ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೇ..ನ್ಯೂಸ್ ಚಾನೆಲ್ ರಿಪೋರ್ಟರ್ ನ ಮಾತ್ರ ಮದುವೆ ಆಗ್ಬಾರ್ದು.!

By Harshitha
|
Google Oneindia Kannada News

ನ್ಯೂಸ್ ಚಾನೆಲ್ ರಿಪೋರ್ಟರ್ ಒಬ್ಬಳ ಗಂಡ ಅವತ್ತು ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದ...ಅರೇ.! ಮನೆ ಬೀಗ ಹಾಕಿದೆ.! ಹೆಂಡತಿಗೆ ಫೋನ್ ಮಾಡ್ದ....

ಗಂಡ - "ಲೇ ಎಲ್ಲಿದೀಯೆ?"

ಹೆಂಡತಿ - "ಹಲೋ ಹಲೋ ರೀ... ನನ್ನ ದನಿ ನಿಮಗೆ ಕೇಳಿಸ್ತಿದೆಯಾ...ಹಲೋ ಹಲೋ"

ಗಂಡ - "ಅಯ್ಯೋ ಕೇಳ್ತಿದೆ ಮಾರಾಯ್ತಿ, ಯಾರು ಕೇಳಲ್ಲ ಅಂದಿದ್ದು, ಎಲ್ಲಿದ್ದೀ ಈಗ ಹೇಳು"

ಹೆಂಡತಿ - "ಹಲೋ ರೀ...ಇವತ್ತಿನ ದಿವಸ ನಾನು ಸುಮಾರು ಐದು ಗಂಟೆ ಸುಮಾರಿಗೆ ಮನೆಯಿಂದ ಹೊರಟಿರ್ತಕ್ಕಂಥದ್ದು, ಪಕ್ಕದ ಮನೆ ಪಂಕಜಾಕ್ಷಿ ಜೊತೆ ಹೊರಟಿರ್ತಕ್ಕಂಥದ್ದು...ಐದು ಗಂಟೆಗೆ ಹೊರಟು ಬೀದಿಯ ಕೊನೆಯಲ್ಲಿ ಆಟೋ ಏನಿದೆ ಅದನ್ನು ಹತ್ತಿರ್ತಕ್ಕಂಥದ್ದು, ಅಲ್ಲಿಂದ ನೇರವಾಗಿ ಗಾಂಧಿ ಮೈದಾನ ಏನಿದೆ ಅಲ್ಲಿ ನಡೆದಿರುವಂತಹ ಸೀರೆಗಳ ವಿಶೇಷ ಸೇಲ್ ಏನಿದೆ ಅಲ್ಲಿಗೆ ಟ್ರಾಫಿಕ್ಕಿನ ಹಿನ್ನಲೆಯಲ್ಲಿ ಸ್ವಲ್ಪ ತಡವಾಗಿ ಅಂದ್ರೆ ಸುಮಾರು ಐದು ಮೂವತ್ತರ ಸುಮಾರಿಗೆ ಬಂದಿರ್ತಕ್ಕಂಥದ್ದು..."

ಗಂಡ - "ಅಯ್ಯೋ ಅದನ್ನೆಲ್ಲಾ ಯಾರೇ ಕೇಳಿದ್ದು ಈಗ? ಸಾಯಲಿ..ಮನೆ ಕೀ ಎಲ್ಲಿದೆ ಅದನ್ನಾದ್ರೂ ಹೇಳು!"

ಹೆಂಡತಿ - "ಓಕೆ ಓಕೆ.... ನಾ ಹೊರಡುವ ಮುನ್ನ ಈ ಕೀ ಏನಿದೆ ಅದರಿಂದ ಮನೆಯನ್ನು ಸಂಪೂರ್ಣವಾಗಿ ಲಾಕ್ ಮಾಡಿರ್ತಕ್ಕಂಥದ್ದು, ನೀವು ದೃಶ್ಯಗಳಲ್ಲಿ ನೋಡಬಹುದು ಮನೆಯ ಬಾಗಿಲು ಸಂಪೂರ್ಣವಾಗಿ ಲಾಕ್ ಆಗಿರ್ತಕ್ಕಂಥದ್ದು...'ಕೀ'ಯನ್ನು ಉಪಯೋಗಿಸಿ ಈ ಲಾಕ್ ಏನಿದೆ ಅದನ್ನು ಹಾಕಿರ್ತಕ್ಕಂಥದ್ದು..."

