ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಕೆ ಮುಜುಗರವಾಗುವಂಥಾದ್ದು ಏನಿದೆ ಅದರಲ್ಲಿ?

|
Google Oneindia Kannada News

ವಿಜ್ಞಾನದ ಮೇಷ್ಟ್ರು ಸೀರಿಯಸ್ಸಾಗಿ ಪಾಠ ಮಾಡುತ್ತಿರುತ್ತಾರೆ. ಅವರು ಪಾಠ ಮಾಡುವುದೆಂದರೆ ಹತ್ತನೇ ಕ್ಲಾಸಿನ ಮಕ್ಕಳಿಗೆ ಕೂಡ ಅಚ್ಚುಮೆಚ್ಚು. ಆದರೂ, ಆಗಾಗ ತರಲೆ ವಿಷಯಗಳನ್ನು ಹೇಳುವಲ್ಲಿ ಅವರದು ಎತ್ತಿದ ಕೈಯಾಗಿತ್ತು. ಅಂದು ಅವರು ಮಾನವನ ಅವಯವಗಳ ಬಗ್ಗೆ ಪಾಠ ಮಾಡುತ್ತಿದ್ದರು. ಆದರೆ, ಅವರು ತರಲೆ ಮಾಡುವ ಮೂಡಿನಲ್ಲಿ ಇರಲಿಲ್ಲ.

ಕೈಯಲ್ಲಿ ಪುಸ್ತಕ ಹಿಡಿದು, ಮೂಗಿನ ತುದಿಗೆ ಕನ್ನಡಕವನ್ನು ಇಳಿಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಂದು ಸೀರಿಯಸ್ಸಾದ ಪ್ರಶ್ನೆ ಕೇಳಿದರು.

ಮೇಷ್ಟ್ರು : ಮಕ್ಳಾ, ಮಾನವನ ಯಾವ ಅವಯವ ಹಿಗ್ಗಿದರೆ ಐದು ಪಟ್ಟು ದೊಡ್ಡದಾಗುತ್ತದೆ?

ಮಕ್ಕಳಲ್ಲಿ ಗುಸುಗುಸು ಆರಂಭವಾಯಿತು. ಯಾರು ಕೈ ಎತ್ತುತ್ತಾರೆ ಎಂದು ಮೇಷ್ಟ್ರು ಕೂಡ ಕುತೂಲಹದಿಂದ ನೋಡುತ್ತಿದ್ದರು. ತನ್ನ ವಯಸ್ಸು ಮೀರಿದ ಅಂಗಸೌಷ್ಟವದಿಂದ ಎಲ್ಲ ಹುಡುಗರನ್ನು ಚುಂಬಕದಂತೆ ಸೆಳೆಯುತ್ತಿದ್ದ ಲವೀನಾ ಚಟಕ್ಕನೆ ಎದ್ದುನಿಂತಳು. ಮೇಷ್ಟ್ರು 'ಯಸ್ ಲವೀನಾ?' ಎಂದು ಕೇಳಿದರು.

ಲವೀನಾ : ಮೇಷ್ಟ್ರೆ ನೀವು ಈ ಪ್ರಶ್ನೆ ಕೇಳಬಾರದಿತ್ತು. ಇದಕ್ಕೆ ಯಾರಿಂದಲೂ ಉತ್ತರಿಸಲು ಸಾಧ್ಯವಿಲ್ಲ. ತುಂಬಾ ಮುಜುಗರವಾಗುತ್ತದೆ.

ಮೇಷ್ಟ್ರು : ಯಾಕೆ ಮುಜುಗರವಾಗುವಂಥಾದ್ದು ಏನಿದೆ ಅದರಲ್ಲಿ?

ಲವೀನಾ ಉತ್ತರಿಸಲಾಗದೆ, ಸ್ವಲ್ಪ ಬಗ್ಗಿ ತನ್ನ ಉಂಗುಷ್ಟದ ಉಗುರಿನಿಂದ ನೆಲವನ್ನು ಕೆರೆಯಲು ಆರಂಭಿಸಿದ ಸಮಯದಲ್ಲಿ, ಬ್ರೈಟ್ ಸ್ಟುಡೆಂಟ್ ಎಂದು ಹೆಸರು ಪಡೆದಿದ್ದ ಸುರೇಸ ಎದ್ದುನಿಂತ. ಲವೀನಾ ಮೇಲಿದ್ದ ಮೇಷ್ಟ್ರ ಕಣ್ಣು ಅತ್ತ ಸರಿಯಿತು.

ಸುರೇಸ : ಕಣ್ಣಿನ ಪಾಪೆ ಸರ್.

ಮೇಷ್ಟ್ರು ಮತ್ತು ಎಲ್ಲ ಮಕ್ಕಳಿಂದ ಕಿವಿಗಡಚಿಕ್ಕುವ ಚಪ್ಪಾಳೆಗಳ ಸುರಿಮಳೆ.

ಕಣ್ಣಿಗೇರಿಸಿಕೊಂಡಿದ್ದ ಕನ್ನಡಕವನ್ನು ಮತ್ತೆ ಮೂಗಿನ ತುದಿಗೆ ಇಳಿಸಿದ ಮೇಷ್ಟ್ರು, ಲವೀನಾ ಬಳಿಗೆ ಬಂದು "ಕೇಳಮ್ಮಾ ಲವೀನಾ, ನಿನ್ನ ಯೋಚನೆ ದಾರಿತಪ್ಪಿರುವುದು ಮಾತ್ರವಲ್ಲ, ನಿನ್ನ ನಿರೀಕ್ಷೆಗಳು ಕೂಡ ಅಳತೆ ಮೀರಿವೆ!" ಎಂದು ಹೇಳಿದಾಗ ಮಕ್ಕಳೆಲ್ಲ ಬಾಯಿ ಮೇಲೆ ಗಟ್ಟಿಯಾಗಿ ಕೈಹಿಡಿದುಕೊಂಡು ಮುಸಿಮುಸಿ ನಕ್ಕಿದ್ದರು. ಲವ್ಲಿ ಲವೀನಾ ಮುಖ ಆಗ ನೋಡಬೇಕಿತ್ತು!

English summary
Student teacher jokes : Teacher asks a question to students which he feels is not so embarrassing. But, why lovely Laveena feels the question so embarrassing?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X