ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ರೂ ಕವನ ಬರೆಯಲು ಶುರು ಮಾಡಿದ್ರೆ ಗತಿಯೇನು?

By Prasad
|
Google Oneindia Kannada News

Kannada jokes for the day
ಮರಿತಿಮ್ಮ : ಯಪ್ಪೋಯ್, ಈ ವರ್ಷ ನಿರಕ್ಷತೆಯನ್ನು ಸರಕಾರ ಸಂಪೂರ್ಣ ಹೋಗಲಾಡಿಸುತ್ತದೆಯಂತೆ.

ತಿಮ್ಮ : ಹೌದೇನೋ, ಒಳ್ಳೆ ಸಮಾಚಾರ ಹಾಗಾದ್ರೆ.

ಮರಿತಿಮ್ಮ : ಏನ್ ಒಳ್ಳೆ ಸಮಾಚಾರಪ್ಪ?

ತಿಮ್ಮ : ಎಲ್ಲರೂ ಸಾಕ್ಷರರಾಗೋದು ಒಳ್ಳೇದಲ್ವೇನೋ?

ಮರಿತಿಮ್ಮ : ಸಾಕ್ಷರರಾಗೋದು ಒಳ್ಳೇದೆ. ಆದ್ರೆ, ಎಲ್ಲರೂ ಕವವ ಬರೆಯಲು ಶುರು ಮಾಡಿದರೇನು ಗತಿ?

***

ತಿಮ್ಮ ಒಂದು ಬಾರಿ ಪೇಟೆಯಲ್ಲಿ ನಡೆದು ಹೋಗುತ್ತಿದ್ದ. ಅಲ್ಲಿ ಆತನಿಗೆ ಅಚಾನಕ್ಕಾಗಿ ಡಾ. ಗುಂಡ ಸಿಕ್ಕ. ಲೋಕಾಭಿರಾಮ ಮಾತನಾಡುತ್ತ, ಗುಂಡ ತಿಮ್ಮನನ್ನು ಕೇಳಿದ.

ಗುಂಡ : ನಿಮ್ಮ ತಂದೆ ಈಗ ಹೇಗಿದ್ದಾರೆ ತಿಮ್ಮ?

ತಿಮ್ಮ :
ಏನು ಹೇಳೋದು ಡಾಕ್ಟ್ರೆ, ಕಾಯಿಲೆ ಇನ್ನೂ ಹಾಗೆಯೇ ಇದೆ.

ಗುಂಡ : ಕಾಯಿಲೆ ಇದ್ರೇನು, ಮಾತ್ರೆಗೀತ್ರೆ ನುಂಗುತ್ತ ಇದ್ದರಾಯಿತು.

ತಿಮ್ಮ :
ಅಯ್ಯೋ ಎಲ್ಲಾ ಆಯ್ತು ಡಾಕ್ಟ್ರೆ. ಎಷ್ಟೆ ಮಾತ್ರೆ ನುಂಗಿದ್ರೂ ಅವರು ಗುಣವಾಗ್ತಿಲ್ಲ, ಅವರ ಅವಸ್ಥೆ ನನ್ನಿಂದ ನೋಡೋಕಾಗ್ತಿಲ್ಲ. ಒಂದೊಂದು ಬಾರಿ ಅನಿಸತ್ತೆ, ಇಷ್ಟೊಂದು ಕಷ್ಟಪಡುವ ಬದಲು ಹೋಗಿಬಿಟ್ರೇನೆ ಒಳ್ಳೇದು ಅಂತ.

ಗುಂಡ : ಹಾಗಿದ್ರೆ ಕರ್ಕೊಂಡೇ ಬಂದ್ಬಿಡು ನನ್ನ ಬಳಿ!

***

ಯಾವ್ದೋ ವಿಷಯದ ಮೇಲೆ ಘನಗಂಭೀರ ಚರ್ಚೆ ನಡೆಯುತ್ತಿತ್ತು, ವೇದಿಕೆಯ ಮೇಲೆ. ವಿದ್ವಾಂಸರೊಬ್ಬರು ತಮ್ಮ ಸರತಿ ಬಂದ ಮೇಲೆ ಸಖತ್ ಕೊರೆಯಲು ಶುರು ಮಾಡಿದರು.

ಸ್ವಲ್ಪ ಸಮಯದ ಮೇಲೆ, ಕೊರೆತ ಹೆಚ್ಚಾಗಿ ತಾಳ್ಮೆ ಕಳೆದುಕೊಂಡ ತಿಮ್ಮ ತನ್ನ ಪಕ್ಕದವರ ಜೊತೆ ಏನೋ ಹರಟಲು ಶುರು ಮಾಡಿದ. ಅದು ಭಾಷಣಕಾರರಿಗೆ ಕಿರಿಕಿರಿಯಾಗಿ,

ಈ ಸಭೆಯಲ್ಲಿ ಮೂರ್ಖರೇ ಹೆಚ್ಚಿದ್ದಂತಿದೆ. ಮೊದಲು ಮೂರ್ಖರೇ ಮಾತನಾಡಲಿ ಎಂದು ತಿಮ್ಮನ ಕಡೆ ಕೈ ತೋರಿದರು.

ಮಾನ್ಯರೆ, ಮೂರ್ಖರೆ ಮೊದಲು ಮಾತನಾಡಲಿ ಎಂದು ಅಪ್ಪಣೆ ಕೊಡಿಸಿದ್ದೀರಿ. ಹೇಗಿದ್ರೂ ಶುರು ಮಾಡಿದ್ದೀರಿ, ತಾವೇ ಮುಂದುವರಿಸಿ ಭಾಷಣ ಮುಗಿಸಿರಿ ಎಂದು ಕುಳಿತುಬಿಟ್ಟ.

(ಬೀchiಯವರ ಬಡವರಿಗಾಗಿ ತಿಮ್ಮನ ತಲೆ ಪುಸ್ತಕದಿಂದ ಹೆಕ್ಕಿದ್ದು.)

English summary
Kannada jokes for the day. Literacy is good but total literacy is also not good, says son of Thimma. His logic is, what if all the literates become poets!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X