• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ ಮನೆಗೆ ಏನಾದ್ರೂ ಐಟಿ ರೈಡ್ ಆದ್ರೆ, ಅದರ ಕಥೆನೇ ಬೇರೆ!!

|

ಚಂದನವನವನ್ನು ಅಲ್ಲಾಡಿಸುತ್ತಿರುವ ಆದಾಯ ತೆರಿಗೆ ಇಲಾಖೆಯ ದಾಳಿಯ ನಂತರ, ಸಾಮಾಜಿಕ ಜಾಲತಾಣದಲ್ಲಿ ಹಲವು ಜೋಕ್ಸ್ ಗಳು ಓಡಾಡುತ್ತಿವೆ. ಅದರ ಕೆಲವು ಸ್ಯಾಂಪಲ್ ಗಳು ಇಲ್ಲಿವೆ, ಕೆಲವೊಂದು ಜೋಕ್ಸುಗಳನ್ನು 'ಜೋಕ್ಸ್' ಗಳಾಗಿಯೇ ತೆಗೆದುಕೊಳ್ಳಬೇಕಾಗಿ ವಿನಂತಿ..

ವಾಟ್ಸಾಪ್, ಫೇಸ್ ಬುಕ್ ನೋಡುವುದರಿಂದ ಮನುಷ್ಯ ಮುಂದೆ ಬರ್ತಾನೆ

ಆಫೀಸರ್: ಎಲ್ಲಾ ಓಕೆ ಸರ್.. ಆದರೆ ನೀವು ನಾಯಿ ಜಿಲೇಬಿ ತಿಂದ, ಐದು ಲಕ್ಷಕ್ಕೆ ಡಾಕ್ಯುಮೆಂಟ್ ಕೊಟ್ಟಿಲ್ವಲ್ಲಾ..

ಗುಂಡ: ಅದಕ್ಕೆಲ್ಲಾ.. ಲೆಕ್ಕ ಕೊಡಕ್ಕಾಗಲ್ಲಾ...

ಆಫೀಸರ್: ಹಾಗಿದ್ರೆ.. ಕಷ್ಟ ಮಿಸ್ಟರ್ ಗುಂಡ.. ನೋಡಿ ನಮಗೆ ಇಪ್ಪತ್ತೈದು ಸಾವಿರ ಕೊಟ್ರೆ, ಇಲ್ಲೇ ಕ್ಲೋಸ್ ಮಾಡ್ತೀವಿ..

ಗುಂಡ: ಏ ಬಾರೋ ಇಲ್ಲಿ.. ಸಾಹೇಬ್ರಿಗೆ 25ಸಾವಿರ ಕೊಟ್ಟು.. ಅದನ್ನು ಜಿಲೇಬಿ ಲೆಕ್ಕಕ್ಕೆ ಹಾಕು...

--

ತಿಮ್ಮ: ನನ್ನ ಗರ್ಲ್ ಫ್ರೆಂಡ್ ಮನೆಗೆ ಐಟಿ ರೈಡ್ ಆಗಿದ್ರೆ ಚೆನ್ನಾಗಿರ್ತಿತ್ತು..

ರಾಜ: ಯಾಕೋ.. ಏನಾಯ್ತು?

ತಿಮ್ಮ: ಲ್ಯಾಪ್ ಟಾಪ್, ಐಫೋನ್ ಅಂತ ಲಕ್ಷ ಲಕ್ಷ ತಗೊಂಡವ್ಳೇ ಕಣೋ.. ಇನ್ನೂ ಬೇಸಿಕ್ ಮಾಡೆಲ್ ಯೂಸ್ ಮಾಡ್ತವ್ಳೇ.. ವಾಟ್ಸಾಪ್ ಇಲ್ಲಾಂತಾಳೇ..

--

ಹೆಂಡತಿ ಗುಲಾಮ: ಅಂದಿನ,ಇಂದಿನ,ಮುಂದಿನ, ಎಂದೆಂದಿನ ಸತ್ಯಕಥೆ

ಹೆಂಡತಿ: ರೀ.. ಯಾವ್ ಚಾನೆಲ್ ಹಾಕಿದ್ರೂ.. ಬರೀ..ಐಟಿ ರೈಡಿದ್ದೇ ಸುದ್ದಿ...

ಗಂಡ: ಅದಕ್ಕೇನಂತೆ ಈವಾಗ?

ಹೆಂಡತಿ: ಅಲ್ಲಾರೀ.. ನಮ್ ಮನೆಗೇನಾದ್ರೂ ಬಂದ್ರೆ?

ಗಂಡ: ಏನ್ ಚಿಂತೆ ಮಾಡ್ಭೇಡ.. ನಮ್ ಮನೆಗೆ ಬಂದ್ರೆ, ನಮ್ಮ ಪರ್ಸನಲ್ ಲೋನ್ ಅನ್ನು ಅವರೇ ಕ್ಲಿಯರ್ ಮಾಡಿ ಹೋಗ್ತಾರೆ..

English summary
Jokes for the day: What will happen, if IT raid on Gundas house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X