ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಕುಬಿಡಿ: ಕುಡಿದು ವಾಹನ ಓಡಿಸಿದ್ದಕ್ಕೆ ಸರ್ಕಾರವೇ ದಂಡ ಕಟ್ಟಲಿ ಅಂದ ಕುಡುಕ

|
Google Oneindia Kannada News

ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣವೊಂದು ನ್ಯಾಯಾಲಯದ ಮುಂದೆ ಬಂತು,

ನ್ಯಾಯಾಧೀಶ: ನೀವು ಕುರಿತು ಚಾಲನೆ ಮಾಡಿದ್ದನ್ನು ಒಪ್ಪಿಕೊಳ್ಳುತ್ತೀರಾ?

ವ್ಯಕ್ತಿ: ಹೌದು, ಒಪ್ಪಿಕೊಳ್ಳುತ್ತೇನೆ.

ನ್ಯಾ: ಹಾಗಾದರೆ 10,000 ರೂ. ದಂಡ ಕಟ್ಟಬೇಕು.

ವ್ಯಕ್ತಿ: ಮೈಲಾರ್ಡ್, ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಬಹುದೇ?

ಜೋಕ್ ಜೋಕಾಲಿ: ಎಲ್ಲಾ ಸರಿಯಿದ್ರೂ ಫೈನ್ ಕಟ್ಟಿಸಿಕೊಂಡ ಪೊಲೀಸಪ್ಪ!ಜೋಕ್ ಜೋಕಾಲಿ: ಎಲ್ಲಾ ಸರಿಯಿದ್ರೂ ಫೈನ್ ಕಟ್ಟಿಸಿಕೊಂಡ ಪೊಲೀಸಪ್ಪ!

ನ್ಯಾ: ಆಯ್ತು, ಮುಂದುವರಿಸಿ.

ವ್ಯಕ್ತಿ: ಮಾನ್ಯರೇ, ಆಲ್ಕೋಹಾಲ್ ಉತ್ಪಾದನೆಗೆ ಪರವಾನಗಿ ಕೊಡುವುವವರು ಯಾರು?

ನ್ಯಾ: ಸರ್ಕಾರ

Jokes For The Day: Government Made All The Things

ವ್ಯಕ್ತಿ: ಆಲ್ಕೋಹಾಲ್ ಮಾರಾಟ ಮಾಡಲು ಅನುಮತಿ ನೀಡುವವರು ಯಾರು?

ನ್ಯಾ: ಸರ್ಕಾರ.

ವ್ಯಕ್ತಿ: ಕುಡಿಯಲು ಅನುಮತಿ ನೀಡುವವರು ಯಾರು?

ನ್ಯಾ: ಸರ್ಕಾರ

'ನಿಖಿಲ್...' ಅಂದ್ರೆ 'ಎಲ್ಲಿದಿಯಪ್ಪಾ?' ಅಂತಂತೆ ವಿಕ್ರಂ ಲ್ಯಾಂಡರ್!

ವ್ಯಕ್ತಿ: ದಂಡ ವಿಧಿಸುತ್ತಿರುವವರು ಯಾರು?

ನ್ಯಾ: ಸರ್ಕಾರ.

ವ್ಯಕ್ತಿ: ಮೈಲಾರ್ಡ್, ಸರ್ಕಾರ ಎಲ್ಲದಕ್ಕೂ ಉತ್ತೇಜನ ನೀಡುತ್ತಿದೆ. ಸರ್ಕಾರವೇ ಇಲ್ಲಿ ದೋಷಿ. ನಾನ್ಯಾಕೆ ದಂಡ ನೀಡಬೇಕು? ವಾಸ್ತವವಾಗಿ ಸರ್ಕಾರವೇ ನನಗೆ ಪರಿಹಾರ ಕೊಡಬೇಕು.

ನ್ಯಾ: ಈ ಕೇಸನ್ನು ವಜಾಗೊಳಿಸಲಾಗಿದೆ...!

***

ಪಕ್ಕದಮನೆಯವನ ಖುಷಿ ತಡೆಯೋಕೆ ಆಗ್ತಿಲ್ಲ...

ನೆರೆಮನೆಯಾತನ ಪತ್ನಿ ಕಾಣೆಯಾಗಿದ್ದಾಳೆ ಎಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ದೂರು ನೀಡಲು ಬಂದ.

'ಅಲ್ಲಯ್ಯಾ, ಕಾಣೆಯಾಗಿರುವುದು ಪಕ್ಕದಮನೆಯವನ ಹೆಂಡತಿ. ನೀನ್ಯಾಕೆ ಕಂಪ್ಲೇಂಟ್ ಕೊಡೋಕೆ ಬಂದಿದ್ದೀಯಾ?' ಎಂದು ಪೊಲೀಸಿನವ ಪ್ರಶ್ನಿಸಿದ.

ಅದಕ್ಕೆ ಆತ ಹೇಳಿದ, 'ಸರ್, ಅವನಿಗೆ ಆಗ್ತಾ ಇರೋ ಸಂತೋಷವನ್ನು ನನಗೆ ತಡ್ಕೊಳ್ಳೋಕೆ ಆಗ್ತಿಲ್ಲ. ಮೂರು ದಿನದಿಂದ ಪಾರ್ಟಿ ಮಾಡ್ತಾ ಇದ್ದಾನೆ'.

English summary
Jokes for the day: A drink and drive case was hearing in a court. Man who was facing allegation put some questions to the judge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X