• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೋಕ್ಸ್ ಬಾಕ್ಸ್: ಒಂಟಿ ಸೀನು ಅಪಶಕುನ, ಮೂರ್ನಾಲ್ಕು ಸೀನು 'ಕೊರೊನಾ'

|

ಕೊರೊನಾ ವೈರಸ್ ಸೋಂಕು ಜಾಗತಿಕವಾಗಿ ತೀವ್ರ ತಲ್ಲಣ ಸೃಷ್ಟಿಸಿದೆ. ಕೋವಿಡ್ 19 ಒಂದು ಸಾಂಕ್ರಾಮಿಕ ರೋಗ ಅಂತ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 8 ಸಾವಿರ ಗಡಿ ದಾಟಿದೆ. ಹೀಗಿದ್ದರೂ, ಕೊರೊನಾ ವೈರಸ್ ಕುರಿತಾದ ಜೋಕ್ ಗಳಿಗೆ ಬರವಿಲ್ಲ.

ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವ ಕೊರೊನಾ ವೈರಸ್ ಕುರಿತಾದ ಜೋಕ್ಸ್ ಇಲ್ಲಿವೆ...

ಸಗಣಿಯಿಂದ ಕೊರೊನಾ ವೈರಸ್ ನ ತಡೆಗಟ್ಟಬಹುದು! ಹೇಗೆ ಅಂತೀರಾ.?

ಹೊರಗೆ ಹೋಗುವ ಮುನ್ನ ನಿಮ್ಮ ಎರಡೂ ಕೈಗಳಿಗೆ ಸಗಣಿ ಮೆತ್ತಿಕೊಳ್ಳಿ..

- ಹೀಗೆ ಮಾಡುವುದರಿಂದ, ನೀವು ಖಂಡಿತ ನಿಮ್ಮ ಕಣ್ಣು, ಮೂಗು, ಕಿವಿ, ಬಾಯಿಯೊಳಗೆ ಕೈ ಹಾಕಲ್ಲ.

- ನಿಮ್ಮೊಂದಿಗೆ ಯಾರೂ ಹ್ಯಾಂಡ್ ಶೇಕ್ ಮಾಡಲ್ಲ.

- ನಿಮ್ಮ ಹತ್ತಿರ ಯಾರೂ ಸುಳಿಯಲ್ಲ.

- ಕೈಯೆಲ್ಲಾ ಸಗಣಿ ಆಗಿರುವುದರಿಂದ ತಿನ್ನುವ ಮುನ್ನ ಖಂಡಿತ ನೀವು ನಿಮ್ಮ ಕೈಗಳನ್ನ ಚೆನ್ನಾಗಿ ತೊಳೆದುಕೊಳ್ಳುತ್ತೀರಾ.

ಹಾಗಾದ್ರೆ, ಇನ್ಯಾಕೆ ತಡ 'ಸಗಣಿ'ಟೈಝರ್ ಬಳಸಿ..

****

ಒಂಟಿ ಸೀನು ಬಂದ್ರೆ ಅಪಶಕುನ

ಮೂರ್ನಾಲ್ಕು ಸೀನು ಬಂದ್ರೆ ಕೊರೊನಾ

****

ದೇವಸ್ಥಾನದಲ್ಲಿ ಮಂಗಳಾರತಿಯ ನಂತರ ಅರ್ಚಕರು ಎಲ್ಲರಿಗೆ ಪ್ರಸಾದವನ್ನು ಹಂಚುತ್ತಿದ್ರು.

ಗುಂಡನ ಅಂಗೈಯಲ್ಲೂ ಎರಡು ಹನಿ ಹಾಕಿದ್ರು.

ಗುಂಡ ಕೇಳಿದ: "ಅರ್ಚಕರೇ, ಇದು ಕಹಿಯಾಗಿದೆ ಅಲ್ವಾ? ಇದು ಎಂತಹ ಪ್ರಸಾದ.?"

ಅರ್ಚಕರು ಹೇಳಿದ್ರು: "ಅಯ್ಯೋ ಅನಿಷ್ಟ ಮುಂಡೇದೆ..... ಅದು ಸ್ಯಾನಿಟೈಸರ್.

ಪ್ರಸಾದ ಹಂಚೋದು ಇನ್ನೂ ಬಾಕಿ ಇದೆ''

****

ಕೊರೊನಾ ವೈರಸ್ ಯಾವ ಕಾರಣಕ್ಕೂ ಸಿಲ್ಕ್ ಬೋರ್ಡ್ ದಾಟಿ ಬರಲು ಸಾಧ್ಯವಿಲ್ಲ

ನೌಕರ: ನಾನು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದೇನೆ. ಹೀಗಾಗಿ ನನಗೆ 20 ದಿನಗಳ ಕಾಲ ಸಂಬಳ ಸಹಿತ ರಜೆ ಕೊಡಿ. ಇಲ್ಲ ಅಂದ್ರೆ ನಾನು ಆಫೀಸ್ ಗೆ ಬರುತ್ತೇನೆ.

ಎಚ್.ಆರ್: ನೀವು ಆಫೀಸ್ ಗೆ ಬನ್ನಿ. ನಮಗೂ ಸಂಬಳ ಸಹಿತ ರಜೆ ಸಿಗುತ್ತದೆ.

****

'ಕೊರೊನಾ' ಕಾಯಿಲೆ ಬದಲು ಬೇರೆ ಕಾಯಿಲೆ ಆಗಿದ್ರೆ, ಈ ನ್ಯೂಸ್ ಚಾನೆಲ್ ನವರು ಕಾಯಿಲೆ ಬಂದವರನ್ನು ಸ್ಟುಡಿಯೋದಲ್ಲಿ ಕೂರಿಸಿಕೊಂಡು ''ನಮ್ಮಲ್ಲೇ ಮೊದಲು'' ಅಂತ ಪ್ರಾಣ ತಿನ್ನೋರು.!

****

ಕೊರೊನಾ ಮುಗಿದ ಮೇಲೆ ಎಲ್ಲರ ಮುಖ ಹೀಗಿರಬಹುದೇ.?

****

ಚಿಂತಿಸಬೇಡಿ.. ಕೊರೊನಾ ವೈರಸ್ ಜಾಸ್ತಿ ದಿನ ಇರೋಲ್ಲ.

ಯಾಕಂದ್ರೆ ಕೊರೊನಾ ವೈರಸ್ 'ಮೇಡ್ ಇನ್ ಚೀನಾ'

****

English summary
Here is the collection of Kannada Jokes that have gone viral about Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X