ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್, WFH: ಏನ್ ಮಾಡಿದ್ರೂ ಟೈಂ ಪಾಸ್ ಆಗ್ತಾ ಇಲ್ವಾ, ಸಿಂಪಲ್ ಹೀಗೆ ಮಾಡಿ

|
Google Oneindia Kannada News

ಜಗತ್ತಿನಲ್ಲಿ ಮನುಷ್ಯ ತನ್ನ ಜೀವನಶೈಲಿಯನ್ನು ಹೇಗೆ ಬದಲಾಯಿಸಿಕೊಳ್ಳಲೇ ಬೇಕಾಗಿ ಬರುತ್ತದೆ ಎನ್ನುವುದನ್ನು ಕೊರೊನಾ ತೋರಿಸಿಕೊಟ್ಟಿದೆ. ಇದರಿಂದ ಮುಕ್ತಿಕೊಟ್ಟು, ಜನಜೀವನವನ್ನು ಎಂದಿನಂತೆ ಮಾಡು ಎಂದು ಪ್ರಾರ್ಥಿಸುವವರಿಗೆ ಹೊಸಹೊಸ ಅಲೆ ದಾಳಿ ಇಡುತ್ತಲೇ ಇದೆ.

ಲಾಕ್ ಡೌನ್, ಮನೆಯಿಂದಲೇ ಕೆಲಸ ಮಾಡುವವರಿಗೆ ಒಂದೋ ವಿಪರಿಮೀತ ಕೆಲಸ, ಇಲ್ಲಾಂದರೆ ಟೈಂ ಪಾಸ್ ಮಾಡೋದೇ ಕಷ್ಟ. ಕೊರೊನಾ, ಲಾಕ್ ಡೌನ್ ಬಗ್ಗೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಮೀಮ್ಸ್ ಗಳ ಸ್ಯಾಂಪಲ್ ಹೀಗಿದೆ ನೋಡಿ:

ಹೊಸ ವರ್ಷನ್ ಗಾದೆ: ಹಾಕಿಕೊಳ್ಳೋಕೆ ಹೊಸ ಚೆಡ್ಡಿ ಇಲ್ಲಾಂದ್ರೂ, ಮುಖಕ್ಕೆ ಮಾಸ್ಕ್ಹೊಸ ವರ್ಷನ್ ಗಾದೆ: ಹಾಕಿಕೊಳ್ಳೋಕೆ ಹೊಸ ಚೆಡ್ಡಿ ಇಲ್ಲಾಂದ್ರೂ, ಮುಖಕ್ಕೆ ಮಾಸ್ಕ್

> ಏನ್ ಮಾಡಿದರೂ, ಟೈಂ ಪಾಸ್ ಆಗುತ್ತಾ ಇಲ್ಲವಾ? ಸಿಂಪಲ್ ಹೀಗೆ ಮಾಡಿ, ನೀವೇ ನಟಿಸಿರುವ, ನಿಮ್ಮದೇ ಮೂವೀ. 'ನಿಮ್ಮ ಮದುವೆ ಸಿಡಿ' ಹಾಕಿಕೊಂಡು ನೋಡಿ. ಸತ್ಯ ಘಟನೆ ಆಧಾರಿತ ಚಿತ್ರ. ಬೇಕಾದರೆ ಫಾರ್ವರ್ಡ್ ಮಾಡಿಕೊಳ್ಳಿ, ಇಲ್ಲಾಂದರೆ ರಿವೈಂಡ್ ಮಾಡಿಕೊಳ್ಳಿ.

Lock Down And Work From Home: Memes In Social Media How To Kill The Time

> ಎಷ್ಟು ಬೇಕಾದ್ರೂ ಲಿಕ್ಕರ್ ಸಿಗುತ್ತೆ, ಆ ದರೆ ಅರ್ಜೆಂಟ್ ಆಗಿ ಒಂದು ನಿಕ್ಕರ್ ಬೇಕು ಅಂದರೆ ಸಿಗಲ್ಲಾ..

 ಜೋಕು-ಜೋಕಾಲಿ: ಗುಂಡ-ಟೀಚರ್ ಪ್ರಶ್ನೋತ್ತರ ಓದಿ ನಕ್ಕುಬಿಡಿ ಜೋಕು-ಜೋಕಾಲಿ: ಗುಂಡ-ಟೀಚರ್ ಪ್ರಶ್ನೋತ್ತರ ಓದಿ ನಕ್ಕುಬಿಡಿ

> ಮದುವೆಗೆ ಅವಕಾಶ ಇದೆ ಅಂತೆ. ಆದರೆ, ಬಟ್ಟೆ ಅಂಗಡಿ, ಆಭರಣ ಅಂಗಡಿ, ಫ್ಯಾನ್ಸಿ ಅಂಗಡಿ ಎಲ್ಲವೂ ಬಂದ್. ಹಾಗಾದರೆ ಮದುಮಕ್ಕಳು ಬರ್ಮುಡಾ, ನೈಟಿಯಲ್ಲಿ ಮದುವೆ ಮಾಡಿಕೊಳ್ಳುವುದಾ?

> ಬಾರ್ ಎಂಡ್ ರೆಸ್ಟೋರೆಂಟ್ ಬಂದ್ - ಹೆಂಡತಿ ಖುಷ್. ಬೆಳ್ಳಿ, ಬಂಗಾರ, ಸೀರೆ ಅಂಗಡಿ ಬಂದ್ - ಗಂಡ ಖುಷ್, ಸ್ಕೂಲ್, ಕಾಲೇಜು ಬಂದ್ - ಮಕ್ಕಳು ಖುಷ್. ಒಟ್ಟಿನಲ್ಲಿ ಸುಖ ಸಂಸಾರಕ್ಕೆ ಇನ್ನೂ ಏನ್ ಬೇಕು?

> ನಿಮ್ಮ ನೆಚ್ಚಿನ ಆಟ ಯಾವುದು? ಸದ್ಯಕ್ಕೆ ಉಸಿರಾಟ..

> ಸದ್ಯಕ್ಕೆ ಈಗ ಇರೋದು ಎರಡೇ ಕಾಲಗಳು. ಒಳಗಡೆ ಇದ್ದರೆ 'ಉಳಿಗಾಲ', ಹೊರಗಡೆ ಬಂದ್ರೆ 'ಕೊನೆಗಾಲ'.

English summary
Lock Down And Work From Home: Memes In Social Media How To Kill The Time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X