• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮ್ಯಾನೇಜರ್ -ವೇಟರ್ -ಡೇಂಜರ್ ಜೋಕ್

By Mahesh
|

ಒಮ್ಮೆ ಬ್ಯಾಂಕ್ ಮ್ಯಾನೇಜರ್ ಒಬ್ಬ ತನ್ನ ಕುಟುಂಬದೊಂದಿಗೆ ಊಟಕ್ಕಾಗಿ ಹೋಟೆಲ್ ವೊಂದಕ್ಕೆ ತೆರಳಿದ...

ಮ್ಯಾನೇಜರ್ - ತಿನ್ನಲು ಏನೇನಿದೆ?

ವೇಟರ್ - ಪಾಲಕ್ ಪನೀರ್, ತಂದೂರಿ, ಬಿರಿಯಾನಿ, ಚಿಕನ್..

ಮ್ಯಾನೇಜರ್ - ಪಾಲಕ್ ಪನೀರ್ ಮತ್ತು ತಂದೂರಿ ರೊಟ್ಟಿ ಕೊಡು..

ಮತ್ತೇನಿದೆ?

ವೇಟರ್ - ದಾಲ್ ಫ್ರೈ, ದಾಲ್ ತಡ್ಕಾ..

ಮ್ಯಾನೇಜರ್ - 1 ದಾಲ್ ಫ್ರೈ ಕೊಡು

ವೇಟರ್ - ಗೋಬಿ 65 ಕೊಡ್ಲಾ ಅಥವಾ ಗೋಬಿ ಮಂಚೂರಿ?

ಮ್ಯಾನೇಜರ್ - ಮಂಚೂರಿ

ವೇಟರ್ - (ಮೃದುವಾಗಿ) - ಸರ್.. ಮಿನಿರಲ್ ವಾಟರ್ ಕೊಡ್ಲಾ

ಮ್ಯಾನೇಜರ್ - ಹುಂ.. ಕೊಡು

ವೇಟರ್ - ಸರ್ ನಿಮ್ಮ ಆರ್ಡರ್ ಹೀಗಿದೆ.. ಪಾಲಕ್ ಪನೀರ್, ತಂದೂರಿ, ದಾಲ್ ಫ್ರೈ ಮತ್ತು ಗೋಬಿ ಮಂಚೂರಿ

ಮ್ಯಾನೇಜರ್ - ಆಯ್ತು, ಬೇಗ ತಗೊಂಡು ಬಾ..

ವೇಟರ್ - ಆದ್ರೆ ಎಲ್ಲಾ ಖಾಲಿಯಾಗಿದೆ!

ಸದ್ಯಕ್ಕೆ ಏನೂ ಇಲ್ಲ..

ಮ್ಯಾನೇಜರ್ (ಮೃದುವಾಗಿ) - ಸ್ವಾಮಿ.. ಎಲ್ಲಾ ಮುಗಿದಿದ್ರೆ ಮತ್ತ್ಯಾಕೆ ಇನ್ನೇನ್ ಬೇಕು ಇನ್ನೇನ್ ಬೇಕು ಅಂತಾ ಕೇಳ್ತಿದ್ರಿ?

ಮೊದ್ಲೇ ಹೇಳ್ಬಹುದಿತ್ತಲ್ವಾ

ವೇಟರ್ - ಸರ್, ನಾನ್ ದಿನಾಲು ATM ಗೆ ಹೋಗ್ತೀನಿ, ATM ನನಗೆ PIN ಕೋಡ್, saving/current account, amount, receipt ಎಲ್ಲಾ ಕೇಳುತ್ತೆ..

ಆಮೇಲೆ ಕೊನೆಯಲ್ಲಿ - "No Cash"

ಈಗ ಅರ್ಥ ಆಯ್ತಾ ಅವಾಗ ನನಗೆ ಹೆಂಗೆ ಅನಿಸುತ್ತೆ ಅಂತ!

ಬ್ಯಾಂಕ್ ಮ್ಯಾನೇಜರ್ ಮೂರ್ಛೆ ಹೋದ

***

ಸ್ಮಶಾನದ ಒಳಗಿನ ಹೆಣ ನೋಡ್ಕೊಂಡ ಇಬ್ಬರು ಮಾತಾಡಾತಿದ್ರು.

"ಎಷ್ಟ ಆರಾಮ ಮಕ್ಕೊಂಡಾವ ನೋಡಲೆ ಹೆಣಾ...

"

ಅಷ್ಟರೊಳಗ ಒಂದು ಹೆಣ ಎದ್ದು ಹೇಳ್ತು:

"ಯಾಕ ಮಲಗಬಾರದಪಾ? ಜೀವಾ ಕೊಟ್ಟ ಜಾಗಾ ತಗೋಂಡೀವಿ."

****

ನಮ್ಮ ಮಕ್ಕಳ ಪ್ರಶ್ನೆ:

Infosys CEO'ಗೆ

ವರುಷಕ್ಕೆ 16.25 ಕೋಟಿ ಸಂಬಳ

Virat Kohli'ಗೆ

2 ತಿಂಗಳಿಗೆ 17 ಕೋಟಿ ಸಂಬಳ;

ಆಡಕ್ಕೆ ಹೋಗ್ಲಾ ಅಥವಾ ಓದಕ್ಕೆ ಹೋಗ್ಲಾ

***

ಬಸ್ಯಾ: ಅಣ್ಣಾ ಹೊಸಾ ವರ್ಷದ ಕ್ಯಾಲೆಂಡರ್ ಕೋಡ್

ಅಂಗಡಿಯವ: ಯಾವಾದ ಕೊಡಲಿ

ಬಸ್ಯಾ: ಸುಟಿ ಬಾಳ್ ಇರೋದ್ ಕೋಡ್

Keep smile

English summary
Jokes for the day: Here is bank manager and hotel supplier conversion latest jokes and popular jokes shared on whats app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X