• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್ ಯಾವ ಕಾರಣಕ್ಕೂ ಸಿಲ್ಕ್ ಬೋರ್ಡ್ ದಾಟಿ ಬರಲು ಸಾಧ್ಯವಿಲ್ಲ

|

ಈಗ ಎಲ್ಲಡೆ ಕೊರೊನಾ ವೈರಸ್ ನದ್ದೇ ಸುದ್ದಿ. ಕೊರೊನಾ, ಭಾರತಕ್ಕೂ ಬಂದಿದೆಯಂತೆ, ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಇನ್ನು, ಸಾಮಾಜಿಕ ತಾಣದಲ್ಲಿ ಎಂದಿನಂತೆ, ಅದಕ್ಕೆ ಒಗ್ಗರಣೆ ಸೇರಿಸಿ ಹರಿಯಬಿಡಲಾಗುತ್ತಿದೆ.

ಸಾರ್ವಜನಿಕರು ತೆಗೆದುಕೊಳ್ಲಬೇಕಾದ ಮುಂಜಾಗೃತಾ ಕ್ರಮದ ಬಗ್ಗೆಯೂ ಸುದ್ದಿಗಳು ಬಿತ್ತರಗೊಳ್ಳುತ್ತಿದೆ. ಮಾಸ್ಕ್ ಬೆಲೆ ಇದ್ದಕ್ಕಿದ್ದಂತೆಯೇ ಗಗನಕ್ಕೂ ಅಲ್ಲಾ.. ಅದಕ್ಕೂ ಮೇಲೆ ಏರಿದೆ.

ಕೊರೊನಾ ವೈರಸ್ ಎನ್ನುವುದು ಎಷ್ಟು ಮಾರಣಾಂತಿಕವೋ, ಅದರ ವಿಚಾರದಲ್ಲಿ ಜೋಕ್ಸ್, ಮೇಮ್ಸ್ ಗಳಿಗೂ ಏನೂ ಬರವಿಲ್ಲ. ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್ ನಲ್ಲಿ ಕೊರೊನಾ ಜೋಕ್ಸ್ ಗಳು ಬಂದು ಬಂದು ಬೀಳುತ್ತಿವೆ.

ಕೊರೊನಾ ಬಗ್ಗೆ ಆರ್.ಜಿ.ವಿ ಕುಹಕ: ಸಾವು ಕೂಡ ಮೇಡ್ ಇನ್ ಚೀನಾ!

ಪಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, "ಭಯ ಪಡಬೇಡಿ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ. ಕೊರೊನೊ, ಜೋಕ್ಸಿನ ಕೆಲವೊಂದು ಸ್ಯಾಂಪಲ್ ಗಳು:

ಇದು ವೈವಾಹಿಕ ಜೀವನದ ಲಕ್ಷಣಗಳು

ಇದು ವೈವಾಹಿಕ ಜೀವನದ ಲಕ್ಷಣಗಳು

ಈ ಕೆಳಗಿನ ಲಕ್ಷಣಗಳು ನಿಮಗೆ ಕಾಣಿಸುತ್ತಿವೆಯೇ?

ತಲೆನೋವುತ್ತಿದೆಯೇ, ಮೈಕೈಯೆಲ್ಲಾ ನೋವೇ

ಕಣ್ಣು ಮಂದ ಮಂದವಾಗುತ್ತಿದೆಯೇ

ಉಸಿರಾಡಲು ಸಮಸ್ಯೆ ಆಗುತ್ತಿದೆಯೇ

ನಿದ್ದೆ ಸರಿಯಾಗಿ ಬರುತ್ತಿಲ್ಲವೇ...

ಹಾಗಾದರೆ.. ಇದು ಕೊರೊನಾ ವೈರಸ್ ಖಂಡಿತ ಅಲ್ಲ..

