ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಬ್ಬಿಯ ತರ್ಕಬದ್ಧ ಪ್ರಶ್ನೆಗೆ ತಬ್ಬಿಬ್ಬಾದ ಪ್ರೊಫೆಸರ್ ಸುಬ್ಬು!

By Prasad
|
Google Oneindia Kannada News

ತರ್ಕಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣನಾಗಿದ್ದ ವಿದ್ಯಾರ್ಥಿ ಡಿಬ್ಬಿ, ಆ ವಿಷಯದ ಪ್ರೊಫೆಸರ್ ಸುಬ್ಬುವಿನ ಬಳಿ ಹೋದ. ತರ್ಕಶಾಸ್ತ್ರದಲ್ಲಿ ಡುಮ್ಕಿ ಹೊಡೆದಿದ್ದ ಡಿಬ್ಬಿ ಕಾರಣವೇನೆಂದು ಕೇಳಲು 'ತಗಡು ತಲೆ ಸುಬ್ಬು' ಎಂದೇ ಕುಖ್ಯಾತಿ ಗಳಿಸಿದ್ದ ಸುಬ್ಬಾಶಾಸ್ತ್ರಿಗಳ ಬಳಿ ಬಂದ.

ಡಿಬ್ಬಿ : ಸರ್, ಈ ತರ್ಕಶಾಸ್ತ್ರದ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿದಿದೆಯೆ?

ಸೂಪರ್ ಹ್ಯಾಂಡ್ಸಮ್ ಕಿಲಾಡಿ ಡಿಬ್ಬಿಯ ಈ ಕೀಟಲೆಯ ಪ್ರಶ್ನೆ ಕೇಳಿ ಸುಬ್ಬು ತಬ್ಬಿಬ್ಬು! ಆದರೂ ಸಾವರಿಸಿಕೊಂಡು...

ಸುಬ್ಬು : (ಸಮಾಧಾನದಿಂದ) ಹೌದು ತಿಳಿದಿದೆ. ಆ ಕಾರಣಕ್ಕಾಗಿಯೇ ಅಲ್ಲವೇ ನಾನು ಈ ವಿಷಯದಲ್ಲಿ ಪ್ರೊಫೆಸರಾಗಿದ್ದು?

ಡಿಬ್ಬಿ : ಓಕೆ ಸರ್, ಹಾಗಿದ್ರೆ ನಾನು ನಿಮಗೊಂದು ಪ್ರಶ್ನೆ ಕೇಳುತ್ತೇನೆ. ನೀವು ನನಗೆ ಸರಿಯಾದ ಉತ್ತರ ನೀಡಿದರೆ, ನೀವು ನನ್ನನ್ನು ಫೇಲ್ ಮಾಡಿದ್ದೇ ಸರಿ ಅಂತ ತೆಪ್ಪಗೆ ವಾಪಸ್ ಹೋಗುತ್ತೇನೆ. ಆದರೆ, ತಾವು ಅದಕ್ಕೆ ತೃಪ್ತಿಕರವಾದ ಉತ್ತರ ನೀಡದಿದ್ದರೆ ನನ್ನನ್ನು ಪಾಸ್ ಮಾಡಲೇಬೇಕು. [ಓಹೋಹೋ ಗೊತ್ತಾಯ್ತು ಗೊತ್ತಾಯ್ತು ಬಿಡಿ!]

ಸುಬ್ಬು : (ಕಂಠಕೌಪೀನವನ್ನು ಸರಿ ಮಾಡಿಕೊಳ್ಳುತ್ತ) ಡನ್! ನಿನ್ನ ಡೀಲ್ ನನಗೆ ಒಪ್ಪಿಗೆ. ಸರಿ, ಪ್ರಶ್ನೆ ಏನೆಂದು ಕೇಳು?

ಡಿಬ್ಬಿ : ಯಾವುದು ಕಾನೂನುಬದ್ಧ, ಆದರೆ ತರ್ಕಬದ್ಧವಲ್ಲ. ಯಾವುದು ತರ್ಕಬದ್ಧ, ಆದರೆ ಕಾನೂನುಬದ್ಧವಲ್ಲ. ಕೊನೆಯದಾಗಿ, ಯಾವುದು ತರ್ಕಬದ್ಧವೂ ಅಲ್ಲ, ಕಾನೂನುಬದ್ಧವೂ ಅಲ್ಲ. ಉತ್ತರ ಹೇಳಿ.

