ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರಣಾಂತಿಕ ನಿಪಾಹ್ ವೈರಸ್ ಮತ್ತು ನಕ್ಕು ನಗಿಸುವ ಜೋಕು!

|
Google Oneindia Kannada News

ನಮ್ಮವರ ಹಾಸ್ಯಪ್ರಜ್ಞೆಗೆ ಒಂದು ದೊಡ್ಡ ಸಲಾಂ. ಈಗಂತೂ ಟ್ರೋಲ್ ಹೈಕ್ಳದ್ದೇ ಕಾಲ. ಏನೇ ಟಾಪಿಕ್ ಇರ್ಲಿ ಅದು ಟ್ರೋಲ್ ಆದ್ರೇನೇ ಅದ್ರ ಆತ್ಮಕ್ಕೆ ಶಾಂತಿ ಸಿಕ್ಕಂಗೆ! ಹೀಗಿರುವಾಗ ಮಾರಣಾಂತಿಕ ಅಂತ ಹೆದರಿಸೋಕೆ ಬಂದ ನಿಪಾಹ್ ವೈರಸ್ ನ ಬಿಡೋಕಾಗುತ್ತಾ? ಅದರ ಮೇಲೂ ಟ್ರೋಲೋ ಟ್ರೋಲು!

ಕಳೆದೊಂದು ವಾರದಿಂದ ಮೊಬೈಲ್ ಫೋನ್ ಗಳನ್ನು ತನ್ನ ಹಾಗೇ 'ಹ್ಯಾಂಗ್' ಮಾಡಿಸಿಬಿಡುವ ಮಟ್ಟಿಗೆ ಬಾವಲಿಗಳ ಚಿತ್ರವೋ ಚಿತ್ರ!

ಚಿತ್ರದಲ್ಲಿ ನೋಡಿ ನಿಪಾಹ್ ವೈರಸ್ ಮುನ್ನೆಚ್ಚರಿಕೆ ಕ್ರಮಚಿತ್ರದಲ್ಲಿ ನೋಡಿ ನಿಪಾಹ್ ವೈರಸ್ ಮುನ್ನೆಚ್ಚರಿಕೆ ಕ್ರಮ

ಒಂದು ರೀತಿಯ ಬಾವಲಿಗಳಿಂದ ಬರುವ ಈ ಮಾರಣಾಂತಿ ಕಾಯಿಲೆ ಮೊದಲ ಬಾರಿಗೆ ಪತ್ತೆಯಾಗಿದ್ದು ಮಲೇಶಿಯಾದಲ್ಲಿ. ಯಾವುದೇ ರೀತಿಯ ಲಸಿಕೆಯಿಲ್ಲದೆ, ಇದುವರೆಗೂ ಚಿಕಿತ್ಸಸೆಯೂ ಇಲ್ಲದ ಈ ರೋಗಕ್ಕೆ ಭಾರತದಲ್ಲಿ ಇದುವರೆಗೂ ಬಲಿಯಾದವರ ಸಂಖ್ಯೆ 11 ಕ್ಕೂ ಹೆಚ್ಚು!

ಆ ಎಲ್ಲರ ಸಾವಿನ ದುಃಖವಿದ್ದರೂ, ನೋವಲ್ಲೂ ಹಾಸ್ಯಪ್ರಜ್ಞೆ ಹರಿಸುವ ಕೆಲವು ಜೋಕುಗಳು ನಿಮಗಾಗಿ ಇಲ್ಲಿವೆ.

 2018-ಬಾವಲಿ ಕಾಲ!

2018-ಬಾವಲಿ ಕಾಲ!

ಬಾಹುಬಲಿ-2015
ಕಬಾಲಿ-2016
ಹೆಬ್ಬುಲಿ-2017
ಬಾವಲಿ-2018

ಬಾಹುಬಲಿ, ಕಬಾಲಿ, ಹೆಬ್ಬುಲಿ ಕಾಲವೆಲ್ಲ ಮುಗೀತು ಇನ್ನೇನಿದ್ರೂ ಬಾವಲಿ ಕಾಲ ಎಂಬ ಜೋಕು ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿ ನಗೆ ಉಕ್ಕಿಸುತ್ತಿದೆ.

ನಿಪಾಹ್ ಜಸ್ಟ್ ಆಸ್ಕಿಂಗ್!

ನಿಪಾಹ್ ಜಸ್ಟ್ ಆಸ್ಕಿಂಗ್!

ಜಸ್ಟ್ ಆಸ್ಕಿಂಗ್ ಪ್ರಕಾಶ್ ರೈ ಅವರನ್ನು ಟ್ರೋಲ್ ಮಾಡುವವರು ಇಲ್ಲೂ ಬಿಟ್ಟಿಲ್ಲ! ಯಾವಾಗಲೋ ಒಮ್ಮೆ, 'ಕೇರಳದಲ್ಲಿ ಮಾತ್ರ ನೆಮ್ಮದಿಯಿಂದ ಉಸಿರಾಡಲು ಸಾಧ್ಯ' ಎಂದಿದ್ದ ಪ್ರಕಾಶ್ ರೈ ಹೇಳಿಕೆಯನ್ನೇ ಇಟ್ಟುಕೊಂಡು ಈಗ ಟ್ರೋಲ್ ಮಾಡುತ್ತಿರುವುದು ಹೀಗೆ!

ಆಪಲ್ ಫೋನ್ ಬಳಸೀರಾ, ಜೋಕೆ!

ಆಪಲ್ ಫೋನ್ ಬಳಸೀರಾ, ಜೋಕೆ!

"ಆಪಲ್ ಫೊನ್ ಬಳಸಬೇಡಿ. ಯಾಕಂದ್ರೆ ಆಪಲ್ ಸಿಂಬಲ್ ನಲ್ಲಿ ಕಚ್ಚಿರೋ ಆಪಲ್ ಇದ್ಯಲ್ಲ, ಅದ್ನ ಬಾವಲಿಗೇ ಕಚ್ಚಿದ್ದು ಅನ್ನೋ ಅನುಮಾನ ಇದ್ಯಂತೆ!" ಎಂಬ ಹಾಸ್ಯಚಟಾಕಿYಉ ಹರಿದಾಡುತ್ತಿದೆ.

ಪನಿಯೇ ನಿಪಾಹ್ ಆಯ್ತಾ?

ಪನಿಯೇ ನಿಪಾಹ್ ಆಯ್ತಾ?

"ಮಲಯಾಳದಲ್ಲಿ ಜ್ವರಕ್ಕೆ 'ಪನಿ' ಎಂದು ಹೆಸರು.
ಇದು ಹೊಸ ವೈರಸ್ ಆಗಿರುವುದರಿಂದ ಪನಿಯನ್ನೇ ಉಲ್ಟಾ ಮಾಡಿ 'ನಿಪಾಹ್' ಎಂದು ಹೆಸರಿಟ್ಟಿರಬಹುದೇ? ಆಗಿರಲೂಬಹುದು.

ಯಾಕೆಂದರೆ
ಬಾವಲಿ ತಲೆಕೆಳಗಾಗಿ ನೇತಾಡುತ್ತಿರುತ್ತಲ್ಲಾ ?"

English summary
Jokes on deadly Nipah virus: Many people in social media are busy in sharing jokes on deadly nipah virus. 12 people died in India due to this virus so far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X