• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಂಡತಿ ಗುಲಾಮ: ಅಂದಿನ,ಇಂದಿನ,ಮುಂದಿನ, ಎಂದೆಂದಿನ ಸತ್ಯಕಥೆ

|

ಒಬ್ಬ ರಾಜ ಇದ್ದ.. ಆತನಿಗೆ ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನಸ್ಸಾಯಿತು. "ನಮ್ಮ ರಾಜ್ಯದಲ್ಲಿ ಎಷ್ಟು ಜನ ಗಂಡಂದಿರು ಹೆಂಡತಿಯರ ಗುಲಾಮರಿದ್ದಾರೆ?? ಎಂದು ತಿಳಿದುಕೊಳ್ಳುವ ಬಗ್ಗೆ ಒಂದು ಪಂದ್ಯ ಇಟ್ಟ.

ರಾಜ ಸಭಾಂಗಣದ ಒಂದು ಕಡೆ ಸೇಬು ಹಣ್ಣುಗಳನ್ನು ಮತ್ತು ಒಂದು ಕಡೆ ಕುದುರೆಗಳನ್ನು ಕಟ್ಟಿದ... ಯಾರು ಹೆಂಡತಿಯರ ಗುಲಾಮರೋ ಅವರು ಸೇಬು ತೆಗೆದುಕೊಳ್ಳಿ ಮತ್ತು ಯಾರು ನಿಮ್ಮ ಸ್ವಂತ ನಿರ್ದಾರ ತೆಗೆದುಕೊಳ್ಳುವಿರೋ, ಅವರು ತಮಗಿಷ್ಟವಾದ ಕುದುರೆಗಳನ್ನು ತೆಗೆದುಕೊಳ್ಳಿ ಎಂದ..

ಹೆಂಡ್ತಿ ಚಾಪೆ ಕೆಳಗೆ ನುಗ್ಗಿದ್ರೆ, ಗಂಡ ರಂಗೋಲಿ ಒಳಗೆ ನುಗ್ಬಿಟ್ಟ

ಜನಗಳೆಲ್ಲಾ ಬಂದ್ರು ಎಲ್ಲರೂ ಸೇಬು ಹಣ್ಣನ್ನೇ ತೆಗೆದುಕೊಂಡು ಹೋದರೇ ಹೊರತು ಒಬ್ಬರಾದರೂ ಕುದುರೆಯ ಹತ್ತಿರ ತಿರುಗಿ ಕೂಡಾ ನೋಡಲೇ ಇಲ್ಲಾ ... ರಾಜಾ ಚಿಂತಾಕ್ರಾಂತನಾದ... ಹೆಂಡತಿಯರ ಮಾತು ಕೇಳದೇ ಇರುವವರು ಒಬ್ಬರೂ ಇಲ್ಲವೇ ಈ ನನ್ನ ರಾಜ್ಯದಲ್ಲಿ ಎಂದು..

ಅಷ್ಟರಲ್ಲಿ ಒಬ್ಬ ಮಹಾ ಬಲಶಾಲಿ ವ್ಯಕ್ತಿ ಬಂದ.. ನೋಡಲು ಆಳೆತ್ತರ ವ್ಯಾಘ್ರ ಲಕ್ಷಣದ ಮುಖದವನು.. ಅವನು ಬಂದವನೇ ಕುದುರೆಯನ್ನು ತೆಗೆದುಕೊಳ್ಳಲು ಹೋದ.. ಆಗ ರಾಜ "ಹೇ ಗಂಡುಗಲಿ, ನಿನಗೆ ಯಾವ ಕುದುರೆ ಬೇಕೋ ಆ ಕುದುರೆಯನ್ನು ತೆಗೆದುಕೊಂಡು ಹೋಗು" ಎಂದ. ಆತ ಕಪ್ಪು ಬಣ್ಣದ ಬಲಿಷ್ಠ ಕುದುರೆಯನ್ನು ತೆಗೆದುಕೊಂಡು ಹೋದ..

ಹಾಸ್ಯ : ಪೊರಕೆ ಹಿಡಿದು ಬಂದ ಹೆಂಡತಿಗೆ ಹೆದರದ ಗಂಡ!

ಮತ್ತೆ ಆ ಕಾರ್ಯಕ್ರಮ ಸಂಜೆಯತನಕ ನಡೆಯಿತು, ಆದರೆ, ಮತ್ತೊಬ್ಬ ಯಾರೂ ಕುದುರೆಯನ್ನು ತೆಗೆದುಕೊಳ್ಳಲು ಬರಲೇಯಿಲ್ಲ...ಸಂಜೆ ಹೊತ್ತಿಗೆ ಇನ್ನೇನು ಪಂದ್ಯ ಮುಕ್ತಾಯವಾಗುವ ಹೊತ್ತಿನಲ್ಲಿ ಅದೇ ಆ ಬಲಿಷ್ಠ, ಬಲಶಾಲಿ ವ್ಯಕ್ತಿ ಕುದುರೆಯನ್ನು ವಾಪಸ್ ತೆಗೆದುಕೊಂಡು ಬಂದ.. ರಾಜ ಕೇಳಿದ, "ಏಕೆ ನಿನಗೆ ಇನ್ನೊಂದು ಕುದುರೆ ಬೇಕಾ ವೀರಾ..?"

