ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕಪ್ ಅಂದರೆ ಪೊಲೀಸ್ ಕಸ್ಟಡಿ, ಲಾಕ್‌ಡೌನ್ ಅಂದರೆ ಹೆಂಡತಿ ಕಸ್ಟಡಿ

|
Google Oneindia Kannada News

ಕೊರೊನಾ ವೈರಸ್ ಸಂಬಂಧ ಸಾಮಾಜಿಕ ತಾಣದಲ್ಲಿ ಹೆದರಿಕೆ ಹುಟ್ಟಿಸುವ ಸುದ್ದಿಗಳು ಹೇಗೆ ಹರಿದಾಡುತ್ತಿವೆಯೋ, ಅದೇ ರೀತಿ ಜೋಕ್ಸ್, ಮೀಮ್ಸ್ ಗಳು ಕೂಡಾ ಬಂದು ಬೀಳುತ್ತಿವೆ. ವಾಟ್ಸಾಪ್ ನಲ್ಲಿ ಬಂದ ಜೋಕ್ಸ್ ಒಂದು ಹೀಗಿದೆ:

ಕಡೆಗೂ ಅರ್ಥ ಆಯ್ತು. ಲಾಕಪ್ ಅಂದರೆ ಪೊಲೀಸ್ ಕಸ್ಟಡಿ. ಲಾಕ್‌ಡೌನ್ ಅಂದರೆ ಹೆಂಡತಿ ಕಸ್ಟಡಿ ಅಂತ.

 ಜೋಕು-ಜೋಕಾಲಿ: ಗುಂಡ-ಟೀಚರ್ ಪ್ರಶ್ನೋತ್ತರ ಓದಿ ನಕ್ಕುಬಿಡಿ ಜೋಕು-ಜೋಕಾಲಿ: ಗುಂಡ-ಟೀಚರ್ ಪ್ರಶ್ನೋತ್ತರ ಓದಿ ನಕ್ಕುಬಿಡಿ

ಏಪ್ರಿಲ್ (april) ಇದರ ಫುಲ್ ಫಾರಂ ಏನು - ಆಲ್ ಪೀಪಲ್ ರೆಸ್ಟೆಡ್ ಇನ್ ಲಾಕ್‌ಡೌನ್.

ಚೀನಾದವರು ಟಚ್ ಮೊಬೈಲ್, ಕಾರ್, ವಾಚ್, ಇನ್ನು ಬೇರೇನೆಲ್ಲಾ ವಸ್ತು ಕಂಡು ಹಿಡಿದರು. ಜೊತೆಗೆ, ಟಚ್ ಮಾಡಿದರೆ ಬರೋ ರೋಗಾನೂ ಕಂಡು ಹಿಡಿದು ಬಿಟ್ಟರು.

Jokes For The Day On Corona, What Is Police Custody, What Is Lockdown

ಪ್ರಪಂಚ ಎಷ್ಟು ಬದಲಾಗಿದೆ ಅಲ್ವಾ!! ಮೊದಲೆಲ್ಲಾ ನೆಗೆಟೀವ್ ಯೋಚಿಸುವ ಜನರಿಂದ ದೂರ ಇರಿ ಅಂತಿದ್ದರು, ಈಗ ಪಾಸಿಟೀವ್ ಜನರಿಂದ ದೂರ ಇರಿ ಅಂತಿದ್ದಾರೆ.

ಕೊರೊನಾ ವೈರಸ್ ಗೆ ನಮ್ಮ ದೇಶ ಬಿಟ್ಟು ಹೋಗು ಅಂತಾ ಗಂಟು ಬಿದ್ದಿದ್ದೀವೆ. ಅದು ಹೇಗೆ ಹೋಗಬೇಕು ಪಾಪಾ.. ಬಸ್ಸು, ರೈಲು, ವಿಮಾನ ಎಲ್ಲಾ ಬಂದ್ ಆಗಿದ್ದಾವೆ.

ಹಾಸ್ಯ: ಗುಂಡನ ಪಂಚಿಂಗ್ ಉತ್ತರ ಕೇಳಿ ತಬ್ಬಿಬ್ಬಾದ ಟೀಚರ್ ಹಾಸ್ಯ: ಗುಂಡನ ಪಂಚಿಂಗ್ ಉತ್ತರ ಕೇಳಿ ತಬ್ಬಿಬ್ಬಾದ ಟೀಚರ್

ಈ ಕೊರೊನಾ ಹುಟ್ಟಿದ್ದು ಚೀನಾದಲ್ಲಿ, ಬೆಳೆದದ್ದು ಇಟಲಿಯಲ್ಲಿ, ಡಿಗ್ರಿ ಮಾಡಿದ್ದು ಸ್ಪೇನಲ್ಲಿ, ಕೆಲಸಕ್ಕೆ ಸೇರಿದ್ದು ಅಮೆರಿಕಾದಲ್ಲಿ, ರಿಟೈರ್ ಆಗುತ್ತಾ ಇರೋದು ಮಾತ್ರ ನಮ್ಮ ಭಾರತದಲ್ಲಿ.

ಕೊನೆಗೂ ಸನಾತನ ಧರ್ಮಕ್ಕೆ ಹೊಂದಿಕೊಳ್ಳುವ ಪದ ಸಿಕ್ಕಿತು. ಕ್ವಾರಂಟೈನ್ ಅಂದರೆ ಮೈಲಿಗೆ. ಸೋಶಿಯಲ್ ಡಿಸ್ಟೆನ್ಸ್ ಅಂದರೆ ಮಡಿ. ಸಾನಿಟೈಸರ್ ಅಂದರೆ ಮಂತ್ರ ಸ್ನಾನ. ಲಾಕ್‌ಡೌನ್ ಅಂದರೆ ಚಾತುರ್ಮಾಸ್ಯ ವ್ರತ.

English summary
Jokes For The Day On Corona, What Is Police Custody, What Is Lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X