ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗಳ ಮಾತು ಕೇಳಿ ಮೂರ್ಛೆ ಹೋದ ತಾಯಿ!

|
Google Oneindia Kannada News

ವಿಶ್ವದ ಎಲ್ಲ ಸುಂದರಿಯರನ್ನು ನಿವಾಳಿಸಿ ಬಿಸಾಕುವಂತಹ ಸೌಂದರ್ಯ ಹೊಂದಿದ್ದ ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯೊಬ್ಬಳು ಕಾಲೇಜಿಗೆ ರಜಾ ಇದ್ದಿದ್ದರಿಂದ ಅಮ್ಮನೊಡನೆ ಕೆಲದಿನ ಕಳೆಯಲೆಂದು ಮನೆಗೆ ಬಂದಳು. ಅಮ್ಮನಿಗೆ ಮಗಳಲ್ಲಿ ಏನೋ ಬದಲಾವಣೆ ಕಂಡಿತು. ಅವಳ ನಡತೆ, ಹಾವಭಾವ, ಮಾತಾಡುವ ರೀತಿ ಎಲ್ಲ ಬದಲಾಗಿತ್ತು.

ಮಗಳಲ್ಲಿ ಹಿಂದಿದ್ದ ಇನೋಸೆನ್ಸ್ ಈಗ ಯಾಕೋ ಕಾಣುತ್ತಿಲ್ಲ ಅಂತ ಸಾಕಷ್ಟು ಪಳಗಿದ್ದ ಅಮ್ಮನಿಗೆ ಅನಿಸಿತು. ಮಗಳನ್ನು ಪಕ್ಕದಲ್ಲಿ ಕೂಡಿಸಿಕೊಂಡು, ಹೆಗಲ ಮೇಲೆ ಕೈಹಾಕಿ "ಯಾಕೋ ಪುಟ್ಟಾ, ನೀನು ತುಂಬ ಬದಲಾದಂತೆ ಕಾಣ್ತಿದ್ದಿಯಾ, ಏನೋ ಮುಚ್ಚಿಡ್ತಿದ್ದಿಯಾ, ಏನು ಹೇಳು ಪರವಾಗಿಲ್ಲ, ನಾನು ನಿನ್ನ ಅಮ್ಮ ತಾನೆ?" ಅಂತ ಪ್ರೀತಿಯಿಂದ ನೇವರಿಸುತ್ತ ಕೇಳಿದಳು.

ಅಮ್ಮನಿಂದ ಇನ್ನು ಬಚ್ಚಿಟ್ಟರೆ ಪ್ರಯೋಜನವಿಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳಿ ಮನಸಲ್ಲಿದ್ದುದನ್ನೆಲ್ಲ ಬರಿದು ಮಾಡಿಕೊಂಡುಬಿಡೋಣ ಅಂತ ಮಗಳೂ ತೀರ್ಮಾನಿಸಿದಳು. ಆದರೂ ಹೇಳಿಕೊಳ್ಳಲು ನಾಚಿಕೆ, ಹೇಗೆ ಶುರು ಮಾಡಬೇಕೋ ಎಂಬ ಆತಂಕ. ಆದರೆ, ಅಮ್ಮ ಸಾಕಷ್ಟು ಧೈರ್ಯ ತುಂಬಿದ್ದರಿಂದ ಹೇಳಿದಳು...

"ಅಮ್ಮ, ನಾನು ಕನ್ಯತ್ವ ಕಳೆದುಕೊಂಡುಬಿಟ್ಟೆ" ಅಂತ ಕೆಂಪಗೆ ಮಾಡಿಕೊಂಡ ಮುಖ ಮುಚ್ಚಿಕೊಂಡು ಮಗಳು ಹೇಳಿದಳು. ಅಮ್ಮನಿಗೆ ಆಶ್ಚರ್ಯವೇನೂ ಆಗಲಿಲ್ಲ. ಒಂದು ಕ್ಷಣ ನಾಸ್ಟಾಲ್ಜಿಯಾಗೆ ಜಿಗಿದು ನಾಲ್ಕಾರು ಕ್ಷಣಗಳ ನಂತರ ವಾಸ್ತವಕ್ಕೆ ಮರಳಿ, ಹರೆಯದ ಹುಡುಗಿಯರಲ್ಲಿ ಇದೆಲ್ಲ ಸಾಮಾನ್ಯ ಅಂತ ಅಂದುಕೊಳ್ಳುವಷ್ಟರಲ್ಲಿ ಅವಳೂ ಕೆಂಪೇರಿಬಿಟ್ಟಿದ್ದಳು.

"ಓಕೆ ಓಕೆ ಓಕೆ. ನನಗೆಲ್ಲ ಅರ್ಥವಾಗತ್ತೆ. ನನಗೇನು ಆಶ್ಚರ್ಯವಾಗಲಿಲ್ಲ. ಇದು ಇಂದಿಲ್ಲ ನಾಳೆ ಆಗುವಂಥದ್ದೆ. ನನ್ನಲ್ಲಿ ಹೇಳಿ ಒಳ್ಳೆಯದು ಮಾಡಿದ್ದಿಯಾ. ಅನುಭವ ಹ್ಯಾಗಿತ್ತು? ರೋಮ್ಯಾಂಟಿಕ್ಕಾಗಿತ್ತಾ? ಸಖತ್ ಎಂಜಾಯ್ ಮಾಡಿದಿಯಾ? ನಾಚ್ಕೋಬೇಡ ಎಲ್ಲ ವಿವರವಾಗಿ ಹೇಳು" ಅಂತ ಅಮ್ಮನೇ ಮಗಳನ್ನು ಪುಸಲಾಯಿಸಲು ಪ್ರಾರಂಭಿಸಿದಳು.

ಅಮ್ಮ ಇಷ್ಟು ಹೇಳಿದ ಮೇಲೆ ಇನ್ನೇನಿದೆ ಅಂತ ಮಗಳು ಶುರು ಹಚ್ಚಿಕೊಂಡಳು, "ಏನು ಹೇಳಲಮ್ಮ, ಮೊದಲ ಎಂಟು ಹುಡುಗರು..." ಅಂತ ಮಗಳು ಹೇಳಿದಳಷ್ಟೆ ಅಲ್ಲಿ ಅಮ್ಮ ಮೂರ್ಛೆ ಬಂದುಬಿದ್ದಿದ್ದಳು.

English summary
Adult Kannada joke : A beautiful daughter studying in engineering college confesses to her mother about her first sin. Mother says it is bound to happen sometime or later and asks her to explain her first love. After listening to few words mother faints. Why?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X