ಅದಕ್ಕೆ ಆ ಮಹಾಬಲಶಾಲಿ ವ್ಯಕ್ತಿ ಹೇಳಿದ, "ಇಲ್ಲ ಮಹಾಪ್ರಭು ನನ್ನ ಹೆಂಡತಿ ಈ ಕಪ್ಪು ಕುದುರೆ ಬೇಡ ಅಂದಳು.. ಕಪ್ಪು ಬಣ್ಣ ಅಶುಭ ಅಂತೆ, ಅದಕ್ಕೇ ಅವಳು ಹೇಳಿದ ಹಾಗೆ ನಾನು ಬಿಳಿಯ ಕುದುರೆಯನ್ನು ಒಯ್ಯಲು ಬಂದಿದ್ದೇನೆ.. ಎಂದ..ರಾಜನಿಗೆ ಕೋಪ ಬಂತು..

" ಥೂ ರಣಹೇಡಿ, ಹೆಂಡತಿಯ ಗುಲಾಮ., ನಾಚಿಕೆ ಆಗಬೇಕು ನಿನಗೆ.. ಈ ನಿನ್ನ ಬಲಿಷ್ಠ, ಬಲಾಢ್ಯವಾದ ದೇಹದಾಡ್ಯಕ್ಕೆ.., ಅಮಿಕ್ಕೊಂಡ್ ಒಂದ್ ಆಪಲ್ ತಗೊಂಡ್ ಹೋಗ್ಲಾ ಬಡವ ರಾಸ್ಕಲ್ " ಎಂದು ಜೋರಾಗಿ ಕಿರುಚಿದ..

ಹಾಸ್ಯ ತುಣುಕುಗಳು: ನಮ್ ಲವ್ ವಿಷ್ಯಾನ ಮನೇಲಿ ಮೆಲ್ಲಗ್ ಹೇಳ್ಬಿಟ್ಟೆ

ಅಂದಿನ ಸಭೆ ಮುಗಿಯಿತು. ಮದ್ಯರಾತ್ರಿ ಮಹಾಮಂತ್ರಿ ರಾಜನ ಕೋಣೆಯ ಬಾಗಿಲು ತಟ್ಟಿದ, ಮಹಾರಾಜ ಕೇಳಿದ ಏನಾಯ್ತು? ಮಹಾಮಂತ್ರಿ ಹೇಳಿದ, "ಮಹಾರಾಜಾ ನಾವು ಕುದುರೆ ಬದಲು ವಜ್ರ ವೈಢೂರ್ಯ ಏನಾದ್ರು ಇಟ್ಟಿದ್ರೆ ಯಾರಾದ್ರೂ ಒಯ್ಯೊಕೆ ಬರ್ತಿದ್ರೋ ಏನೋ ಅಲ್ಲವೇ?' ಅದಕ್ಕೆ ಮಹಾರಾಜ ಹೇಳಿದ, ' ನಾನೂ ಅದನ್ನೇ ಇಡಬೇಕು ಅಂತ ಮಾಡಿದ್ದೆ, ಆದ್ರೆ ಇವಳು ಬ್ಯಾಡ ಅಂದ್ಬಿಟ್ಳು' ಮಹಾಮಂತ್ರಿ:- ಹೌದಾ..?? ಹಾಗಾದ್ರೆ ನಿಮಗೂ ಸೇಬು ಕೊಡಬೇಕು ಅನ್ನಿ..

ಬೆಂಗಳೂರು ಕಲ್ಯಾಣ ಮಂಟಪದ ಮದುವೇಲಿ ಹೆಣ್ಣೇ ಇಲ್ಲ. ಎರಡೂ ಗಂಡೇ

ಮಹಾರಾಜ- (ನಗುತ್ತಾ) ಅದೇನೋ ಸರಿ, ನೀವು ಇಷ್ಟೊತ್ತಲ್ಲಿ ಯಾಕೆ ಕೇಳೋಕೆ ಬಂದ್ರಿ ಹಗಲೊತ್ತೆ ಕೇಳಬಹುದಿತ್ತಲ್ವಾ ? ಮಹಾಮಂತ್ರಿ:- ಈ ಪ್ರಶ್ನೆ ನನಗೆ ಹೊಳೆದಿದ್ದಲ್ಲ., ನನ್ ಹೆಂಡ್ತಿ ಹೇಳಿದ್ಳು, ಇವಾಗ್ಲೇ ಹೋಗಿ ಕೇಳ್ಕೊಂಡ್ ಬನ್ರೀ.. ಅಂತ. ಮಹಾರಾಜ - ಹಾಗಾದ್ರೆ ನಿಮಗೆ ಒಂದು ಲಾರಿ ಲೋಡ್ ಭರ್ತಿ ಸೇಬುಗಳನ್ನೇ ಕಳಿಸಬೇಕು ಬಿಡಿ... (ವಾಟ್ಸಾಪ್ ಕೃಪೆ)

English summary
Jokes for the day: Who is not listening the wife's word? A King sponsered a challenge on this and everybody failed in this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X