯೂ ಹರಿದುಬಂದಿದ್ದವು. ಸ್ವಲ್ಪ ಪೆದ್ದಪೆದ್ದನಂತೆ ವರ್ತಿಸುತ್ತಿದ್ದರೂ ಚುಪಾರುಸ್ತುಂ ಎಂಬ ಬಿರುದನ್ನು ಪಡೆದಿದ್ದ. ಮೀಸೆ ಮರಿಸುಬ್ಬುವಿನಲ್ಲಿ ಕುಡಿಯೊಡೆಯುತ್ತಿತ್ತು, ಹಾಗೆಯೆ ಆಸೆಗಳು ಕೂಡ.

ಒಂದು ದಿನ ತಂದೆಯ ಬಳಿ ಬಂದು, "ಅಪ್ಪಾ, ಅಪ್ಪಾ... ನನಗೆ ಪಕ್ಕದ್ಮನೆ ಪದ್ಮಾ ಆಂಟಿ ಮಗಳು ಕಾಮಿನಿಯ ಮೇಲೆ ಪ್ರೀತಿ ಉಂಟಾಗಿದೆ" ಎಂದು ಹೇಳಿದ.

ಪಟ್ಟಾಪಟ್ಟಿ ಅಂಡರ್ ವೇರ್ ಲಾಡಿ ಕಟ್ಟಿಕೊಳ್ಳುತ್ತಿದ್ದ ಸುಬ್ಬು, ಸುದ್ದಿ ಕೇಳಿ ಕೈ ದಡಬಡಾಯಿಸಿ ಇಳಿಯುತ್ತಿದ್ದ ಪಟ್ಟಾಪಟ್ಟಿಯನ್ನು ಮೇಲಕ್ಕೆತ್ತಿಕೊಂಡು, "ಹೌದಾ ಮಗಾ, ಒಂದು ಮಾತು ಹೇಳ್ತೀನಿ, ಯಾರಿಗೂ ಹೇಳಲ್ಲ ಅಂದ್ರೆ ಮಾತ್ರ" ಅಂತ ಬಾಯಿ ಅಗಲ ಮಾಡಿಕೊಂಡು ಹೇಳಿದ.

"ಅಯ್ತಪ್ಪಾ, ಏನು ಹೇಳು. ಯಾರಿಗೂ ಹೇಳಲ್ಲ, ಅಮ್ಮನಿಗೂ..." ಅಂತ ಮರಿಸುಬ್ಬು ಮರುಉತ್ತರ ಕೊಟ್ಟ.

"ಕಾಮಿನಿಯನ್ನು ಪ್ರೀತಿಸುವುದನ್ನು ನೀನು ಮರೆತುಬಿಡು. ಯಾಕಂದ್ರೆ, ಆಕೆ ನಿನಗೆ ತಂಗಿಯ ಸಮಾನ" ಎಂದು ಮರಿಸುಬ್ಬುವಿನ ಪ್ರತಿಕ್ರಿಯೆಗೂ ಕಾಯದೆ ಹೊರಟೇಬಿಟ್ಟ. ಮರಿಸುಬ್ಬು ಕಕ್ಕಾಬಿಕ್ಕಿಯಾಗಿದ್ದ, ಕೈಕಾಲು ಗಡಗಡ ನಡುಗಲು ಪ್ರಾರಂಭಿಸಿದ್ದವು. ಆದರೂ ಸಾವರಿಸಿಕೊಂಡ...

ಹೀಗೆಯೇ ಹದಿನೈದಿಪ್ಪತ್ತು ದಿನಗಳು ಉರುಳಿದ್ದವು. ಮೀಸೆ ಮತ್ತಷ್ಟು ಚಿಗುರಿತ್ತು, ಆಸೆ ಮತ್ತಷ್ಟು ಗರಿಗೆದರಿತ್ತು. ಮರಿಸುಬ್ಬು ಮತ್ತೆ ಲವ್ವಲ್ಲಿ ಬಿದ್ದಿದ್ದ. ಈಗ ಆತನಿಗೆ ಹಿಂದಿನ ಮನೆ ಬಾಲ್ಯದ ಗೆಳತಿ ಭಾಮಿನಿಯ ಮೇಲೆ ಪ್ಯಾರ್ ಆಗಿತ್ತು. ಈ ಮಾತನ್ನು ತಂದೆಯ ಬಳಿ ಹೇಳಿ ಸಜೆಷನ್ ಪಡೆಯೋಣವೆಂದು ಬಂದ.

