ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಿಗೆ ಬದುಕುಳಿಯುವ ಖಾತ್ರಿ ನೀಡಿದ ಡಾ.ಸುಬ್ಬು

By Prasad
|
Google Oneindia Kannada News

ವ್ಯಕ್ತಿಯೊಬ್ಬ ವಿಚಿತ್ರ ರೋಗದಿಂದ ಬಳಲುತ್ತಿದ್ದ. ನೂರೆಂಟು ವೈದ್ಯರ ಬಳಿ ತೋರಿಸಿದರೂ ರೋಗ ವಾಸಿಯಾಗಿರಲಿಲ್ಲ. ಕಡೆಗೆ ಹಿತೈಶಿಯೊಬ್ಬ ಆಲಿಂಡಿಯಾವರ್ಲ್ಡ್‌ಫೇಮಸ್ ಡಾಕ್ಟರ್ ಸುಬ್ಬು ಹತ್ತಿರ ರೋಗಿಯನ್ನು ಕಳಿಸಿದರು. ಜೀವದ ಮೇಲೆ ಅಪಾರ ಪ್ರೀತಿ ಹೊಂದಿದ್ದ ರೋಗಿ, ನೀನೇ ದಿಕ್ಕೆಂದು ಡಾ.ಸುಬ್ಬು ಬಳಿ ಬಂದ.

ಡಾ. ಸುಬ್ಬು ರೋಗಿಯನ್ನು ಕೂಲಂಕಷವಾಗಿ ಪರೀಕ್ಷಿಸುತ್ತಾನೆ. ರೋಗಿಗೆ ಪರೀಕ್ಷೆ ಫಲಿತಾಂಶ ತಿಳಿಯಬೇಕೆಂಬ ಕುತೂಹಲ. ಸುಬ್ಬು ಮುಖದಲ್ಲಿ ಮುಗುಳ್ನಗೆ ನೋಡಿ ರೋಗಿ ಕೇಳುತ್ತಾನೆ.

ರೋಗಿ : ವೈದ್ಯರೆ, ನನ್ನ ರೋಗ ಗುಣವಾಗುತ್ತದಾ?

ಡಾ. ಸುಬ್ಬು : ನಿನಗೆ ವಿಚಿತ್ರ ರೋಗವಿದೆ. ಆದರೂ, ನೀನು ಖಂಡಿತ ಬದುಕುಳಿಯುತ್ತಿಯಾ.

ರೋಗಿ : ವಿಚಿತ್ರವಾದ ರೋಗ ಅಂತೀರಾ. ಆದ್ರೆ, ಅದ್ಯಾವ ಖಾತ್ರಿಯಿಂದ ಬದುಕುಳಿಯುತ್ತೀ ಎಂದು ಹೇಳ್ತೀರಿ?

ಡಾ. ಸುಬ್ಬು : ನಿನಗಿರುವ ರೋಗದ ಲಕ್ಷಣ ಹೇಗಿದೆಯೆಂದರೆ, ಹತ್ತರಲ್ಲಿ ಒಂಬತ್ತು ರೋಗಿಗಳು ಈ ರೋಗದಿಂದ ಅಸುನೀಗುತ್ತಾರೆ.

ರೋಗಿ : (ಗಡಗಡ ನಡುಗುತ್ತ) ಹಾಗಂದ್ರೆ?

ಡಾ. ಸುಬ್ಬು : ಹೆದರಬೇಡ. ನೀನು ಖಂಡಿತ ಬದುಕುತ್ತೀಯಾ ಅಂತ ಹೇಳಿದ್ದು ಯಾಕಂದ್ರೆ, ಈ ರೋಗದ ಚಿಕಿತ್ಸೆಗೆಂದು ನನ್ನ ಬಳಿ ಬಂದ ಒಂಬತ್ತು ರೋಗಿಗಳು ಈಗಾಗಲೆ ಶಿವನ ಪಾದ ಸೇರಿದ್ದಾರೆ! [ಡಾಕ್ಟರ್ ಜೋಕ್ಸ್]

English summary
Hilarious Kannada jokes. A patient goes to Dr. Subbu as last resort for the treatment of the peculiar disease. Dr. Subbu gives 100% assurance about his survival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X