ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿಪುರ ಸುಂದರಿ ಸರ್ದಾರ್ಜಿ ಹೆಂಡತಿ ವಿಮಾನ ಯಾನ

By Prasad
|
Google Oneindia Kannada News

ಸರ್ದಾರ್ಜಿ ಹೆಂಡತಿ ಅಮೆರಿಕಾಕ್ಕೆ ಹೋಗಬೇಕೆಂದು ವಿಮಾನ ಹತ್ತುತ್ತಾಳೆ. ಕಣ್ಣಿಗೆ ಕೂಲಿಂಗ್ ಗ್ಲಾಸ್, ಮುಖದ ತುಂಬ ಪೌಡರ್, ತುಟಿ ತುಂಬ ಕೆಂಪು ಲಿಪ್‌ಸ್ಟಿಕ್ ಬಳಿದುಕೊಂಡಿದ್ದ ಸರ್ದಾರ್ಜಿ ಹೆಂಡತಿ ವೈಯಾರದಿಂದ ನಡೆದುಕೊಂಡು ಬಂದು ಬಿಸಿನೆಸ್ ಕ್ಲಾಸ್ ಸೀಟಲ್ಲಿ ಹೋಗಿ ಕೂಡುತ್ತಾಳೆ.

ವಿಮಾನ ಪರಿಚಾರಕಿಗೆ ಯಾಕೋ ಡೌಟು ಬಂದು "ಮ್ಯಾಮ್, ನಿಮ್ಮ ಟಿಕೆಟ್ ತೋರಿಸ್ತೀರಾ" ಅಂತ ಕೇಳುತ್ತಾಳೆ. ಸರ್ದಾರ್ಜಿ ಹೆಂಡತಿ ವ್ಯಾನಿಟಿ ಬ್ಯಾಗಿನಿಂದ ಟಿಕೆಟ್ ತೆಗೆದು ತೋರಿಸುತ್ತಾಳೆ. ಪರಿಚಾರಕಿಯ ಅನುಮಾನಕ್ಕೆ ಸರಿಯಾಗಿ ಎಕಾನಮಿ ಕ್ಲಾಸಲ್ಲಿ ಕೂಡುವ ಬದಲಾಗಿ ಸರ್ದಾರ್ಜಿ ಹೆಂಡತಿ ಬಿಸಿನೆಸ್ ಕ್ಲಾಸ್ ಸೀಟಲ್ಲಿ ಕುಳಿತಿರುತ್ತಾಳೆ.

ಅದಕ್ಕೆ ಪರಿಚಾರಕಿ, "ಇದು ಎಕಾನಮಿ ಕ್ಲಾಸ್ ಟಿಕೆಟ್, ದಯವಿಟ್ಟು ನೀವು ಅಲ್ಲಿಯೇ ಕೂಡಬೇಕು" ಎಂದು ಸರ್ದಾರ್ಜಿ ಹೆಂಡತಿಯನ್ನು ಹೇಳಿತ್ತಾಳೆ.

"ಯಾಕೆ, ನಾನು ಎಷ್ಟೊಂದು ಚೆಂದವಾಗಿದ್ದೇನೆ. ನಾನು ಎಲ್ಲಿ ಬೇಕಾದರೂ ಕೂಡುತ್ತೇನೆ" ಎಂದು ಅಸಂಬದ್ಧವಾಗಿ ಉತ್ತರ ಕೊಡುತ್ತಾಳೆ ಸರ್ದಾರ್ಜಿ ಹೆಂಡತಿ. ಎಷ್ಟು ಸತಿ ಹೇಳಿದರೂ ಅದೇ ಉತ್ತರ. ಬೇಸತ್ತ ಪರಿಚಾರಕಿ ತನಗಿಂತ ಹಿರಿಯಳಾದ ಪರಿಚಾರಕಿಗೆ ಹೇಳುತ್ತಾಳೆ. ಆಗಲೂ ಅದೇ ಉತ್ತರ "ನಾನು ಸುಂದರಿ, ಎಲ್ಲಿ ಬೇಕಾದರೂ ಕೂಡುತ್ತೇನೆ!"

ಹಿರಿಯ ಪರಿಚಾರಕಿಗೆ ಏನು ಮಾಡಬೇಕೆಂದು ತಿಳಿಯದೆ ಸರ್ದಾರ್ಜಿ ಪೈಲಟ್‌ಗೆ ತಿಳಿಸುತ್ತಾಳೆ. ಪೈಲಟ್ "ಆಕೆ ಸರ್ದಾರ್ಜಿ ಹೆಂಡತಿನಾ?" ಅಂತ ಕೇಳುತ್ತಾನೆ. ಹೌದು ಅಂದಾಗ, ಸರಿ ನನಗೆ ಬಿಡಿ ನಾನು ಆಕೆಯನ್ನು ನಿಭಾಯಿಸುತ್ತೇನೆ ಎಂದು ಪೈಲಟ್ ಆಕೆಯ ಬಳಿ ಬರುತ್ತಾನೆ. ಗುಟ್ಟಾಗಿ ಆಕೆಯ ಕಿವಿಯಲ್ಲಿ ಪೈಲಟ್ ಏನೋ ಗುಸುಗುಸು ಅನ್ನುತ್ತಾನೆ.

ಸರ್ದಾರ್ಜಿ ಥಟಕ್ಕೆ ಬಿಸಿನೆಸ್ ಕ್ಲಾಸ್ ಸೀಟಿನಿಂದ ಎದ್ದು ಎಕಾನಮಿ ಕ್ಲಾಸ್ ಸೀಟಿಗೆ ಹೋಗಿ ಕೂಡುತ್ತಾಳೆ. ಇದನ್ನು ನೋಡಿದ ಎಲ್ಲರಿಗೂ ಆಶ್ಚರ್ಯ. ಹೇಗಾಯಿತೆಂದು ಪೈಲಟ್‌ನನ್ನು ಕೇಳುತ್ತಾಳೆ. ಆಗ ಪೈಲಟ್ ನಗುನಗುತ್ತ, "ವಿಮಾನದ ಮುಂದಿನ ಅರ್ಧ ಭಾಗ ಅಮೆರಿಕಕ್ಕೆ ಹೋಗುವುದಿಲ್ಲ" ಎಂದು ಹೇಳಿದೆ ಎನ್ನುತ್ತಾನೆ.

English summary
Sardarji jokes. One day wife of a sardarji plans to go to America and buys economy class ticket, but sits in business class seat. Flight steward asks her to sit in economy section and not on business section. The Sardarji's wife refused and says, I am beautiful and I can sit anywhere. Then how did pilot make her move to economy class?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X