• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Jokes: ತಂದೆ ಅವರ ಮಗನನ್ನು ಭೇಟಿಯಾಗಲು ಹೋದಾಗ, ಅವಳಿದ್ದಳು

|

ಅಲ್ಲಿ ಅವರ ಮಗನ ಜೊತೆ ಒಂದು ಸುಂದರವಾದ ಹುಡುಗಿ ಕೂಡ ಇದ್ದಳು. ಮೂವರು ಊಟಕ್ಕೆ ಕುಳಿತಾಗ.

ತಂದೆ : ಮಗ ನಿನ್ನ ಜೊತೆ ಇರೋ ಈ ಹುಡುಗಿ ಯಾರು ?

ಮಗ : ಅಪ್ಪ ಇವಳು ನನ್ನ ರೂಮ್ ಪಾರ್ಟ್ನರ್, ನನ್ನ ಜೊತೆನೇ ಇರ್ತಾಳೆ, ನಂಗೊತ್ತು ನೀವು ಏನು ಯೋಚನೆ ಮಾಡ್ತಿದ್ದೀರಾ ಅಂತ ಗೊತ್ತು. ಆದರೆ, ಆ ಥರ ನಮ್ಮ ಮಧ್ಯ ಏನು ಇಲ್ಲ ನಾವು ಬೇರೆ ಬೇರೆ ಕೋಣೆಯಲ್ಲಿ ಮಲಗುತ್ತೀವಿ. ನಾವಿಬ್ಬರು ಒಳ್ಳೆ ಗೆಳೆಯರು.

ಅಪ್ಪ : ಆಯ್ತು ಮಗನೆ ಚೆನ್ನಾಗಿರಿ ಅಂತ ಹೇಳಿ ಮರಳಿ ಅವರ ಊರಿಗೆ ಹೋಗುತ್ತಾರೆ.

ಒಂದು ವಾರದ ನಂತರ.

ಹುಡುಗಿ : ನೋಡು, ಹೋದ ವಾರ ನಿಮ್ಮಪ್ಪ ಬಂದಿದ್ದ ಅವರು ಹೋಗುವಾಗ ಆವತ್ತು ಅವರು ಊಟ ಮಾಡಿದ ತಟ್ಟೆ ಕಾಣುತ್ತಿಲ್ಲ, ನನಗನಿಸುತ್ತಿದೆ ಅವರೇ ಕಳ್ಳತನ ಮಾಡಿಕೊಂಡು ಹೋಗಿರಬೇಕು.

ಹುಡುಗ : ನೀ ಏನು ಮಾತನಾಡ್ತಿದೀಯ ಗೊತ್ತಾ ? ನಮ್ಮಪ್ಪ ಅಂತ ಕೆಲಸ ಮಾಡಲ್ಲ.

ಹುಡುಗಿ : ಇರಬಹುದು ಒಂದು ಸಲ ನಿಮ್ಮಪ್ಪನಿಗೆ ಕೇಳಿ ನೋಡು ಗೊತ್ತಾಗುತ್ತೆ.

ಹುಡುಗ : ಸರಿ ನೋಡೋಣ ನಾನು ಅವರಿಗೆ ಪತ್ರ ಬರೆಯುತ್ತೇನೆ..

ಪೂಜ್ಯ ತಂದೆಯವರಿಗೆ ಅಪ್ಪಾ ನಾನು ನಿಮಗೆ ಈ ತರ ಹೇಳ್ತೀನಿ ಅಂತ ಬೇಜಾರಾಗಬೇಡಿ ನಮ್ಮ ರೂಮಿನಲ್ಲಿ ಒಂದು ತಟ್ಟೆ ಕಳ್ಳತನ ಆಗಿದೆ ನೀವು ಹೋಗುವಾಗ ಗೊತ್ತಿಲ್ಲದೆ ತಗೊಂಡು ಹೋಗಿದ್ರೆ ವಾಪಸ್ ಕಳಿಸಿಕೊಡಿ ಯಾಕಂದ್ರೆ ಆ ಪ್ಲೇಟ್ ಆ ಹುಡುಗಿಯದು

ಇಂತಿ ನಿಮ್ಮ ಮಗ.

ಆ ಪತ್ರ ಓದಿದ ತಂದೆ ಮಗನಿಗೆ ಪತ್ರ ಬರೆಯುತ್ತಾನೆ

ಪ್ರೀತಿಯ ಮಗನಿಗೆ

ಮಗನೇ ನಾನು ಈ ತರ ಹೇಳ್ತೀನಿ ಅಂತ ಬೇಜಾರಾಗಬೇಡ

ನಿನ್ನ ರೂಮಿನಲ್ಲಿ ನಿನ್ನ ರೂಮ್ ಪಾರ್ಟ್ನರ್ ನಿನ್ನ ಜೊತೆನೆ ಮಲಗುತ್ತಾಳೆ ಎಂದು ನಾನು ಹೇಳಿಲ್ಲ, ಆದರೆ ಒಂದು ವಾರದಿಂದ ಆ ಹುಡುಗಿ ಅವಳ ಕೋಣೆಯಲ್ಲಿ ಅವಳ ಹಾಸಿಗೆಯಲ್ಲಿ ಮಲಗಿದ್ರೆ ಗೊತ್ತಾಗುತ್ತಿತ್ತು ನಾನು ಮುಚ್ಚಿ ಇಟ್ಟಿದ ಅವಳ ತಟ್ಟೆ ಅವಳ ತಲೆದಿಂಬಿನ ಕೆಳಗಡೆನೆ ಇದೆ ಅಂತ.

ಇಂತಿ ನಿನ್ನ ಪೂಜ್ಯ ತಂದೆ

😂😂😂😂

English summary
Joke of the day: Father and Son conversation on Son's roomate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X