ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೀ, ನಿಮ್ಮ ರೇಸಿಂಗ್ ಕುದುರೆ ಫೋನ್ ಮಾಡಿದೆ!

By Prasad
|
Google Oneindia Kannada News

ಕೋಪದಿಂದ ಕುದಿಯುತ್ತಿದ್ದ ಪಮ್ಮಿ ಗಂಡ ದಾಮಿಯ ತಲೆಯ ಮೇಲೆ ಸೌಟಿನಿಂದ ಕುಟ್ಟಿ, 'ರೀ, ಯಾರ್ರೀ ಇವ್ಳು ಮಿಟಕಲಾಡಿ ರಾಗಿಣಿ? ಈ ಚೀಟಿಯಲ್ಲಿ ಆಕೆಯ ಹೆಸರು ಬರೆದಿತ್ತು.'

ದಾಮಿ : 'ಡಾರ್ಲಿಂಗ್, ಕೋಪ ಯಾಕೆ ಮಾಡ್ಕೋತಿಯಾ? ನಿನ್ನೆ ರೇಸಿಂಗಿಗೆ ಹೋಗಿದ್ದೆನಲ್ಲ, ಅಲ್ಲಿ ಪೋನಿ ಟೇಲ್... ಈ ಮೀನ್ ರೇಸಲ್ಲಿ ಗೆದ್ದ ಕುದುರೆಯ ಹೆಸರು.'

ಮರುದಿನ ಪಮ್ಮಿ ದಾಮಿಯ ತಲೆಯ ಮೇಲೆ ಸೌಟಿನಿಂದ ಮತ್ತೆ ಕುಟ್ಟುತ್ತಾಳೆ.

ದಾಮಿ : ಮತ್ಯಾಕೆ ಕುಟ್ಟಿದೆ ತಲೆಯ ಮೇಲೆ?

ಪಮ್ಮಿ : ರೀ, ನಿಮ್ಮ ರೇಸಿಂಗ್ ಕುದುರೆ ಫೋನ್ ಮಾಡಿದೆ!

***

ಗಂಡ ಹೆಂಡತಿಯಿಬ್ಬರೂ ಎರಡನೇ ಹನಿಮೂನಿಗೆಂದೆ ಹೋಟೆಲ್ ಮಧುಚಂದ್ರಕ್ಕೆ ಹೋಗುತ್ತಾರೆ. ಆಗ ಎದುರಾದ ಮಹಿಳೆಯೊಬ್ಬಳು 'ಹಲೋ' ಎಂದಳು.

'ರೀ, ಯಾರ್ರಿ ಅವಳು?' ಹೆಂಡತಿಗೆ ಭಾರೀ ದಿಗಿಲು.

'ಲೇ, ಮೊದಲೇ ನನ್ನ ತಲೆ ಕೆಟ್ಟಿದೆ. ಅವಳೂ ಇದೇ ಪ್ರಶ್ನೆ ಕೇಳ್ತಾಳಂತೆ ಹೆದರಿಬಿಟ್ಟಿದ್ದೆ. ನೀನೂ ಇದೇ ಪ್ರಶ್ನೆ ಕೇಳಿ ನನ್ನ ತಲೆ ಮತ್ತಷ್ಟು ಕೆಡಿಸಬೇಡ!

English summary
Kannada jokes for the day. Start the day with laughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X