ಡಿಬ್ಬಿಯ ಪ್ರಶ್ನೆ ಕೇಳಿ ಸುಬ್ಬು ತಬ್ಬಿಬ್ಬಾಗುವುದಲ್ಲ, ಎದ್ದುಬಿದ್ದು ಓಡುವಂತಾಗಿಬಿಟ್ಟ. ತನ್ನೆಲ್ಲಾ ಅನುಭವವನ್ನು ಒರೆಗೆ ಹಚ್ಚಿದರೂ ಪ್ರೊಫೆಸರ್ ಸುಬ್ಬುವಿಗೆ ಉತ್ತರ ಹೊಳೆಯಲಿಲ್ಲ. ಹಣೆಯ ಮೇಲಿನ ಗೆರೆಗಳು ಆಳವಾದವು, ಬೆವರ ಹನಿಗಳು ಸಾಲುಗಟ್ಟಿದವು, ಕಂಠಕೌಪೀನ ಸಡಿಲವಾಯಿತು... ಸುಬ್ಬು ನಿರುತ್ತರ! [ಛೆ, ಪಕ್ಕದ್ಮನೆ ಹೆಂಗ್ಸು ಲವೀನಾ ಗಂಡಂಗೆ ಹೀಗ್ಮಾಡೋದಾ?]

ತಪ್ಪೊಪ್ಪಿಕೊಂಡ ಸುಬ್ಬು ಡಿಬ್ಬಿಯನ್ನು ಪಾಸ್ ಮಾಡಲು ನಿರ್ಧರಿಸಿದ. ಈ ಪ್ರಶ್ನೆಗೆ ಉತ್ತರವೇನೆಂದು ಕೇಳುವ ಧೈರ್ಯವೂ ಸುಬ್ಬುವಿನಲ್ಲಿ ಬರಲಿಲ್ಲ. ಆದರೆ, ಕಿಲಾಡಿ ಡಿಬ್ಬಿಯೇ ಉತ್ತರ ನೀಡಿದ.

ಡಿಬ್ಬಿ : "ಸರ್, ಐವತ್ತೊಂಬತ್ತು ವರ್ಷದವರಾದ ನೀವು ಇಪ್ಪತ್ತೆರಡರ ಹರೆಯದ ಚೆಲುವೆ ಲವೀನಾಳನ್ನು ಮದುವೆಯಾಗಿರುವುದು ಕಾನೂನುಬದ್ಧ ಹೌದು, ಆದರೆ ತರ್ಕಬದ್ಧವಲ್ಲ. ಇಪ್ಪತ್ತೆರಡರ ಬ್ಯೂಟಿ ಲವೀನಾ, ನಿಮ್ಮ ಹೆಂಡತಿಗೆ ಅಷ್ಟೇ ವಯಸ್ಸಿನ ಹ್ಯಾಂಡ್ಸಮ್ ಲವ್ವರ್ ಇದ್ದಾನೆ. ಇದು ತರ್ಕಬದ್ಧ ಹೌದು, ಆದರೆ ಕಾನೂನುಬದ್ಧವಲ್ಲ. ಕಡೆಯದಾಗಿ, ವಿಷಯ ಏನಪ್ಪ ಅಂದ್ರೆ, ನಿಮ್ಮ ಹೆಂಡತಿ ಲವೀನಾಳ ಪ್ರಿಯತಮನಿಗೆ ನೀವು ಪಾಸ್ ಮಾಡಿರುವುದು, ತರ್ಕಬದ್ಧವೂ ಅಲ್ಲ ಕಾನೂನುಬದ್ಧವೂ ಅಲ್ಲ! ಏನಂತೀರಿ?" [ಲವೀನಾ ಮುಸಿಮುಸಿ ನಗುತ್ತಿದ್ದಳು, ಯಾಕೋ?]

English summary
Jokes in Kannada : What is legal, but not logical, logical, but not legal, and neither logical, nor legal? Professor Subbu fails to ask this question asked by student Dibbi. What is the answer for this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X