ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಕ್ಸಿಂದ ಕಾಂಡೋಮ್‌ಗಳು ನಿಗೂಢ ಕಣ್ಮರೆ!

|
Google Oneindia Kannada News

ಒಂದು ವಾರದ ಹಿಂದಷ್ಟೇ ಮೊದಲ ರಾತ್ರಿ ಮತ್ತು ಹನಿಮೂನು ಮುಗಿಸಿ ಬಂದಿದ್ದ ಯುವ ಜೋಡಿಗೆ ಅದೇನು ಚೆಲ್ಲಾಟ ಅಂತೀರಾ? ಹಗಲೂ ಒಂದೇ ರಾತ್ರಿಯೂ ಒಂದೇ. ಗಂಡನಂತೂ ಕೆಲಸಕ್ಕೆ ಹೋಗಲು ಪ್ರತಿದಿನ ಹಿಂದೇಟು ಹಾಕುತ್ತಿದ್ದ. ಆದರೆ, ಹೆಂಡತಿ ಬಿಡಬೇಕಲ್ಲ, ದಬ್ಬಿ ಕೆಲಸಕ್ಕೆ ಕಳುಹಿಸುತ್ತಿದ್ದಳು, ತಾನೂ ಕೆಲಸಕ್ಕೆ ದೌಡಾಯಿಸುತ್ತಿದ್ದಳು.

ಹೀಗೇ ಕೆಲ ದಿನಗಳು ಉರುಳಿದವು. ಇಬ್ಬರೂ ಕನಿಷ್ಠ ಒಂದು ವರ್ಷದ ತನಕವಾದರೂ ಮಕ್ಕಳಾಗಬಾರದೆಂದು ನಿಶ್ಚಯಿಸಿದ್ದರು. ಅದಕ್ಕಾಗಿ ಒಂದು ಡಬ್ಬಿ ಕಾಂಡೋಮನ್ನೂ ತಂದಿಟ್ಟಿದ್ದರು. ಬೇಕೆಂದಾಗಲೆಲ್ಲ ಉಪಯೋಗಿಸಿದರಾಯಿತು ಎಂದು ಕಾಂಡೋಮ್ ಬಾಕ್ಸ್ ಮಡಗಿಕೊಂಡಿದ್ದರು. ಶನಿವಾರ, ಭಾನುವಾರಗಳು ಕಳೆದವು, ಡಬ್ಬಿಯಲ್ಲಿದ್ದ ಎರಡು ಕಾಂಡೋಮ್‌ಗಳು ಕಸದಬುಟ್ಟಿ ಸೇರಿದವು.

ಮತ್ತೆ ಶನಿವಾರ ಭಾನುವಾರಗಳು ಬರಲೇಬೇಕಲ್ಲ? ಬಂದೇಬಿಟ್ಟವು. ಆದರೆ, ಶನಿವಾರ ರಾತ್ರಿ ಸಖತ್ ಶೃಂಗಾರ ಮಾಡಿಕೊಂಡು ಸೀರೆಯುಟ್ಟು ಗಂಡನಿಗಾಗಿ ಕಾದಿದ್ದ ಹೆಂಡತಿ ಕಾಂಡೋಮ್ ಬಾಕ್ಸ್ ತೆಗೆದುನೋಡುತ್ತಾಳೆ... ಉಳಿದದ್ದು ನಾಲ್ಕೇ ನಾಲ್ಕು! ತಾವು ನೋಡಿದರೆ ಕಳೆದವಾರ ಕೂಡಿಯೇ ಇಲ್ಲ. ಹಾಗಾದ್ರೆ ಇನ್ನು ನಾಲ್ಕು ಎಲ್ಲಿ ಹೋದವು? ಎಲ್ಲವೂ ನಿಗೂಢ. ಗಂಡನನ್ನು ಕೇಳಿಯೇಬಿಡೋಣವೆಂದು ನಿರ್ಧರಿಸಿದಳು ಹೆಂಡತಿ.

"ರೀ ಬನ್ರೀ ಇಲ್ಲಿ. ಬಾಕ್ಸಲ್ಲಿದ್ದ ನಾಲ್ಕು ಕಾಂಡೋಮ್‌ಗಳು ಕಾಣೆಯಾಗಿವೆಯಲ್ಲ?" ಹೆಂಡತಿಯ ದನಿ ಏರಿತ್ತು, ಗಂಡನ ಮುಖದಲ್ಲಿ ಬೆವರು ಕಾಣಿಸಿಕೊಂಡಿತ್ತು.

"ಅದೇನಿಲ್ಲ ಕಣೇ, ನಾನು ಬಾತ್ರೂಮಲ್ಲಿ ನಾಲ್ಕು ದಿನಗಳಲ್ಲಿ ನಾಲ್ಕು ಬಳಸಿಕೊಂಡೆ ಕಣೇ" ಅಂತ ಬೆಬೆಬೆ ಅಂತ ಗಂಡ ಉತ್ತರಿಸಿದ. ಇಷ್ಟು ಹೇಳುವ ಹೊತ್ತಿಗೆ ಅವನಿಗೆ ಸಾಕುಬೇಕಾಗಿತ್ತು.

ಆದರೆ, ಹೆಂಡತಿಗೆ ತೃಪ್ತಿಯಾಗಲಿಲ್ಲ. ಏನೇ ಆಗ್ಲಿ ತನ್ನ ಹಳೆಯ ಗೆಳೆಯ ಮತ್ತು ಕಲೀಗನ್ನು ಕೇಳಿಬಿಡೋಣವೆಂದು ತೀರ್ಮಾನಿಸಿದಳು.

"ಕಾಂಡೋಮ್ ಬಾಕ್ಸಿಂದ ಕೆಲವು ಕಾಣೆಯಾಗಿವೆ. ಗಂಡನ ಮೇಲೆ ನನಗೆ ಏಕೋ ಅನುಮಾನ. ನೀನೂ ನನ್ನ ಗಂಡನ ಹಾಗೇ ಮಾಡ್ತೀಯಾ?" ಅಂತ ಧೈರ್ಯದಿಂದ ಕೇಳಿಯೇಬಿಟ್ಟಳು.

ತಲೆ ಕೆರೆದುಕೊಳ್ಳುತ್ತ, "ಒಂದೆರಡು ಬಾರಿ" ಆತ ಮುಚ್ಚುಮರೆಯಿಲ್ಲದೆ ಉತ್ತರಿಸಿದ.

"ಅಂದ್ರೆ ಏಕಾಂಗಿಯಾಗಿ ಸ್ನಾನ ಮಾಡುವಾಗ ಕಾಂಡೋಮ್ ಬಳಸ್ತೀಯಾ?" ಅನುಮಾನ ಪರಿಹಾರವಾಗದೆ ಮತ್ತೆ ಕೇಳಿದಳು.

"ಓ ಅದಾ ಕೇಳಿದ್ದಾ ನೀನು? ನೀನು ನನ್ನ ಗೆಳತಿಗೆ ಸುಳ್ಳು ಹೇಳುತ್ತಿರುವ ಬಗ್ಗೆ ಕೇಳ್ತಿದ್ದಿಯಾ ಅಂದ್ಕೊಂಡೆ!" [ಓದಿರಿ ಗಂಡ ಹೆಂಡತಿ ಜೋಕ್ಸ್]

English summary
Adult Kannada jokes. Young couple after their first night and first honeymoon settle down for their routine work. They decide not become father and mother for at least 1 year. So, they bring a box of condoms. But surprisingly and mysteriously few go missing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X