• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ನಿಖಿಲ್...' ಅಂದ್ರೆ 'ಎಲ್ಲಿದಿಯಪ್ಪಾ?' ಅಂತಂತೆ ವಿಕ್ರಂ ಲ್ಯಾಂಡರ್!

|

"ವಿಕ್ರಂ ಲ್ಯಾಂಡರ್ ಆದಷ್ಟು ಬೇಗ ಸಂಪರ್ಕಕ್ಕೆ ಸಿಗಲಿ" ಎಂಬುದು ಪ್ರತಿ ಭಾರತೀಯನ ದಿನನಿತ್ಯದ ಪ್ರಾರ್ಥನೆ. ಇನ್ನು ಹನ್ನೊಂದು ದಿನಗಳೊಳಗೆ ಒಂದು ದಿನ ಅರ್ಧ ಗಂಟೆಯ ಕಾಲವಾದರೂ ಲ್ಯಾಂಡರ್ ಸಂಪರ್ಕಕ್ಕೆ ಸಿಕ್ಕರೆ ಅಷ್ಟರ ಮಟ್ಟಿಗೆ ಚಂದ್ರಯಾನ ಸಂಪೂರ್ಣವಾಗಿ ಯಶಸ್ವಿಯಾದಂತೆ.

ಈ ವಿಕ್ರಂ ಲ್ಯಾಂಡರ್ ಇದೀಗ ಪ್ರತಿ ಭಾರತೀಯನ ಚರ್ಚೆಯ ವಿಷಯವಾಗಿ, ಪ್ರತಿ ಮನೆಯ ಸದಸ್ಯ ಎಂಬಷ್ಟು ಆತ್ಮೀಯವಾಗಿದೆ. ಇದರ ಸುತ್ತ ಹುಟ್ಟಿಕೊಳ್ಳುತ್ತಿರುವ ಹಾಸ್ಯವೂ ಜನರ ಕ್ರಿಯಾಶೀಲತೆಯ ದ್ಯೋತಕವಾಗಿದೆ.

ಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳುಚಂದ್ರಯಾನಕ್ಕಿಂತ ದುಬಾರಿಯಾದ ಬೆಂಗಳೂರು ವೈಟ್ ಟಾಪಿಂಗ್ ರಸ್ತೆಗಳು

ಮೊನ್ನೆ ನಾಗ್ಪುರ ಪೊಲೀಸರು 'ಸಿಗ್ನಲ್ ಬ್ರೇಕ್ ಮಾಡಿದರೆ ನಿನಗೆ ದಂಡ ಹಾಕೋಲ್ಲ, ದಯವಿಟ್ಟು ಮಾತಾಡು' ಎಂದು ಟ್ವೀಟ್ ಮಾಡುವ ಮೂಲಕ ವಿಕ್ರಂ ಲ್ಯಾಂಡರ್ ಗೆ ಹಾಸ್ಯಮಯವಾಗಿ ಮನವಿಮಾಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ವಿಕ್ರಂ ನನ್ನು ಉಲ್ಲೇಖಿಸಿ ಸಾಕಷ್ಟು ಜೋಕುಗಳು ಇದೀಗ ಹರಿದಾಡುತ್ತಿವೆ.

'ನಿಖಿಲ್ 'ಅಂದ್ರೆ 'ಎಲ್ಲಿದಿಯಪ್ಪಾ' ಎಂದ ವಿಕ್ರಂ

'ನಿಖಿಲ್ 'ಅಂದ್ರೆ 'ಎಲ್ಲಿದಿಯಪ್ಪಾ' ಎಂದ ವಿಕ್ರಂ

ಇಸ್ರೋ: ವಿಕ್ರಂ, ನಿನಗೆ ನಮ್ಮ ಮಾತು ಕೇಳಿಸುತ್ತಿದೆಯಾ?
ವಿಕ್ರಂ:... (ಪ್ರತಿಕ್ರಿಯೆಯಿಲ್ಲ)

ಇಸ್ರೋ: ಹಲೋ ವಿಕ್ರಂ, ನಿನಗೆ ನಮ್ಮ ಮಾತು ಕೇಳಿಸುತ್ತಿದೆಯಾ?
ವಿಕ್ರಂ: ... (ಪ್ರತಿಕ್ರಿಯೆ ಇಲ್ಲ)

ಇಸ್ರೋ: ನಿಖಿಲ್....
ವಿಕ್ರಂ: ಎಲ್ಲಿದಿಯಪ್ಪಾ...!

