• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವ, ಶಿವಾ... ಹೊಳೆಗೆ ಹಾರ್ತೇನೆ ಎಂದ ಗಂಡನಿಗೆ ಹೆಂಡ್ತಿ ಹಿಂಗಾ ಹೇಳೋದು!

|

ಗಂಡ ಮನೆಗೆ ಆಫೀಸ್ ನಿಂದ ಮನೆಗೆ ಬರುತ್ತಿದ್ದಾನೆಂದರೆ ಹೆಂಡತಿಗೆ ಮನೆಯಲ್ಲಿ ಏನೆಲ್ಲ ಖಾಲಿಯಾಗಿದೆ ಎಂಬ ಪಟ್ಟಿ ಬೇಡವೆಂದರೂ ನೆನಪಾಗುತ್ತದೆ. ಮೊದಲೇ ಸುಸ್ತಾಗಿದ್ದ ಗಂಡನಿಗೆ ಹೆಂಡತಿಯ ಫೋನ್ ಬಂದರೆ ಸಾಕು, ಏನೋ ತರುವುದಕ್ಕೆ ಬೇಡಿಕೆ ಇಡುತ್ತಾಳೆ ಎಂಬುದು ಅರ್ಥವಾಗಿ ಕಿರಿಕಿರಿ ಆರಂಭವಾಗಿರುತ್ತದೆ. ಹಾಗೆಯೇ ಕಿರಿಕಿರಿಯಿಂಡ ಗಂಡ ಹೇಳಿದ ಮಾತಿಗೆ, ಹೆಂದತಿ ನೀಡಿದ ಉತ್ತರ ಏನು ಗೊತ್ತಾ?

ಮಳೆ ಬರ್ತಿದೆ ಅಂತ ಹೇಳೊ ಅಧಿಕಾರ ಕೂಡ ಗಂಡನಿಗೆ ಇಲ್ವಾ?

ಇಲ್ಲಿವೆ ನೋಡಿ ಕಚಗುಳಿ ನೀಡುವ ಗಂಡ ಹೆಂಡತಿ ಜೋಕ್ಸ್...

ಗಂಡ: ನೀನು ಪದೇ ಪದೇ ಅದು ತನ್ನಿ, ಇದು ತನ್ನಿ ಅಂತ ಪೀಡಿಸಿ, ಕಿರಿಕಿರಿ ಮಾಡಿದ್ರೆ ನಾನು ಹೊಳೆಗೆ ಹಾರ್ತೇನೆ

ಹೆಂಡತಿ: ಮೇಲೆ ಬರುವಾಗ ಮೀನು ತನ್ನಿ!

***

ಅವಳು ಗಂಡ ಕಾಣೆಯಾದ ಬಗ್ಗೆ ಠಾಣೆಯಲ್ಲಿ ಕಂಪ್ಲೆಂಟ್

ಕೊಡಲು ಗೆಳತಿಯೊಂದಿಗೆ ಹೋದಳು.

ಠಾಣಾಧಿಕಾರಿ ಗಂಡನ ಹೆಸರು ಗುರುತು ಕೇಳತೊಡಗಿದ.

ಹೆಸರು ಹೇಳಿದ ಗೆಳತಿ, "ಸ್ಲಿಮ್, ಬಿಳಿ, ಹೈಟ್ ಇದ್ದಾರೆ. ತಲೆ ತುಂಬಾ ಕೂದಲು ಇದೆ" ಎಂದು ಹೇಳಿದಳು.

ಠಾಣೆಯಿಂದ ಹೊರಬಂದಾಗ ಗೆಳತಿ :- "ನಿನ್ನ ಗಂಡ ಕಪ್ಪು ಡೊಳ್ಳು ಹೊಟ್ಟೆ ಕುಳ್ಳ ಬೋಲುಮಂಡೆಯಲ್ವಾ ?"

ಪತ್ನಿ:- "ಹೋದದ್ದು ಹೋಯಿತು. ಟೆನ್ಷನ್ ಮಾಡಿ ಏನು ಪ್ರಯೋಜನ ? ಸಿಗುವುದಾದರೂ ಚಂದದ್ದು ಸಿಗಲಿ ಎಂದು ಸುಳ್ಳು ಹೇಳಿದೆ"

ಗುಂಡ ಕಾಂಡೊಮ್ ಖರೀದಿಸಲು ಅಂಗಡಿ ಹೋದಾಗ..

***

ಹೆಂಡತಿ: ನಾನು ಏನ್ ಕೇಳಿದ್ರೂ ತಂದು ಕೊಡ್ತೀರಾ?

ಗಂಡ: ಏನ್ ಬೇಕು ಕೇಳು ಚಿನ್ನಾ

ಹೆಂಡತಿ: ಆ ಚಂದ್ರನ್ನ ತಂದುಕೊಡಿ ಪ್ಲೀಸ್

ಗಂಡ: ಮತ್ತೆ ಈ ಭೂಮಿ ಸುತ್ತಾ ಏನ್ ನಿಮ್ ಅಪ್ಪಾ ಸುತ್ತತಾನ?!

English summary
What wife told to husband when he threatens her that he will jump into river? Husband and wife jokes in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X