• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸ್ಯ: ಡಾಕ್ಟ್ರು ಪೇಷೆಂಟು ಒಂದೈದು ಜಾಲಿ ಜೋಕ್ಸು

|

ಯಾವ ಯಾವ ವಿಭಾಗ ಡಾಕ್ಟ್ರು ಏನೇನು ಸಲಹೆ ಕೊಡಬಹುದು ಅನ್ನೋದನ್ನು ಓದಿ ನಕ್ಕು ಬಿಡಿ. ನೀವೂ ನಗುವುದು ಮಾತ್ರ ಅಲ್ಲ ಬೇರೆಯವರಿಗೂ ಕಳಿಸಿ ಯಾಕೆಂದರೆ ನಗುವುದಕ್ಕೂ ಸಮಯ ಇಲ್ಲದಂತೆ ಆಗಿದೆ ಜೀವನ..

Pediatrician ...ಮಕ್ಕಳಿರಲವ್ವ ಮನೆ ತುಂಬಾ....

Orthopedician...... ಮಾನವಾ.... ಮೂಳೆ ಮಾಂಸದ ತಡಿಕೆ

Gynecologist.....ನಾನು ನೀನು ಒಂದಾದ ಮೇಲೆ /ಧರಣಿಗೆ ಗಿರಿ ಭಾರವೆ, ಗಿರಿಗೆ ಮರವು ಭಾರವೆ, ಬಳ್ಳಿಗೆ ಕಾಯಿ ಭಾರವೆ Pulmonologist.....ಉಸಿರೇ ಉಸಿರೇ ... ನೀ ಉಸಿರ ಮರೆಯಬೇಡ

Gastroenterologist ....ತುತ್ತು ಅನ್ನ ತಿನ್ನೋಕೆ ಬೊಗಸೆ ಕುಡಿಯೋಕೆ

Dermatologist... ಈ... ಟಚಲಿ, ಏನೋ ಇದೆ

Psychologist.... ಮನಸೇ ಓ ಮನಸೇ ಎಂತಾ ಮನಸ್ಸೇ

Radiologist .... ಏನೈತಿ ಒಳಗ ಏನೈತಿ

Ophthalmologist ... ಕಣ್ಣು ಕಣ್ಣೂ ಕಲೆತಾಗ....

Cardiologist... ಹೃದಯದಲಿ ಇದೇನಿದು ನದಿಯೊಂದು ಓಡಿದೆ

General practitioner... ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ

Anesthetist.. ಮಲಗು ಮಲಗು ಚಾರುಲತೆ ನಿನಗೂ ನೆರಳಿದೆ

Psychiatrist ಏಕೋ ಏನೋ ಈ ನನ್ನ ಮನವು ಉಯ್ಯಾಲೆಯಾಗಿ ತೂಗಿದೆ

ENT ಕಿವಿ ಮಾತ ಒಂದು.. ಹೇಳಲೆ ನಾನಿಂದು... ದಾರಿ ನಿಂತಾಗ... ಸಾಗಲೆ ಬೇಕೆಂದು .......

Dedicated to Doctors 😜😛😝😖😖😖

****

ಡಾಕ್ಟರ್ - ಹುಂ.. ಏನ್ ತಿಂಡಿ ತಿಂದಿದ್ಯವ್ವಾ?

ಹುಡ್ಗಿ- ಐ ಈಟ್ ಹಂಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ and ಕಾರ್ನ್ ಪಿಜ್ಜಾ..

ಡಾಕ್ಟರ್- ಇದು ಫೇಸ್'ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ?

ಹುಡ್ಗಿ- ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ.. 😂😂😂😂

****

ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ..

ಗುಂಡ : "ಕರ್ಕೊಂಡ್ ಬನ್ನಿ, ಹೊತ್ಕಂಡ್ ಹೋಗಿ, ಹಣ ನಮಗೆ, ಹೆಣ ನಿಮಗೆ " 😂😂😂😂😂

****

ಎಲ್ಲಾ ಅಂಗಾಂಗಗಳನ್ನು ಪರೀಕ್ಷಿಸಿ ನಿನಗೆ ಇವತ್ತೇ ಕೊನೆ ರಾತ್ರಿ ಅಂತ ಡಾಕ್ಟರ್ ಸುಬ್ಬಾರಾವ್‌ಗೆ ಹೇಳಿದರು.

ತನಗಾದ ನೋವನ್ನು ನುಂಗಿಕೊಂಡು ಹೆಂಡತಿ ಹತ್ತಿರ ಅರ್ಧರಾತ್ರಿ ವರೆಗೂ ಮಾತಾಡ್ತಿದ್ದ ಪಾಪ ಸುಬ್ಬಾರಾವ್.

ತೂಕಡಿಸುತ್ತಿದ್ದ ಹೆಂಡತೀನ ಲೇ ನಿದ್ರೆ ಮಾಡ್ತಿದ್ದೀಯಾ? ಅಂತ ಕೇಳ್ದಾ.

ಹೌದು...ರೀ.. ನೀವಾದ್ರೆ ಬೆಳಿಗ್ಗೆ ಏಳೋಹಾಗಿಲ್ಲ ನಾನು ಎದ್ದೇಳ ಬೇಕು, ತುಂಬಾ ಕೆಲ್ಸಾ ಇದೆ ಅಂದ್ಲು ಹೆಂಡತಿ.!! 🤭🤭🤭🤭🤭🤭🤭

****

ಗಂಡ : ಡಾಕ್ಟ್ರೇ ಅರ್ಜೆಂಟ್‌. ನನ್ನ ಹೆಂಡ್ತಿಗೆ ಅಪೆಂಡಿಸೈಟಿಸ್‌ ಆಗಿರ್ಬೇಕು...ಹೊಟ್ಟೇನೋವು ಅಂತಿದಾಳೆ...ಕೂಡಲೇ ಬನ್ನಿ!

ಡಾಕ್ಟರ್‌ : Impossible...ಕಳೆದ ವರ್ಷವಿನ್ನೂ ನಿಮ್ಮ ಹೆಂಡತಿಗೆ ಅಪೆಂಡಿಸೈಟಿಸ್‌ ಆಪರೇಷನ್‌ ಮಾಡಿದ್ದೇನೆ. ಎರಡೆರಡು ಅಪೆಂಡಿಕ್ಸ್‌ ಇರೋಲ್ಲ.

ಗಂಡ : ಎರಡೆರಡು ಅಪೆಂಡಿಕ್ಸ್‌ ಇರೋಲ್ಲ ಸರಿ ಡಾಕ್ಟ್ರೇ..ಎರಡೆರಡು ಹೆಂಡತಿ ಇರಬಾರದಾ?! 😜😜

English summary
Jokes for the Day : Here are few assorted jokes about Husband Wife and Doctor Jokes popular on social media sites like Whatsapp, Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X