ದಂಡ ಹಾಕೋಲ್ಲ!

ದಂಡ ಹಾಕೋಲ್ಲ!

"ಪ್ರೀತಿಯ ವಿಕ್ರಂ,
ದಯವಿಟ್ಟು ಪ್ರತಿಕ್ರಿಯೆ ನೀಡು.
ನೀನು ಸಿಗ್ನಲ್ ಬ್ರೇಕ್ ಮಾಡಿದ್ದಕ್ಕೆ ನಾವೇನು ನಿಮಗೆ ದಂಡ ಹಾಕುವುದಿಲ್ಲ!" ಎಂದು ನಾಗ್ಪುರ ಸಿಟಿ ಪೊಲೀಸ್ ಟ್ವೀಟ್ ಮಾಡಿದ್ದರು.

'ವಿಕ್ರಂ'ಗಾಗಿ ಪದ್ಯ ಬರೆದ ಬೆಂಗಳೂರು ಪೊಲೀಸರು!'ವಿಕ್ರಂ'ಗಾಗಿ ಪದ್ಯ ಬರೆದ ಬೆಂಗಳೂರು ಪೊಲೀಸರು!

ವಿಕ್ರಂ ಗೆ ಟ್ರಾಫಿಕ್ ಪೊಲೀಸರ ಭಯ

ವಿಕ್ರಂ ಗೆ ಟ್ರಾಫಿಕ್ ಪೊಲೀಸರ ಭಯ

"ಬಹುಶಃ ವಿಕ್ರಂ ಲ್ಯಾಂಡರ್ ಗೆ ಟ್ರಾಫಿಕ್ ಪೊಲೀಸರ ಭಯವಿರಬೇಕು. ಆದ್ದರಿಂದಲೇ ಸಿಗ್ನಲ್ ಬ್ರೇಕ್ ಮಾಡದೆ ಕುಳಿತಿರಬೇಕು" ಎಂದೊಬ್ಬರು ಕಿಚಾಯಿಸಿದ್ದಾರೆ!

ಚಂದ್ರನನ್ನು ಮಾಮ ಎಂದು ನೋಡಿಲ್ಲ!

ಚಂದ್ರನನ್ನು ಮಾಮ ಎಂದು ನೋಡಿಲ್ಲ!

"ಹೊಸಪೀಳಿಗೆಯ ಜನರು ಚಂದ್ರನನ್ನು 'ಮಾಮ' ಎಂಬಂತೆ ನೋಡಿಲ್ಲ. ಆದ್ದರಿಂದಲೇ ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಗುತ್ತಿಲ್ಲ" ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶ್ರುತಿ ಠಾಕೂರ್ ಎಂಬುವವರು ಟಾಂಗ್ ನೀಡಿದ್ದಾರೆ. ಆಟೋಮೊಬೈಲ್ ಉದ್ಯಮದ ಕುಸಿತಕ್ಕೆ ಹೊಸ ಪೀಳಿಗೆಯ ಜನ ಉಬರ್, ಓಲಾ ಬಳಸಿ, ಸ್ವಂತ ವಾಹ ಖರೀದಿಸದೆ ಇರುವುದೇ ಕಾರಣ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.

'ತಮಿಳರಾದ ನೀವು...' ಸಂದರ್ಶಕನ ಪ್ರಶ್ನೆಗೆ ಶಿವನ್ ಕೊಟ್ಟ ತೂಕದ ಉತ್ತರ!'ತಮಿಳರಾದ ನೀವು...' ಸಂದರ್ಶಕನ ಪ್ರಶ್ನೆಗೆ ಶಿವನ್ ಕೊಟ್ಟ ತೂಕದ ಉತ್ತರ!

English summary
Jokes related to Chandrayaan-2 Vikram Lander become Viral on social media now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X