ಗಂಡ - "ಗೊತ್ತಾಯ್ತು ಮಾರಾಯ್ತಿ, ಅದೇ ಕೀ ಎಲ್ಲಿಟ್ಟಿದ್ದೀ ಹೇಳು?"

ಹೆಂಡತಿ - "ಎಸ್... ಎಲ್ಲೋ ಒಂದ್ಕಡೆ ಇವತ್ತಿನ ದಿವಸ ನೀವು ಬೇಗ ಮನೆಗೆ ಬರಬಹುದು ಅಂತಕ್ಕಂಥ ನಿರೀಕ್ಷೆ ಏನಿತ್ತು ಆ ಹಿನ್ನಲೆಯಲ್ಲಿ ಕೀಯನ್ನು ಎಲ್ಲೋ ಒಂದ್ಕಡೆ ಇಟ್ಟು ನಿಮಗೆ ಸುಲಭವಾಗಿ ಸಿಗುವಂತೆ ಎಲ್ಲೋ ಒಂದ್ಕಡೆ ಅದನ್ನು ಇಟ್ಟಿರ್ತಕ್ಕಂಥದ್ದು..."

ಗಂಡ - "ಅಯ್ಯೋ ಪುಣ್ಯಾತಗಿತ್ತಿ, ಅದೇ ಎಲ್ಲೋ ಒಂದ್ಕಡೆ ಅಂದ್ರೆ ಎಲ್ಲೇ ಮಾರಾಯ್ತಿ?"

ಹೆಂಡತಿ - "ಎಸ್.. ಮನೆ ಮುಂದೆ ಎಡಭಾಗದಲ್ಲಿ ಅಂದ್ರೆ ನೀವು ಗೇಟನ್ನು ದಾಟಿದ ಕೂಡಲೇ ಎಡಭಾಗದಲ್ಲಿ ಅಂದ್ರೆ ಲೆಫ್ಟ್ ಸೈಡ್ ಏನಿದೆ... ಆ ಲೆಫ್ಟ್ ಸೈಡಿಗೆ ತಿರುಗಿದ್ರೆ ಅಲ್ಲಿ ಒಂದು ಪಾಟ್ ಏನಿದೆ... ಮಣ್ಣಿನಿಂದ ಮಾಡಿರ್ತಕ್ಕಂಥ ಪಾಟ್ ಏನಿದೆ....ಹಲೋ ಹಲೋ ನನ್ನ ದನಿ ನಿಮಗೆ ಕೇಳಿಸ್ತಾ ಇದೆಯಾ..."

ಅಷ್ಟರಲ್ಲಿ ಕಾಲ್ ಕಟ್ಟಾಯ್ತು, ಪಾಟ್ ಬಳಿಯಿದ್ದ ಕೀ ತಗೊಂಡು ಮನೆಯ ಒಳಹೋದ ಗಂಡ - 'ಮುಂದಿನ ಜನ್ಮದಲ್ಲಿ ಮದುವೆಯಾಗದಿದ್ದರೂ ಓಕೆ, ನ್ಯೂಸ್ ಚಾನೆಲ್ ರಿಪೋರ್ಟರ್ ನ ಮಾತ್ರ ಹೆಂಡತಿಯಾಗಿ ಕೊಡಬೇಡಪ್ಪ' ಅಂತ ದೇವರಲ್ಲಿ ಬೇಡುತ್ತಿದ್ದ..!!!!!

English summary
Joke of the Day: If at all you marry a News Channel Reporter, This is what happens..!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X