ಇದು ವೈವಾಹಿಕ ಜೀವನದ ಲಕ್ಷಣಗಳು

ಸಿಲ್ಕ್ ಬೋರ್ಡ್ ದಾಟಿ ಬರುಲು ಸಾಧ್ಯವಿಲ್ಲ

ಸಿಲ್ಕ್ ಬೋರ್ಡ್ ದಾಟಿ ಬರುಲು ಸಾಧ್ಯವಿಲ್ಲ

ಕೊರೊನಾ ವೈರಸ್ ಬೆಂಗಳೂರು ತಲುಪಿದೆ..

ಸಜ್ಜಾಪುರ ರಸ್ತೆಯಲ್ಲಿ ಕೆಲಸ ಮಾಡುವ ವ್ಯಕ್ತಿಯಿಂದ ಈ ವೈರಸ್ ಸಿಲಿಕಾನ್ ಸಿಟಿಗೆ ಬಂದಿದೆ..

ಆದರೆ, ಬನಶಂಕರಿ ಮತ್ತು ಬೆಂಗಳೂರು ದಕ್ಷಿಣ ಭಾಗದ ಜನತೆ ಭಯ ಪಡಬೇಕಾಗಿಲ್ಲ..

ಯಾಕೆಂದರೆ ಕೊರೊನಾ ವೈರಸ್, ಸಿಲ್ಕ್ ಬೋರ್ಡ್ ದಾಟಿ ಬರಲು ಸಾಧ್ಯವೇ ಇಲ್ಲ..

#ನಮ್ಮ ಸಿಲ್ಕ್ ಬೋರ್ಡ್, #ನಮ್ಮ ಹೆಮ್ಮೆ

ಡೆಡ್ಲಿ ಕೊರೊನಾಕ್ಕೆ ಬೆದರಿ 54 ಸಾವಿರ ಕೈದಿಗಳ ಬಿಡುಗಡೆ

ನಾ ಕೆಮ್ಮಿದ್ರೆ ಸಾಕು, ನಮ್ಮ ಮ್ಯಾನೇಜರು ರಜೆ‌ ಕೊಡ್ತಾನೆ

ನಾ ಕೆಮ್ಮಿದ್ರೆ ಸಾಕು, ನಮ್ಮ ಮ್ಯಾನೇಜರು ರಜೆ‌ ಕೊಡ್ತಾನೆ

ಮುಂಚೆಯೆಲ್ಲಾ..... ಒಂದು ರಜೆ ಕೇಳಿದ್ರೂ, ನಮ್ಮ ಮ್ಯಾನೇಜರು ಕೆಮ್ತಿದ್ದ

ಈಗ....

ನಾ ಕೆಮ್ಮಿದ್ರೆ ಸಾಕು ... ನಮ್ಮ ಮ್ಯಾನೇಜರೇ ರಜೆ‌ ಕೊಡ್ತಾನೆ!!

ಕೊರೊನಾ ಏನಯ್ಯಾ ನಿಮ್ಮ ಮಹಿಮೆ..

ಕೊರೊನಾ ವೈರಸ್ ಜಾಸ್ತಿ ದಿನ ಇರುವುದಿಲ್ಲ

ಕೊರೊನಾ ವೈರಸ್ ಜಾಸ್ತಿ ದಿನ ಇರುವುದಿಲ್ಲ

ಗುಂಡ: ಈ ಕೊರೊನಾ ವೈರಸ್ ಜಾಸ್ತಿ ದಿನ ಇರುವುದಿಲ್ಲ ಬಿಡು..

ತಿಮ್ಮ: ಅದ್ಯಾವ ಆಧಾರದ ಮೇಲೆ ಹೇಳ್ತೀಯಾ.

ಗುಂಡ: ಅದು ಮೇಡ್ ಇನ್ ಚೈನಾ, ಕಣೋ.. ಅದಕ್ಕೆ...

English summary
Jokes For The Day: Jokes, Memes Spreading On Coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X