• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಟ್ಸಾಪ್, ಫೇಸ್ ಬುಕ್ ನೋಡುವುದರಿಂದ ಮನುಷ್ಯ ಮುಂದೆ ಬರ್ತಾನೆ

|

ಟ್ರೈನ್ ನಲ್ಲಿ ಇಬ್ಬರು ಗೆಳೆಯರ ಜೊತೆ ಸಂಭಾಷಣೆ ನಡೆಯುತ್ತಿತ್ತು..

ಒಬ್ಬ : ವಾಟ್ಸಾಪ್, ಫೇಸ್ ಬುಕ್ ನೋಡುವುದರಿಂದ ಮನುಷ್ಯ ಮುಂದೆ ಬರುತ್ತಾನೆ. ..

ಇನ್ನೊಬ್ಬ : ಅದು ಹೇಗೆ ಸಾಧ್ಯ ?

ಒಬ್ಬ : ಈಗ ನನ್ನನ್ನೇ ನೋಡು, ಎರಡು ಸ್ಟೇಷನ್ ಹಿಂದೇ ಇಳಿಯಬೇಕಿತ್ತು...

--

ಗುಂಡ : ತಲೆಗೆ ಅಷ್ಟೊಂದು ಗಾಯ ಹೇಗೋ ಆಯ್ತು..

ತಿಮ್ಮ: ಹೆಂಡ್ತಿ ಹೊಡೆದಳು ಕಣೋ..

ಗುಂಡ : ಯಾಕೆ?

ತಿಮ್ಮ: ಅವಳ ಅಪ್ಪ-ಅಮ್ಮ ಬಂದಿದ್ರು.....ಹೊರಗೆ ಹೋಗಿ ಎನಾದ್ರೂ ತನ್ನಿ ಅಂದ್ಲು...

ಗುಂಡ: ನೀನು ಹೋಗಿ ಏನ್ ತಂದೆ?

ತಿಮ್ಮ: ಆಟೋ ತಗೊಂಡ್ ಬಂದೆ, ಅಷ್ಟೆ..!!

--

ಸ್ಕೂಲಿಗೆ ತಡವಾಗಿ ಬಂದ, ವಿದ್ಯಾರ್ಥಿಯನ್ನು ಟೀಚರ್ ಪ್ರಶ್ನಿಸುತ್ತಾರೆ...

ಟೀಚರ್: ಯಾಕೆ ಸ್ಕೂಲಿಗೆ ಲೇಟ್?

ವಿದ್ಯಾರ್ಥಿ: ನನ್ನ ಅಪ್ಪ..ಅಮ್ಮ ಜಗಳವಾಡುತ್ತಾ ಇದ್ರು..

ಟೀಚರ್: ಅವರಿಬ್ಬರು ಜಗಳವಾಡುತ್ತಾ ಇದ್ರೆ, ನೀನ್ಯಾಕೆ ಲೇಟಾಗಿ ಬರಬೇಕು?

ವಿದ್ಯಾರ್ಥಿ: ನನ್ನ ಒಂದೂ ಶೂ ಅಪ್ಪನ ಕೈಯಲ್ಲಿ, ಇನ್ನೊಂದು ಅಮ್ಮನ ಕೈಯಲ್ಲಿ ಇತ್ತು ಟೀಚರ್..

ಟೀಚರ್: ಹೋಗ್ಲಿ.. ಕ್ಲಾಸ್ ಅಲ್ಲಿ ಕೂತ್ಕೋ..

English summary
Jokes for the day: If you more and more use Facebook and Whatsapp you can come up in life
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X