ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಕೈಬೀಸಿ ಕರೆದಳೂಂತಾ ಗುಂಡ ಮನೆಯೊಳಗೆ ಹೋಗೋದಾ!!

ಜೋಕ್ಸ್: ತಿಮ್ಮ ಬೇಡಬೇಡ ಅಂದರೂ ಗುಂಡ ಸುಂದರ ಮಹಿಳೆಯ ಮನೆಗೆ ಹೋದ.. ಆ ಹೊತ್ತಿಗೆ ಮನೆಗೆ ಮಹಿಳೆಯ ಗಂಡ ಬಂದ.. ಆಗ ಏನಾಯ್ತು?

|
Google Oneindia Kannada News

ಆತ್ಮೀಯ ಸ್ನೇಹಿತರಾದ ಗುಂಡ ಮತ್ತು ತಿಮ್ಮ ನಡ್ಕೊಂಡು ಹೋಗ್ತಾ ಇದ್ರು.. ದಾರೀಲಿ ಒಂದು ಮನೆಯ ಮಹಡಿ ಮೇಲಿಂದ ಒಬ್ಳು ಸುಂದರ ಮಹಿಳೆ ಕಿಟಕಿ ಮರೆಯಿಂದ ಇವರನ್ನ ನೋಡಿ ಕಣ್ಣಲ್ಲಿ ಸಂಜ್ಞೆ ಮಾಡೋದನ್ನ ಗುಂಡ ನೋಡಿದ, ಗುಂಡ ಅದನ್ನ ತಿಮ್ಮನಿಗೆ ಹೇಳಿದ..

ಲೇ ಗುಂಡ.. ಅಕಡೆ ನೋಡ್ಬೇಡ ಎಂದ್ರೂ ತಿಮ್ಮನ ಮಾತನ್ನು ಕ್ಯಾರ್ ಮಾಡದೇ ಗುಂಡ ಆ ಮಹಿಳೆಯನ್ನು ಮತ್ತೆಮತ್ತೆ ನೋಡ್ದ... ಮಹಿಳೆ ಗುಂಡನಿಗೆ ಕೈಬೀಸಿ ಮನೆಯೊಳಗೆ ಬರುವಂತೆ ಕರೆದ್ಳು..

ತಿಮ್ಮ ಬೇಡ ಬೇಡ ಅಂದ್ರೂ ಗುಂಡ ಆ ಮಹಿಳೆಯ ಮನೆಬಾಗಿಲು ತಟ್ಟಿದ. ಹೆಂಗಸು ಬಾಗಿಲು ತೆರೆದು ಇವನನ್ನು ಒಳಗೆಳೆದುಕೊಂಡಳು. ಒಂದೆರಡು ಮುತ್ತು ಕೊಟ್ಟು ಇನ್ನೇನು ಮುಂದುವರಿಸಬೇಕು ಅನ್ನೋವಾಗ ಹೊರಗಡೆ ಕಾರು ಬಂದ ಶಬ್ದವಾಯಿತು.

ಮಹಿಳೆ ಗಾಬರಿಯಿಂದ ' ಅಯ್ಯೋ, ನನ್ ಗಂಡ ಬಂದ ಹಾಗಿದೆ. ನೀನೇನೂ ಚಿಂತೆ ಮಾಡ್ಬೇಡ. ಅಲ್ಲಿ ಸ್ವಲ್ಪ ಬಟ್ಟೆ ಕಾಣಿಸ್ತಿದೆ ನೋಡು. ‌ಅವನ್ನು ಇಸ್ತ್ರಿ ಮಾಡ್ತಾ ಇರು. ನನ್ ಗಂಡಂಗೆ 'ನೀನು ಇಸ್ತ್ರೀ ಅಂಗ್ಡಿಯೋನು, ಐರನ್ ಮಾಡೋಕೆ ಯಾವಾಗ್ಲೂ ಬರ್ತಾ ಇರ್ತಾನೆ' ಅಂತ ಹೇಳ್ತೀನಿ' ಅಂತ ಹೇಳಿ ಮಹಿಳೆ ಬಾಗ್ಲು ತೆಗೀಲಿಕ್ಕೆ ಹೋದ್ಳು.

ಗುಂಡ ಹೆದರಿ ದಡಬಡಾಂತ ಇಸ್ತ್ರಿ ಮಾಡೋಕೆ ಶುರು ಮಾಡ್ದ... ಬಂದ ಗಂಡ 2-3 ಗಂಟೆಯಾದ್ರೂ ಹೊರಗೆ ಹೋಗ್ಲೇ ಇಲ್ಲ..ಇಸ್ರೀ ಮಾಡೀ ಮಾಡೀ ಗುಂಡನ ಸೊಂಟ ಬಿದ್ದೋಯ್ತು. ಹೇಗೋ ಮುಗಿಸಿ ಹೊರಬೀಳೋಷ್ಟ್ರಲ್ಲಿ ಗುಂಡನಿಗೆ ಸಾಕ್ ಸಾಕಾಗಿ ಹೋಯ್ತು.

ಹೊರಬಿದ್ದವ್ನೇ ಸೀದಾ ತನ್ ಫ್ರೆಂಡ್ ತಿಮ್ಮನ ಮನೆಗೆ ಓಡಿ ನಡೆದ ವಿಷಯವನ್ನೆಲ್ಲಾ ತಿಮ್ಮನ ಬಳಿ ಹೇಳ್ದ... ತಿಮ್ಮ ಬಿದ್ದು ಬಿದ್ದು ನಗೋಕ್ ಶುರು ಮಾಡ್ದ.

ತಿಮ್ಮ: ನಂಗೆ ಗೊತ್ತಿತ್ತು, ಹೀಗೇ ಏನೋ ಆಗುತ್ತೆ ಅಂತ..
ಗುಂಡ: ನಿಂಗ್ ಹ್ಯಾಗ್ ಗೊತ್ತು?
ತಿಮ್ಮ: ಯಾಕಂದ್ರೆ ಇವತ್ತು ನೀನು ಇಸ್ತ್ರಿ ಹಾಕಿದೆಯಲ್ಲಾ.. ಆ ಬಟ್ಟೇನೆಲ್ಲಾ ನಿನ್ನೆ ನಾನೇ ಒಗ್ದ್ ಹಾಕಿದ್ದು... (ವಾಟ್ಸಾಪ್ ಜೋಕ್ಸ್)

English summary
Jokes for the day: When Gunda and lady alone, husband entered. What happened next?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X