ಹೆಂಡತಿ ಊರಿಗೆ ಹೋಗಿದ್ದಾಳೆ, ಎಷ್ಟು ವಿಷಲ್ ಹೊಡೀಬೇಕು?
ಗುಂಡ, ಗ್ಯಾಸ್ ಮೇಲೆ ಕುಕ್ಕರ್ ಇಟ್ಟು, ಸೆಲ್ಫಿ ತೆಗೆದುಕೊಂಡು, ಅದನ್ನು ಫೇಸ್ ಬುಕ್ ನಲ್ಲಿ ಈ ರೀತಿಯ ಒಕ್ಕಣೆ ಬರೆದು ಪೋಸ್ಟ್ ಮಾಡುತ್ತಾನೆ.
ಗುಂಡ: 'ಹೆಂಡತಿ ಊರಿಗೆ ಹೋಗಿದ್ದಾಳೆ. ಚಹಾ ಮಾಡುವುದು ಹೇಗೆ, ಕುಕ್ಕರ್ ಎಷ್ಟು ವಿಷಲ್ ಹೊಡೀಬೇಕು'. ಗುಂಡನ ಈ ಪೋಸ್ಟಿಗೆ ತರಹೇವಾರಿ ಕಾಮೆಂಟುಗಳು ಬರುತ್ತವೆ.
ಹಾಸ್ಯ: 'ಬುಲೆಟ್' ಪ್ರೇಮಿ, 'ಹೋಂಡಾ' ಗಂಡನಾದ ನಮ್ಮ ಗುಂಡ
ವೆಂಕು: ಕುಕ್ಕರ್ ಗೆ ಇರೋದೇ ಒಂದು ವಿಷಲ್. ಇನ್ನೊಂದು ವಿಷಲ್ ಯಾಕೆ ಬೇಕು ನಿನಗೆ?
ರಾಮು: ಎಂಥಾ ಅಯೋಗ್ಯ ಕಣಯ್ಯಾ ನೀನು. ಚಹಾ ಕುಕ್ಕರ್ ನಲ್ಲಿ ಯಾರಾದರೂ ಮಾಡುತ್ತಾರಾ. ಬಾಣಲಿಯಲ್ಲಿ ಕಣೋ ಮಾಡೋದು..
ಚೋಟು : ಎರಡು ಟೀ ಎಲೆಯನ್ನು ನೀರಿನಲ್ಲಿ ಹಾಕು, ಎರಡು ಗಂಟೆಯ ನಂತರ ಅದನ್ನು ತೆಗೆದು, ಹಾಲು, ಬಿಸಿನೀರು ಹಾಕಿ, ಕುಕ್ಕರ್ ನಲ್ಲಿಡು. ಒಂದು ವಿಷಲ್ ಗೆ ಗ್ಯಾಸ್ ಆಫ್ ಮಾಡು..
ಸನ್ನಿ: ಎಷ್ಟು ವಿಷಲಾ..? ನಿನ್ನ ಮನೆ ಕಿಟಕಿ ಬಳಿ ಹೋಗಿ ವಿಷಲ್ ಹೊಡೀ.. ಪಕ್ಕದ ಮನೆಯ ಆಂಟಿ ಚಹಾ ಕೊಟ್ಟಾಳು...
ತಿಮ್ಮ: ಹೆಂಡತಿ ಊರಿಗೆ ಹೋದಾಗ, ಯಾರಾದರೂ ಟೀ ಮಾಡುತ್ತಾರಾ... ಸೋಡಾ, ವಿಸ್ಕಿ ತೆಗೆದುಕೊಂಡು, ವಿಷಲ್ ಹೊಡೀ.. ನಾನು ಬರ್ತೀನಿ... (ವಾಟ್ಸಪ್ ಕೃಪೆ)