ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿತಶಾಸ್ತ್ರದಲ್ಲಿ ಹೊಸದಾಗಿ ಜಾರಿಗೆ ಬಂದ ಸಿಲ್ಲಬಸ್: ಕೋವಿಡ್ ಮ್ಯಾಥ್ಸ್

|
Google Oneindia Kannada News

ಕೊರೊನಾ ಹಾವಳಿ ದೇಶದಲ್ಲಿ ಕಮ್ಮಿಯಾಗುತ್ತಾ ಬಂತು, ಇದಕ್ಕೆ ಲಸಿಕೆಯೂ ಸಿಕ್ಕಿತು ಎನ್ನುವಷ್ಟರಲ್ಲಿ ಕೆಲವು ರಾಜ್ಯಗಳಲ್ಲಿ ಮತ್ತೆ ಈ ವೈರಾಣುವಿನ ಉಪಟಳ ಆರಂಭವಾಗಿದೆ. ಕೆಲವು ಭಾಗಗಳಲ್ಲಿ ಮತ್ತೆ ಕ್ವಾರಂಟೈನೂ ಆರಂಭವಾಗಿದೆ.

ಈ ಕ್ವಾರಂಟೈನ್, ಪ್ರೈಮರಿ ಕ್ವಾಂಟ್ಯಾಕ್ಟ್, ಸೆಕೆಂಡರಿ ಕ್ವಾಂಟ್ಯಾಕ್ಟ್ ಮುಂತಾದ ಪದಗಳು ಕೆಲವು ತಿಂಗಳ ಹಿಂದೆ, ಮನೆಮನೆ ಮಾತಾಗಿತ್ತು. ಈ ಕುರಿತು ವಾಟ್ಸಾಪ್ ನಲ್ಲಿ ಜೋಕ್ಸ್ ಒಂದು ಹರಿದಾಡುತ್ತಿದೆ. ಅದು ಹೀಗಿದೆ:

ಬೆಂಗಳೂರು ದಕ್ಷಿಣ ಭಾಗದ ಹುಡುಗಿಗೆ ಕೋವಿಡ್ 19 ಪಾಸಿಟೀವ್ ದೃಢಪಡುತ್ತದೆ. ಅವಳನ್ನು ಮತ್ತೆ ಆಕೆಯ ಬಾಯ್ ಫ್ರೆಂಡ್ ಅನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ.

ಎರಡು ದಿನಗಳ ನಂತರ ಆ ಹುಡುಗಿಗೆ ಮತ್ತೆ ಮೂವರು ಬಾಯ್ ಫ್ರೆಂಡ್ ಇರುವ ವಿಚಾರ ತಿಳಿಯುತ್ತದೆ. ಹಾಗಾಗಿ, ಆ ಹುಡುಗಿ ಮತ್ತು ನಾಲ್ವರನ್ನು ಸೇರಿದಂತೆ ಆ ಕುಟುಂಬಗಳ ಒಟ್ಟು 37 ಸದಸ್ಯರನ್ನು ಕ್ವಾರಂಟೈನ್ ಗೆ ಹಾಕಲಾಗುತ್ತದೆ.

Jokes For The Day: New Syllabus Introduced In Mathematics Covid Maths

ಗಂಡಾಂತರ ಇಲ್ಲಿಗೇ ಮುಗಿಯುವುದಿಲ್ಲ. ಆ ಹುಡುಗಿಯ ಇಬ್ಬರು ಬಾಯ್ ಫ್ರೆಂಡ್ ಗಳಿಗೆ ಮತ್ತಿಬ್ಬರು ಗರ್ಲ್ ಫ್ರೆಂಡ್ ಇರುವುದು ಗೊತ್ತಾಗುತ್ತದೆ. ಅಷ್ಟಕ್ಕೂ ಮುಗಿಯದೇ, ಈ ಇಬ್ಬರು ಗರ್ಲ್ ಫ್ರೆಂಡ್ ಗಳ ಪೈಕಿ ಒಬ್ಬಳಿಗೆ ಇನ್ನಿಬ್ಬರು ಬಾಯ್ ಫ್ರೆಂಡ್ ಇರುತ್ತಾರೆ. ಅದರಲ್ಲಿ ಒಬ್ಬ ಗೃಹಸ್ಥನಾಗಿರುತ್ತಾನೆ.

ಹಾಗಾದರೆ, ಒಟ್ಟು ಎಷ್ಟು ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಯಿತು?
ಬನ್ನಿ.. ಇದನ್ನು ಸುಲಭವಾಗಿ ಕಲಿಯಲು ಹೊಸ ಸಿಲ್ಲಬಸ್ ಅನ್ನು ಗಣಿತ ಶಾಸ್ತ್ರದಲ್ಲಿ ಆರಂಭಿಸಲಾಗಿದೆ..
ಅದೇ.. ಕೋವಿಡ್ ಮ್ಯಾಥ್ಸ್

English summary
Jokes For The Day: New Syllabus Introduced In Mathematics Covid Maths,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X