ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಾಂತ್ಯಕ್ಕೊಂದಿಷ್ಟು ಕಚಗುಳಿ ಇಡುವ ಹಾಸ್ಯ+ಹನಿಗವನ

|
Google Oneindia Kannada News

ಒಬ್ಬ ಜಿಪುಣ ಮನಷ್ಯ ತನ್ನ ಮಗನಿಗೆ ಜೋರ್ ಹೊಡೀತಿರ್ತಾನ.
.
ಪಕ್ಕದ ಮನೆಯವಾ :
ನಿಮ್ಮದೇ ಮಗನಿಗೆ ಈ ಪರಿ
ಯಾಕ ಹೊಡಿಲಿಕ್ಕೆ ಹತ್ತೀರಿ ?

ಅಪ್ಪ : ಇವನಿಗೆ staircase ಹತ್ತುವಾಗ ಒಂದು step ಬಿಟ್ಟು ಹತ್ತು,,, ಚಪ್ಪಲಿ ಕಮ್ಮಿ ಸವಿತಾವ ಅಂತ ಹೇಳಿದರ ಈ ಮಗಾ 2 step ಬಿಟ್ಟು ಹತ್ತಲಿಕತ್ತಾನ.
.
ಪಕ್ಕದ ಮನೆಯವಾ ;
ಛೊಲೋ ಆತಲ್ಲರೀ ಚಪ್ಪಲಿ
ಇನ್ನೂ ಕಮ್ಮಿ ಸವಿತಾವ....
ಮತ್ಯಾಕ ಹೊಡ್ಯಾಕ್‌ಹತ್ತೀರಿ

Jokes for weekend: Popular Jokes from Social Media

ಅಪ್ಪ :
ಹೌದರಿ,, ಚಪ್ಪಲಿ ಕಮ್ಮಿ ಸವಿತಾವ ನಿಜ...
ಆದರ ಹಿಂಗ ಮಾಡಲಿಕ್ಕೆ ಹೋಗಿ ಚಡ್ಡಿ ಹರಕೊಂಡ್ ಕುಂತಾನ.
😜😜😜
.
😄😄😄😄
****
ಗಂಡ : ಮದುವೆಯಾಗಿ ಹತ್ತು ವರುಷ ಆಯ್ತು..ಇನ್ನು ನಂದು ನಂದು ಅನ್ನುತ್ತಿಯಲ್ಲಾ...ನಮ್ಮದು..ನಮ್ಮಿಬ್ಬರದ್ದು ಅನ್ನೋಕೆ ಕಲಿ...🙄🙄
ಹೆಂಡತಿ : ರ್ರಿ.. ನಮ್ಮಿಬ್ಬರದ್ದು ನೈಟಿ ಸಿಗ್ತಿಲ್ಲಾ..ಸ್ವಲ್ಪ ಹುಡುಕಿ ಕೊಡ್ರಿ....😍😍😍😍
***
ಯಾರ ಚಹರೆ ಹೋಲುವುದೋ
ಅವರು ಅಣ್ಣ ತಮ್ಮಂದಿರು.

ಯಾರ ವಿಚಾರ ಹೋಲುವುದೋ
ಅವರು ಆಪ್ತ ಮಿತ್ರರು.

ಯಾರ ಚಹರೆ, ವಿಚಾರ ಎರಡೂ
ಹೋಲುವುದಿಲ್ಲವೋ, ಅವರೇ
ಗಂಡ-ಹೆಂಡತಿ
😳🤩🥳😘😁😃
***
ಹನಿಗವನ

ಬ್ಯಾಂಕಿನಲ್ಲಿ 😀😀*
ಕ್ಯಾಶ್ ಕೌಂಟರಿನ
ಚೆಲುವೆಯ
ಸೌಂದರ್ಯದತ್ತ
ಹರಿದು ನೋಟ,
ಗಮನಿಸಲಿಲ್ಲ
ಅವಳು ಕೊಟ್ಟ
ಹರಿದ ನೋಟ!
😂😂😂😂