ಹಿಂದಿನಂತೆ ಸುಬ್ಬು ಸ್ನಾನ ಮಾಡಿ ಜಸ್ಟ್ ಹೊರಬಂದಿದ್ದ. ಮಗ ಬರುತ್ತಿರುವುದು ನೋಡುತ್ತಿದ್ದಂತೆ, ಮತ್ತೇನೋ ಹೊಳೆದಂತಾಗಿ ಪಟ್ಟಾಪಟ್ಟಿಯ ಲಾಡಿ ಕಟ್ಟುವುದನ್ನು ಅಲ್ಲೇ ನಿಲ್ಲಿಸಿ, ಏನಂತೆ ಸಂಜ್ಞೆ ಮಾಡಿದ.

"ಅಪ್ಪಾ, ಐ ಹ್ಯಾವ್ ಫಾಲನ್ ಇನ್ ಲವ್ ಅಗೇನ್ ವಿತ್ ಮೈ ಚೈಲ್ಡ್ ಹುಡ್ ಫ್ರೆಂಡ್ ಭಾಮಿನಿ" ಎಂದು ನಾಚುತ್ತ ಕಾಲಿನ ಹೆಬ್ಬೆರಳಿನಿಂದ ನೆಲೆ ಕೆರೆಯುತ್ತ ಹೇಳಿದ.

ಸುಬ್ಬು, "ಮೈ ಸನ್, ಫಾರ್ಗೆಟ್ ಹರ್ ಟೂ. ಆಕೆಯೂ ಒಂದರ್ಥದಲ್ಲಿ ನಿನ್ನ ತಂಗಿಯೇ ಆಗಬೇಕು" ಎಂದು ಲಾಡಿ ಬಿಗಿಯುತ್ತಲೇ ಮಗನ ಆಸೆಯನ್ನು ನುಚ್ಚುನೂರು ಮಾಡಿದ್ದ. ಜಂಘಾಬಲ ಉಡುಗಿದಂತಾಗಿದ್ದ ಮರಿಸುಬ್ಬುವಿನ ಮುಖ ಕೆಂಪೇರಿತ್ತು.

ಸಸ್ಪೆನ್ಸ್ ಬೇಡವೇಬೇಡ ಎಂದು ನೇರವಾಗಿ ಅಮ್ಮನ ಬಳಿ ಹೋಗಿ ನಡೆದುದೆಲ್ಲವನ್ನು ಸವಿಸ್ತಾರವಾಗಿ ಹೇಳಿ, ಆಕೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡ.

ದಿಗ್ಮೂಢಳಾದರೂ ಸಾವರಿಸಿಕೊಂಡ ಸುಬ್ಬಿ, "ಲೇ ಮರಿಸುಬ್ಬು, ಅಳಬೇಡ್ವೋ... ಕಾಮಿನಿನೋ ಭಾಮಿನಿನೋ ಯಾರನ್ನಾದರೂ ಲವ್ ಮಾಡು ಹೋಗೋ. ಖಡಾಖಂಡಿತವಾಗಿ ಹೇಳ್ತೇನೆ ಅವರಿಬ್ಬರೂ ನಿನ್ನ ತಂಗಿಯರಲ್ಲವೇ ಅಲ್ಲ" ಎಂದು ಆತನ ಬೆನ್ನುತಟ್ಟಿದಳು.

"ವಾಟ್, ತಂಗಿಯರಲ್ಲವಾ? ಅದ್ಹೇಗೆ ಹೇಳ್ತೀಯಾ?" ಎಂದು ಕಣ್ಣನ್ನು ಹೊಳಪು ಮಾಡಿಕೊಂಡು ಮರಿಸುಬ್ಬು ಕೇಳಿದ.

"ಯಾಕಂದ್ರೆ, ನೀನು ನೀನು... ಅವರ ಮಗನೇ ಅಲ್ಲ!" ಎಂದು ಚಟಕ್ಕನೆ ಅಡುಗೆಮನೆ ಹೊಕ್ಕಳು.

English summary
Husband wife jokes : Marisubbu, who looks like his father falls in love with two childhood friends. But, father asks him to forget them, as they both are his sisters. Son, tells the same to his mother and gets shocked again by mothers reaction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more