ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ವರ್ಷದ ಹಿಂದೆ ಸತ್ತಿದ್ದ ಪತ್ನಿ ಮತ ಚಲಾಯಿಸೋಕೆ ಬಂದಿದ್ದಳು!

|
Google Oneindia Kannada News

ಇನ್ನೇನು ಚುನಾವಣೆಗೆ ಕೆಲವೇ ವಾರಗಳು ಬಾಕಿ ಇವೆ. ದಿನಾಂಕ ಘೋಷಣೆಯಾಗಿದೆ. ಇನ್ನೇನಿದ್ದರೂ ಮತದಾರರ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ, ಇಲ್ಲ ಎಂದು ಪರೀಕ್ಷಿಸುವುದೇ ಕೆಲಸ. ಪ್ರತಿ ವರ್ಷವೂ ಎಷ್ಟೋ ಜನರ ಹೆಸರು ಅಧಿಕಾರಿಗಳ ಅಚಾತುರ್ಯದಿಂದ ಮತದಾರರ ಪಟ್ಟಿಯಿಂದ ಮಾಯವಾಗುತ್ತದೆ, ಮತ್ತೆಷ್ಟು ಜನರ ಹೆಸರು ಎರಡೆರಡು ಕ್ಷೇತ್ರಗಳ ಪತದಾರರ ಪಟ್ಟಿಯಲ್ಲಿರುತ್ತದೆ. ನಕಲಿ ವೋಟರ್ ಐಡಿ ರಾದ್ಧಾಂತ, ಚುನಾವಣಾ ಅಕ್ರಮಗಳ ನಡುವಲ್ಲೇ ಚುನಾವಣೆಯ ಕುರಿತ ಸೂಪರ್ ಜೋಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೇಲ್ನೋಟಕ್ಕೆ ಹಾಸ್ಯ ಎನ್ನಿಸಿದರೂ, ಮತದಾರರ ಪಟ್ತಿಯ ಅವಾಂತರಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವನ್ನೂ ಈ ಜೋಕು ಸಾರಿಹೇಳುತ್ತದೆ.

ವಾರಾಂತ್ಯದಲ್ಲಿ ಮನಸ್ಸು ಹಗುರಾಗಿಸುವ, ನಕ್ಕು ನಗಿಸುವ ಜೋಕು!ವಾರಾಂತ್ಯದಲ್ಲಿ ಮನಸ್ಸು ಹಗುರಾಗಿಸುವ, ನಕ್ಕು ನಗಿಸುವ ಜೋಕು!

ಇಲ್ಲಿದೆ ನೋಡಿ ಜೋಕು...
***
ರಾಜಪ್ಪ ಮತ ಚಲಾವಣೆಗಾಗಿ ಬೂತ್ ಗೆ ಆಗಮಿಸಿ, ಮತದಾನ ಮಾಡಿದರು. ಬಳಿಕ ಬೂತ್ ಏಜಂಟ್ ಬಳಿ ತೆರಳಿ, 'ನನ್ನ ಹೆಂಡತಿ ಓಟ್ ಮಾಡಿ ಹೋದಳಾ? ಎಂದು ಪ್ರಶ್ನಿಸಿದರು.

ಬೂತ್ ಏಜಂಟ್ ಮತ ಚಲಾವಣೆ ಮಾಡಿದವರ ಪಟ್ಟಿಯನ್ನು ಪರಿಶೀಲಿಸಿ 'ಅಣ್ಣ, ಮೇಡಂ ಓಟು ಮಾಡಿ ಹೋದರು' ಎಂದರು.

ಬೇಸರದಿಂದ ರಾಜಣ್ಣ, ' ಛೇ ನಾನು ತಡವಾಗಿಬಿಟ್ಟೆ. ಸ್ವಲ್ಪ ಮುಂಚೆ ಬಂದಿದ್ರೆ ಅವಳನ್ನು ಒಮ್ಮೆ ನೋಡ್ಬಹುದಿತ್ತು'

ನನ್ ಮನೆಗೆ ಏನಾದ್ರೂ ಐಟಿ ರೈಡ್ ಆದ್ರೆ, ಅದರ ಕಥೆನೇ ಬೇರೆ!!ನನ್ ಮನೆಗೆ ಏನಾದ್ರೂ ಐಟಿ ರೈಡ್ ಆದ್ರೆ, ಅದರ ಕಥೆನೇ ಬೇರೆ!!

Dead Wife of a man who comes to cast her vote in every elections

ಏಜಂಟ್: ಅವರು ನಿಮ್ಮೊಂದಿಗೆ ಇಲ್ವಾ ಅಣ್ಣ? ನೀವೇನು ಬೇರಾಗಿದ್ದೀರಾ?

ರಾಜಣ್ಣ: ಅವಳು ಸತ್ತು 15 ವರ್ಷವಾಯಿತ್ತು. ಆದರೆಪ್ರತೀ ಚುನಾವಣೆಗೂ ಅವಳು ಓಟ್ ಮಾಡಲು ಬರುತ್ತಿದ್ದಾಳೆ... ಅದಿಕ್ಕೆ!

ಬೂತ್ ಏಜೆಂಟ್ ಸುಸ್ತೋ ಸುಸ್ತು!

English summary
Election Jokes: Dead Wife of a man who comes to cast her vote in every elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X