😀😀ಪತ್ರೆ 😀😀
ಶನಿದೇವರಿಗೆ ಶಮೀ ಪತ್ರೆ
ವಿಷ್ಣುವಿಗೆ ತುಳಸಿ ಪತ್ರೆ
ಈಶ್ವರನಿಗೆ ಪ್ರಿಯವಂತೆ
ಬಿಲ್ವ ಪತ್ರೆ
ಯಮನಿಗೆ ಸರಕಾರಿ
ಆಸ್-ಪತ್ರೆ
😉😀😀

😀😀ಅವಶ್ಯ 😀😀
ನದಿ ದಾಟಲು
ತೆಪ್ಪ ಇರಬೇಕು.
ಸಂಸಾರ
ಶರಧಿ ದಾಟಲು
ತೆಪ್ಪಗಿರಬೇಕು 😷🤐😜

😀😀ಚಿಂತೆ 😀😀
ಬಡವರಿಗೆ ಸದಾ
ಹೊಟ್ಟೆ ಹೊರೆವ
ಚಿಂತೆ.
ಶ್ರೀಮಂತರಿಗೆ
ಹೊಟ್ಟೆ
ಹೊರುವ ಚಿಂತೆ.😂

😀😀ಅಧ್ಯಕ್ಷ ಭಾಷಣ 😀😀
ಅದ್ಭುತವಾಗಿತ್ತು
ಅಧ್ಯಕ್ಷರ ಭಾಷಣ
ವಿಷಯ, ಶೈಲಿ, ಭಾಷೆ
ಎಲ್ಲವೂ ಚೆನ್ನ.
ಆದರೂ ನೋಡಬೇಕಾಗಿತ್ತು
ಒಮ್ಮೆಯಾದರೂ
ತಮ್ಮ ವಾಚನ್ನ😂😂😂

😀😀ಭಾಷಣ 😀😀
ಆರಂಭದಲ್ಲಿ
ಹೇಳುತ್ತಾರೆ
ಎರಡೇ ಎರಡು ಮಾತು.
ಮುಗಿಸುವಾಗ
ಆಗುವುದೇ ಬೇರೆ
ಎರಡೂ ಕಿವಿ ತೂತು! 😂😂

😀😀ನುಡಿದರೆ 😀😀
ಗೆಳೆಯಾ ಒಪ್ಪಿದೆ,
ನೀನು ನುಡಿದರೆ
ಮುತ್ತಿನ ಹಾರದಂತೆ.
ಆದರೂ ತುಸು
ಎಚ್ಚರ ವಹಿಸು
ಎಂಜಲು ಹಾರದಂತೆ! 😁😂

😀😀ಆದರೂ 😀😀
ವಯಸ್ಸಾದರೂ
ಹೆಂಗಸರು
ಗಂಡಸರನ್ನು ಕಂಡರೆ
ನಾಚ್ಕೊತಾರೆ.
ಗಂಡಸರು
ಬೋಳು ತಲೆ
ಬಾಚ್ಕೋತಾರೆ !😜😀😀

ಮರೆಯಲು ಯತ್ನಿಸಿದರೂ
ಮತ್ತೆ ಮತ್ತೆ ನೆನಪಾಗುವುದು
ಮಾಜಿ ಪ್ರೇಯಸಿಯ ಸವಿನುಡಿ

ಚೀಟಿಯಲ್ಲಿ ಬರೆದಿಟ್ಟರೂ
ಮರೆತು ಹೋಯಿತು ಮಡದಿ
ತರಲು ಹೇಳಿದ್ದ ಕಾಫಿಪುಡಿ. .!!!

😅😆😝😂😆😁😅

English summary
Jokes for the weekend : Here are few assorted jokes about Husband Wife and a comedy kavana which are popular on social media sites like Whatsapp, Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X