ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡ ಜೊತೆ ಹೋಗಿದ್ಯಾ ಪೆದ್ದಿ, ಒಬ್ಳೇ ಹೋಗು!

|
Google Oneindia Kannada News

ಡಾಕ್ಟರ್ ಹರಿ ಹೆರಿಗೆ ಆಸ್ಪತ್ರೆ ಹೆಂಗಳೆಯರಿಂದ ಗಿಜಿಗುಡುತ್ತಿತ್ತು. ಮೂಲೆಯೊಂದರಲ್ಲಿ ಕುಳಿತಿದ್ದ ಇಬ್ಬರು ಸ್ನೇಹಿತೆಯರ ನಡುವೆ ಮಾತುಕತೆ ಶುರುವಾಯಿತು. ಒಬ್ಬಳು ಆರು ತಿಂಗಳು ಗರ್ಭಿಣಿಯಾಗಿದ್ದರೆ, ಮತ್ತೊಬ್ಬಳು ಆರು ತಿಂಗಳಿನಿಂದ ಮಗುವಿನ ಕನಸನ್ನು ಹೊತ್ತು ಕುಳಿತಿದ್ದಳು.

ಮಗುವಿನ ಕನಸನ್ನು ಹೊತ್ತ ಮಹಿಳೆ, "ಮಗುವನ್ನು ಕಂಡ್ರೆ ನನಗೆ ಅದೆಷ್ಟು ಇಷ್ಟ ಅಂತೀಯಾ? ಮಗು ಬಿಟ್ಟು ಈ ಜಗತ್ತಿನಲ್ಲಿ ಬೇರೇನೂ ಬೇಡವೇ ಬೇಡ ಅಂತ ಅನ್ನಿಸಿಬಿಟ್ಟಿದೆ" ಎಂದು ಹೇಳಿದ ಆಕೆ ವಸ್ತುಸ್ಥಿತಿಗಿಳಿದು, ಮುಖ ಸಣ್ಣಗೆ ಮಾಡಿಕೊಂಡು, "ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಅಂತ ಕಾಣತ್ತೆ" ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಹೇಳಿದಳು.

ಆಕೆಯನ್ನು ಸಮಾಧಾನ ಮಾಡಿದ ಇನ್ನೊಬ್ಬಾಕೆ, "ನನ್ನದೂ ನಿನ್ನ ಕಥೆಯೇ ಆಗಿತ್ತು. ಮಗು ಆಗುವುದಿಲ್ಲ ಅಂತ ಅಂದ್ಕೊಂಡಿದ್ದೆ. ಆದರೆ, ಆರು ತಿಂಗಳ ಹಿಂದೆ ಊರಹೊರಗಿನ ಆಲದ ಮರದ ಬಳಿ ಆಶ್ರಮ ಕಟ್ಟಿ ಬೀಡುಬಿಟ್ಟಿರುವ ಸಾಧುವೊಬ್ಬರ ಬಳಿ ಹೋದೆ ನನ್ನ ಅದೃಷ್ಟವೇ ಬದಲಾಗಿ ಹೋಯಿತು" ಎಂದು ಆನಂದ ತಡೆಯಲಾಗದೆ ಭಾಷ್ಪ ಸುರಿಸುತ್ತ ಹೇಳಿದಳು.

"ಓಹ್ ಆ ಸಾಧುವಿನ ಬಳಿಯಾ? ನಾನು ಕೂಡ ಹೋಗಿದ್ದೆ. ಒಂದು ಬಾರಿ ನಾನು ಮತ್ತು ನನ್ನ ಗಂಡ ಇಬ್ಬರೂ ಒಟ್ಟಿಗೇ ಅವರ ಬಳಿ ಹೋಗಿದ್ದೆವು. ನಿಂಬೆಹಣ್ಣು ಮಂತ್ರಿಸಿ ಕೊಟ್ಟು, ಪಾನಕ ಮಾಡಿಕೊಂಡು ಕುಡಿಯಿರಿ ಎಂದು ಹೇಳಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ" ಎಂದು ಪೆಚ್ಚು ಮೋರೆ ಹಾಕಿಕೊಂಡು ಆಕೆ ಹೇಳಿದಳು.

ಇದಕ್ಕೆ ನಸುನಗುತ್ತ ಪಿಸುನುಡಿಯಲ್ಲಿ "ಗಂಡ ಜೊತೆ ಹೋಗಿದ್ಯಾ ಪೆದ್ದಿ, ಮುಂದಿನ ಬಾರಿ ಒಬ್ಬಳೇ ಹೋಗಿ ನೋಡು" ಎಂದು ಕಿಸಕ್ಕನೆ ನಕ್ಕು, ಯಾರಾದ್ರೂ ಕೇಳಿದ್ರಾ ಎಂದು ಅತ್ತಿತ್ತ ನೋಡಿದಳು. ಹತ್ತಿರದಲ್ಲೇ ಇದ್ದ ನರ್ಸ್ ಕಿವಿ ಯಾಕೋ ಚುರುಕಾಗಿತ್ತು.

English summary
Adult Kannada jokes. Two friends were speaking at a maternity home. One is pregnant and another dreaming to have a baby. Pregnant woman reveals the secret of her pregnancy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X