ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಸುಮ್ನೆ ತಮಾಷೆ ಮಾಡ್ತಿದ್ದೆ ಕಣೋ ಪೆದ್ದ

|
Google Oneindia Kannada News

ಬೆಳದಿಂಗಳು ಸುರಿಯುತ್ತಿದ್ದ ಹುಣ್ಣಿಮೆಯ ದಿನ, ತಂಗಾಳಿ ಸುಯ್ಯನೆ ಸುಳಿದಾಡುತ್ತಿದ್ದ ವೇಳೆ ಬ್ಯೂಗಲ್ ರಾಕ್ ಬಂಡೆಗಳ ನಡುವಿನಲ್ಲಿ ಭುಜಕ್ಕೆ ಭುಜ ತಾಗಿಸಿ ಕುಳಿತಿದ್ದ ಲವೀನಾ ಮತ್ತು ಯತೀಶ್ ಮೌನದಲ್ಲೇ ಸರಸ ಸಂಭಾಷಣೆಯಲ್ಲಿ ತೊಡಗಿದ್ದರು. ಇಬ್ಬರಲ್ಲಿ ಯಾರು ಮಾತು ಆರಂಭಿಸಬೇಕೆಂಬ ದ್ವಂದ್ವದಲ್ಲಿದ್ದರು.

ಆತನೇ ಮಾತು ಆರಂಭಿಸಲಿ ಎಂದು ಲವ್ಲಿ ಲವೀನಾ ಬೆಳದಿಂಗಳ ರಾತ್ರಿಯನ್ನು ಎಂಜಾಯ್ ಮಾಡುತ್ತಿದ್ದಳು. ತಂಗಾಳಿಗೆ ಕಣ್ಣಿನೊಡನೆ ಸರಸವಾಡುತ್ತಿದ್ದ ಲವೀನಾಳ ಮುಂಗುರುಳನ್ನು ಗಡಗಡನೆ ನಡುಗುತ್ತಿದ್ದ ಬೆರಳಿನಿಂದ ಆಕೆಯ ಕಿವಿಯ ಬದಿಗೆ ಸರಿಸಿದ ಯತೀಶ ಮಾತಿಗೆ ಆರಂಭಿಸಿದ.

ಯತೀಶ್ : ಲವೀ... ಒಂದು ಮಾತು ಹೇಳಬೇಕು.

ಲವೀನಾ : ಹೇಳು.

ಯತೀಶ್ : ನಾನು ನಿನ್ನನ್ನ.... ಐ ಮೀನ್... ನಿನ್ ಜೊತೆ ಸಂಬಂಧ ಬೆಳೆಸಬೇಕು ಅಂತ ಅನಿಸ್ತಾ ಇದೆ.

ಲವೀನಾ : ದಟ್ಸ್ ಫೈನ್, ಬಟ್ ನನ್ನದೊಂದು ಕಂಡೀಷನ್ ಇದೆ.

ಯತೀಶ್ : (ಅವಳ ಕೈ ಗಟ್ಟಿಯಾಗಿ ಹಿಡಿದು) ಹೇಳು, ಏನೇ ಶರತ್ತಿರಲಿ ಒಪ್ಕೊಳ್ತೀನಿ.

ಲವೀನಾ : (ಕೈಯನ್ನು ಬಿಡಿಸಿಕೊಂಡು) ನೋ ಸೆಕ್ಸ್. ಅದನ್ನು ನಾನು ಮುಂದೆ ಮದುವೆಯಾಗಲಿರುವ ಗಂಡನಿಗಾಗಿ ಮೀಸಲಿಟ್ಟಿದ್ದೇನೆ.

ಯತೀಶ್ : ಅಷ್ಟೇ ತಾನೆ. ಹಾಗಾದ್ರೆ ನಂದೂ ಒಂದು ಕಂಡೀಷನ್ ಐತೆ.

ಲವೀನಾ : (ಕಿಸಕ್ಕನೆ ನಕ್ಕು) ನಿಂದೂ ಕಂಡೀಷನ್ ಐತಾ. ಏನದು?

ಯತೀಶ್ : ನಾನು ನಿನ್ನ ಮೇಲೆ ಒಂದು ಪೈಸಾನೂ ಖರ್ಚು ಮಾಡಲ್ಲ. ಅದನ್ನು ನಾನು ಮುಂದೆ ಮದುವೆಯಾಗಲಿರುವ ಹುಡುಗಿಗೆ ಮೀಸಲಿಟ್ಟಿದ್ದೇನೆ.

ಲವೀನಾ : ಅಯ್ಯೋ, ನಾನು ಹೇಳಿದ್ದನ್ನು ಸೀರಿಯಸ್ಸಾಗಿ ತಗೊಂಡ್ಯಾ? ನಾನು ಸುಮ್ನೆ ತಮಾಷೆ ಮಾಡ್ತಿದ್ದೆ ಕಣೋ ಪೆದ್ದ. [ಲವೀನಾ ಜೋಕ್ಸ್]

English summary
Joke for the day. Laveena and her boyfriend Yathish were sitting in Bugle Rock park in the evening enjoying togetherness. Yathish wants to be in relation with Laveena. But, Laveen puts a condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X