ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಫ್ರಿಕ್ ಫೈನ್ ಕಟ್ಟೋಕೆ ಸಾಲ ಕೊಡ್ತಿರಾ?

|
Google Oneindia Kannada News

ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ. ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಕಾಯ್ದೆ ವಾಹನ ಸವಾರರಿಗೆ ಬಿಸಿತುಪ್ಪವಾಗಿದೆ.

ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಬಗ್ಗೆ ಹಲವು ಹಾಸ್ಯ ಪ್ರಸಂಗಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಹೊಸ ದಂಡ ಶುಲ್ಕವನ್ನು ಕಟ್ಟಲಾಗದೇ ವಾಹನ ಸವಾರರು ಪರದಾಡುವುದು ಹಾಸ್ಯದ ವಿಷಯವಾಗಿದೆ.

ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?

ಹೆಂಡತಿ ಗಂಡನಿಗೆ ಸೀರೆ ಕೊಡಿಸುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಸೀರೆ ಕೊಡಿಸದಿದ್ದರೆ ಕಾರಿನಲ್ಲಿ ಸೀಟ್ ಬೆಲ್ಟ್‌ ಹಾಕಿಕೊಳ್ಳುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ವೈರಲ್ ಆಗಿರುವ ಕೆಲವು ಜೋಕ್ಸ್ ಇಲ್ಲಿದೆ.

Motor Vehicles Amendment Act: Viral Jokes

ಮಗ ಮನೆಗೆ ಬರಲು 1 ಲಕ್ಷ ಕೊಡಿ

ಆ ಕಡೆಯಿಂದ : ನಿಮ್ಮ ಮಗ ಮನೆಗೆ ಬರಬೇಕು ಅಂದರೆ ಒಂದು ಲಕ್ಷ ರೂಪಾಯಿ ಕೊಡಬೇಕಾಗುತ್ತದೆ.

ಅಪ್ಪ : ನಾನು ಪೊಲೀಸರಿಗೆ ಫೋನ್ ಮಾಡ್ತೀನಿ

ಆ ಕಡೆಯಿಂದ : ನಾವು ಪೊಲೀಸರೇ ಮಾತಾಡ್ತಾ ಇರೋದು. ನಿಮ್ಮ ಮಗ ಟ್ರಾಫಿಕ್ ರೂಲ್ಸ್‌ ಬ್ರೇಕ್ ಮಾಡಿದಾನೆ.

ಸೀಟ್ ಬೆಲ್ಟ್ ತೆಗಿಲಾ?

ಗಂಡ : ಸೀಟ್ ಬೆಲ್ಟ್ ಹಾಕಿಕೊಳ್ಳೆ

ಹೆಂಡತಿ : ಸೀರೆ ಕೊಡಿಸ್ತಿನಿ ಅಂದ್ರೆ ಮಾತ್ರ ಸೀಟ್ ಬೆಲ್ಟ್ ಹಾಕ್ತಿನಿ

ಗಂಡ : ದಂಡಕ್ಕಿಂತ ಸೀರೆಯೇ ಕಡಿಮೆ ಬೆಲೆ, ಕೊಡಿಸ್ತಿನಿ ಹಾಕಿಕೊ.

"ನಿತಿನ್ ಗಡ್ಕರಿ ಹೆಲ್ಮೆಟ್ ಇಲ್ದೆ ಗಾಡಿ ಓಡಿಸಿದ್ದಕ್ಕೆ ಫೈನ್ ಎಷ್ಟು?"

ಯಾಕ್ರೀ ಇಎಂಐ ಕಟ್ಟಿಲ್ಲ

ಬ್ಯಾಂಕ್ ಸಿಬ್ಬಂದಿ : ಯಾಕ್ರೀ ಈ ತಿಂಗಳು ಇಎಂಐ ಕಟ್ಟಿಲ್ಲ

ಗ್ರಾಹಕ : ಮೊನ್ನೆ ಟ್ರಾಫಿಕ್ ಪೊಲೀಸ್ ಹಿಡಿದಿದ್ದರು ಸರ್

ಬ್ಯಾಂಕ್ ಸಿಬ್ಬಂದಿ : ಗೊತ್ತಾಯ್ತು ಬಿಡಿ.

ಗಾಡಿ ಫೈನ್ ಕಟ್ಟೋಕೆ ಸಾಲ ಕೊಡ್ತಿರಾ?

ಗುಂಡ : ಸರ್, ಸಾಲ ಬೇಕಾಗಿತ್ತಲ್ವಾ?

ಬ್ಯಾಂಕ್ ಸಿಬ್ಬಂದಿ : ಯಾವುದಕ್ಕೆ ಸಾಲ, ಮನೆಗೋ, ಗಾಡಿಗೋ

ಗುಂಡ : ಗಾಡಿ ಫೈನ್ ಕಟ್ಟಬೇಕು ಸಾರ್

10 ಸಾವಿರ ಫೈನ್ ಕಟ್ಟಿ

ಸಂಚಾರಿ ಪೊಲೀಸ್ : 10 ಸಾವಿರ ಫೈನ್ ಆಗಿದೆ ಕಟ್ಟಿ

ಗುಂಡ : ಸರ್ ಇದನ್ನ ತಿಂಗಳ ಇಎಂಐನಲ್ಲಿ ಕಟ್ಟಬಹುದಾ?

English summary
Motor Vehicles Amendment Act 2019 in effect from September 1, 2019. Here are the viral jokes on act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X