ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಣಿಕೆಯಲ್ಲಿ ಡಿಬ್ಬಿಯನ್ನು ತಬ್ಬಿಬ್ಬು ಮಾಡಿದ ಮರಿಸುಬ್ಬು

By Prasad
|
Google Oneindia Kannada News

ಮರಿಸುಬ್ಬು ಡಿಟ್ಟೋ ಅವರ ಅಪ್ಪ ಸುಬ್ಬುವಿನ ಪಡಿಯಚ್ಚು. ಥೇಟ್ ನೋಡಲು ಅವನ ಹಾಗೇ ಇದ್ದ. ದೊಡ್ಡವನಾದ ಮೇಲೆ ಅವರಪ್ಪನನ್ನು ಕನ್ನಡಿಯಲ್ಲಿ ನೋಡಿದಂತೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಜಾಣತನದಲ್ಲಿ ಮಾತ್ರ ಸುಬ್ಬು ಇವನಷ್ಟಿದ್ದಾಗ ಎಷ್ಟಿದ್ದನೋ ಅದರ ಸಾವಿರಪಟ್ಟು ಜಾಣನಿದ್ದ. ಬಲು ಚೂಟಿ.

ಆಗಾಗ ಮನೆಗೆ ಬರುತ್ತಿದ್ದ ಸುಬ್ಬುವಿನ ಜಿಗರಿದೋಸ್ತ್ ಡಿಬ್ಬಿಗೆ ಮರಿಸುಬ್ಬುವನ್ನು ಕಂಡರೆ ಏನೋ ಪ್ರೀತಿ, ಅಷ್ಟೇ ಮಮತೆ. ಡಿಬ್ಬಿ ಒಂದು ಬಾರಿ ಮರಿಸುಬ್ಬುವಿನ ಜಾಣತನವನ್ನು ಪರೀಕ್ಷಿಸಬೇಕೆಂದು ನಿರ್ಧರಿಸಿದ.

ಡಿಬ್ಬಿ : ಬಾ ಮರಿ ಇಲ್ಲಿ. ಮೊದಲನೇ ಇಯತ್ತೆ ಅಲ್ವೇನೋ ನೀನು?

ಮರಿಸುಬ್ಬು : ಅಲ್ಲ ಅಂಕಲ್, ಫಸ್ಟ್ ಸ್ಟಾಂಡರ್ಡ್!

ಡಿಬ್ಬಿ : (ಬೆಚ್ಚಿಬಿದ್ದರೂ ಸಾವರಿಸಿಕೊಂಡು) ಓಕೆ ಓಕೆ, ಗಣಿತದ ಪ್ರಶ್ನೆ ಕೇಳಲೇನೋ, ಉತ್ತರ ಕೊಡ್ತೀಯಾ?

ಮರಿಸುಬ್ಬು : ಗಣಿತ? ಮ್ಯಾತ್ಸ್ ಕೇಳಿ. ಮ್ಯಾತ್ಸಲ್ಲಿ ಕ್ಲಾಸಿಗೆ ನಾನೇ ಫಸ್ಟು.

ಡಿಬ್ಬಿ : ಸರಿ ಸರಿ, ಎರಡಕ್ಕೆ ಮೂರು, ಐಮೀನ್ ಟೂಗೆ ತ್ರೀ ಸೇರಿಸಿದರೆ ಎಷ್ಟಾಗುತ್ತದೋ?

ಮರಿಸುಬ್ಬು : (ಬೆರಳಿನಿಂದ ಎಣಿಸುತ್ತ) ಐದು, ಐಮೀನ್ ಫೈವ್.

ಡಿಬ್ಬಿ : ಲೇ ಲೇ, ಬೆರಳಿನಿಂದ ಎಣಿಸಿದರೆ ಯಾರೋ ನಿನಗೆ ಬೆಸ್ಟ್ ಅಂತಾರೆ? ಬೆರಳಿನಿಂದ ಎಣಿಸದೆ ಕೈಯನ್ನು ಜೇಬಲ್ಲಿ ಹಾಕಿಕೊಂಡು ಹಾಗೇ ಹೇಳಬೇಕು, ಓಕೆ?

ಮರಿಸುಬ್ಬು : ಓಕೆ, ಕೇಳಿ.

ಡಿಬ್ಬಿ : ಫೈವ್ ಪ್ಲಸ್ ಫೈವ್ ಎಷ್ಟು?

ಮರಿಸುಬ್ಬು : (ಎರಡೂ ಕೈಯನ್ನು ಜೈಬಲ್ಲಿ ಹಾಕಿ, ಅಲ್ಲೇ ಕೈಯನ್ನು ಅಲ್ಲಾಡಿಸುತ್ತ) ಹನ್ನೊಂದು!

English summary
Adult Kannada jokes : One day Dibbi decides to test intelligent kid Marisubbu. He asks two mathematical questions and never decides to question him again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X